Advertisement

ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮರು: ಸಚಿವ ಸೋಮಣ್ಣ ಗುಡುಗು

03:09 PM Dec 20, 2021 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮರು. ಮಹಾರಾಷ್ಟದ ಮುಖ್ಯಮಂತ್ರಿ ಉದ್ವವ್ ಠಾಕ್ರೆ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ಬಿಡಬೇಕು. ರಾಷ್ಟ್ರೀಯತೆ ಭಾವ್ಯಕೈತೆಗೆ ಧಕ್ಕೆ ತರುವ ಪ್ರಯುತ್ನ ಮಾಡಬೇಡಿ ಎಂದು ಸಚಿವ ವಿ.ಸೋಮಣ್ಣ ಖಡಕ್ ಎಚ್ಚರಿಕೆ ನೀಡಿದರು

Advertisement

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾಷೆಗಳ ನಡುವೆ ಸ್ನೇಹ ಸಂಬಂದವಿರಬೇಕು, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಾರಾಷ್ಟ ಮುಖ್ಯಮಂತ್ರಿ ಉದ್ವವ್ ಠಾಕ್ರೆ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ರಾಷ್ಟ್ರೀಯತೆ, ಭಾವ್ಯಕೈತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಂಗೂಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿದವರ ಮೇಲೆ ನಮ್ಮ ಸರ್ಕಾರ ಉಗ್ರ ಕ್ರಮ ಕೈಗೊಳ್ಳಲಿದೆ ಎಂದರು.

ಇದನ್ನೂ ಓದಿ:ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣ: ಕನ್ನಡ ಪರ ಸಂಘಟನೆಯಿಂದ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ದಿಟ್ಟ ಕ್ರಮ, ದೂರದೃಷ್ಟಿ ಚಿಂತನೆಯಿಂದ ಕೋವಿಡ್-19 ಸಾಂಕ್ರಮಿಕ ರೋಗ ಹತೋಟಿಯಲ್ಲಿಡಲು ಕ್ರಮ ಕೈಗೊಂಡರು. ಜನರಿಗೆ ಮತ್ತು ರೋಗದ ಬಗ್ಗೆ ಉದಾಸೀನದಿಂದ ಸಾವಿರಾರು ಜನರು ಮೃತಪಟ್ಟರು. ಸಂಕಷ್ಟದಲ್ಲಿ ಇರುವ ಕುಟುಂಬಗಳಿಗೆ ಆಸರೆಯಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ 1.5ಲಕ್ಷ ಮತ್ತು ಎಪಿಎಲ್ ಕಾರ್ಡ್ ಕುಟುಂಬಕ್ಕೆ 50 ಸಾವಿರ ಸಹಾಯ ನೀಡಿ ನಿಮ್ಮಂದಿಗೆ ನಾವಿದ್ದೇನೆ ಎಂಬ ಆತ್ಮಸ್ಥೃರ್ಯ ತುಂಬುವ ಕೆಲಸ ಮಾಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next