Advertisement

ಏಳು ಜನರಿಗೆ ಸಚಿವ ಸ್ಥಾನ ಖಚಿತ. ನಾಳೆ ಅಧಿಕೃತ ಘೋಷಣೆ: ಶ್ರೀರಾಮುಲು

07:08 PM Jan 11, 2021 | Team Udayavani |

ದಾವಣಗೆರೆ: ರಾಜ್ಯದಲ್ಲಿ ಒಟ್ಟು ಏಳು ಮಂದಿಗೆ ಸಚಿವ ಸ್ಥಾನ ದೊರಕಲಿದ್ದು , ಈ ಕುರಿತಾಗಿ  ನಾಳೆ ಅಧಿಕೃತ ಘೋಷಣೆಯಾಗುತ್ತದೆ ಎಂದು ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

Advertisement

ಸೋಮವಾರ(ಜನವರಿ 10) ದಾವಣಗೆರೆಯ ಜನಸೇವಕ ಸಮಾವೇಶದಲ್ಲಿ ಭಾಗವಹಿಸಿರುವ ಆವರು ಸಮಾವೇಶಕ್ಕೂ ಮುನ್ನ  ಮಾತನಾಡಿ, ಮುಖ್ಯಮಂತ್ರಿಯವರು ದೆಹಲಿಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಒಟ್ಟು ಏಳು ಜನರಿಗೆ ಸಚಿವ ಸ್ಥಾನ ನೀಡುವುದು ಖಚಿತವಾಗಿದ್ದು, ಇದರಲ್ಲಿ ವಲಸಿಗರಿಗೆ ಹಾಗೂ ಪಕ್ಷದ ಹಿರಿಯರಿಗೆ ಅವಕಾಶ ಸಿಗುತ್ತದೆ. ಈ ಕುರಿತಾದ ಅಧಿಕೃತ ಘೋಷಣೆ ನಾಳೆ ಹೊರಬೀಳುವ ಸಾಧ್ಯತೆಗಳಿವೆ  ಎಂದಿದ್ದಾರೆ.

ಇನ್ನು ಖಾತೆಗಳ ಬದಲಾವಣೆಯ ಕುರಿತಾಗಿ ಮಾತನಾಡಿರುವ ಶ್ರೀರಾಮುಲು ಸಚಿವ ಸಂಪುಟದಲ್ಲಿ ಯಾವುದೇ ಖಾತೆ ಬದಲಾವಣೆ ಇಲ್ಲ ಮತ್ತು  ಉಪಮುಖ್ಯಮಂತ್ರಿ ಸ್ಥಾನ ಕುರಿತು ಯೋಚಿಸಿ ನೋಡೊಣ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ಸಂಬಳದಲ್ಲಿ ಸ್ವಲ್ಪ ಕಡಿತ! ಏಪ್ರಿಲ್‌ನಿಂದ ಜಾರಿಗೆ?!

ಮುಖ್ಯಮಂತ್ರಿ ಯಡಿಯೂರಪ್ಪ ಭಾನುವಾರ (ಜನವರಿ 10)ರಂದು ದೆಹಲಿಗರ ತೆರಳಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರೊಂದಿಗೆ ಸುಮಾರು ಒಂದು ಗಂಟೆ ಚರ್ಚೆ ನಡೆಸಿದ್ದು, ಸಂಪುಟ ವಿಸ್ತರಣೆ, ಪಕ್ಷ ಸಂಘಟನೆ, ಉಪ ಚುನಾವಣೆಗಳ ಸಿದ್ಧತೆ ಸಂಬಂಧ ಮಾತುಕತೆ ನಡೆಸಿದ್ದರು.

Advertisement

ಭವಿಷ್ಯದಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ನಂತರದ ನಾಯಕತ್ವದ ಕುರಿತಂತೆಯೂ ಚರ್ಚೆ ನಡೆದಿದೆ ಎಂದು ಹೇಳ ಲಾಗಿದೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಅಥವಾ ಯಾವುದೇ ಬದಲಾವಣೆ, ಬೆಳವಣಿಗೆಗಳ ಬಗ್ಗೆ ಎಚ್ಚರಿಕೆ ಹೆಜ್ಜೆ ಇಡಲು ವರಿಷ್ಠರು ಮುಂದಾಗಿದ್ದಾರೆ. ಏನೇ ಇದ್ದರೂ, ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದು ಕೊಂಡೇ ತೀರ್ಮಾನಿಸಲು ವರಿಷ್ಠರು ಚಿಂತಿಸಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next