Advertisement

ಸಚಿವರ ಆದೇಶ: ಹೆದ್ದಾರಿ ಹೊಂಡಗಳಿಗೆ ಮುಕ್ತಿ

12:48 PM Sep 01, 2018 | Team Udayavani |

ಬೆಳ್ತಂಗಡಿ: ಕನ್ಯಾಡಿಯಲ್ಲಿ ನಡೆಯಲಿರುವ ಧರ್ಮ ಸಂಸದ್‌ನ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕನ್ಯಾಡಿಯನ್ನು ಸಂಪರ್ಕಿಸುವ ಬಿ.ಸಿ. ರೋಡ್‌-ಉಜಿರೆ ಹೆದ್ದಾರಿಯ ಹೊಂಡಗಳಿಗೆ ಮುಕ್ತಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದು, ಪ್ರಸ್ತುತ ಹೊಂಡಗಳಿಗೆ ಜಲ್ಲಿ ಹಾಕಿ ಅದರ ಮೇಲೆ ವೆಟ್‌ಮಿಕ್ಸ್‌ ಹಾಕುವ ಕಾಮಗಾರಿ ನಡೆಯುತ್ತಿದೆ.

Advertisement

ಆ. 29ರಂದು ಸಚಿವರು ಧರ್ಮ ಸಂಸದ್‌ನ ಕುರಿತು ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದು, ಮಂಗಳೂರಿನಿಂದ ಆಗಮಿಸಿದ ಸಚಿವರಿಗೆ ಹೆದ್ದಾರಿ ಹೊಂಡಗಳ ದುಃಸ್ಥಿತಿಯ ಅರಿವಾಗಿತ್ತು. ಹೀಗಾಗಿ ಸಭೆಯ ಆರಂಭದಲ್ಲೇ ಹೆದ್ದಾರಿ ಇಲಾಖೆಯವರನ್ನು ಹುಡುಕಿದ್ದರು. ಆದರೆ ಅವರು ಸಭೆಗೆ ಬಾರದ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಹೊಂಡ ಮುಚ್ಚುವುದಕ್ಕೆ ಆದೇಶ ನೀಡಿದ್ದರು. 

ಜತೆಗೆ ಕಾಟಾಚಾರಕ್ಕೆ ಹೊಂಡ ಮುಚ್ಚಬಾರದು. ಕಾಂಕ್ರೀಟ್‌ ಮಿಕ್ಸ್‌ ಮೂಲಕ ಜಲ್ಲಿ ಹಾಕಬೇಕು ಎಂದು ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ಪ್ರಸ್ತುತ ಹೊಂಡ ಮುಚ್ಚುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಶುಕ್ರವಾರ ಬೆಳ್ತಂಗಡಿ ಪರಿಸರದಲ್ಲಿ ಹೊಂಡಕ್ಕೆ ವೆಟ್‌ಮಿಕ್ಸ್‌ ಹಾಕುವ ಕಾಮಗಾರಿ ನಡೆದಿದೆ. ಮಳೆಗಾಲ ಆರಂಭವಾದ ಬಳಿಕ ಹೆದ್ದಾರಿಯ ಹೊಂಡಗಳಿಗೆ ಇಲಾಖೆಯು ಹಲವು ಬಾರಿ ವೆಟ್‌ ಮಿಕ್ಸ್‌ ಹಾಕಿದ್ದರೂ ಮಳೆಯ ರಭಸಕ್ಕೆ ಒಂದೆರಡು ದಿನಗಳಲ್ಲೇ ಎದ್ದು ಹೋಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next