Advertisement
ಬುಧವಾರ ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಲಿದೆ ಎಂಬುದನ್ನು ಎಚ್.ಡಿ.ಕುಮಾರಸ್ವಾಮಿಯವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಬಿಜೆಪಿ ಸರಕಾರ ಬಂದ ಅನಂತರದಲ್ಲಿ ಸಿಎಂ ಯಾರು ಆಗಬೇಕು ಎನ್ನುವುದನ್ನು ಪಕ್ಷ ತೀರ್ಮಾನಿಸಲಿದೆ. ಬ್ರಾಹ್ಮಣರು ಅಥವಾ ಯಾವುದೇ ಜಾತಿಯ ಹೆಸರಿನಲ್ಲಿ ಕೀಳಾಗಿ ಮಾತಾಡುವುದು ಅವರಿಗೆ ಶೋಭೆತರುವುದಲ್ಲ. ಅರ್ಹತೆ ಇದ್ದವರು ಮುಖ್ಯಮಂತ್ರಿ ಆಗುತ್ತಾರೆ. ಜಾತಿ, ಕುಟುಂಬ ಆಧಾರದಲ್ಲಿ ಸಿಎಂ ಆಗುವುದು ಜೆಡಿಎಸ್ ನಲ್ಲಿ ಮಾತ್ರ. ನಮ್ಮ ಪಕ್ಷದಲ್ಲಿ ಜಾತಿ, ಕುಟುಂಬದ ಆಧಾರವಲ್ಲ, ಪಕ್ಷನಿಷ್ಠೆ ಮತ್ತು ಅನುಭವ ಇದ್ದವರು ಸಿಎಂ ಆಗುತ್ತಾರೆ. ಯಾರದೋ ಮಗ, ಜಾತಿ ಎನ್ನುವುದರ ಕಾರಣಕ್ಕೆ ನಮ್ಮ ಪಕ್ಷದಲ್ಲಿ ಸಿಎಂ ಆಗುವುದೇ ಇಲ್ಲ ಎಂದರು.
Related Articles
Advertisement
ಎಸ್ಕಾಂಗಳು ಪ್ರತಿ ವರ್ಷ ಮುಂದಿನ ಯೋಜನೆ ಹಾಗೂ ಬಜೆಟ್ ಆಧಾರದಲ್ಲಿ ವಿದ್ಯುತ್ ದರದ ನಿಗದಿ ಹೀಗೆ ಮಾಡಬೇಕು ಎಂಬುದರ ಅಭಿಪ್ರಾಯವನ್ನು ಕೆಆರ್ಸಿ ಮುಂದೆ ಇಡಲಿದೆ. ಕೆಆರ್ಸಿ ಅದಲತ್ ಮೂಲಕ ಸಾರ್ವಜನಿಕರ ಮುಂದಿಟ್ಟು, ಅವರ ಅಭಿಪ್ರಾಯ ಪಡೆಯಲಿದೆ. ಎಸ್ಕಾಂ ಮತ್ತು ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಿ ಅನಂತರ ಕೆಆರ್ ಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಪ್ರತ್ಯೇಕ ರಾಜ್ಯ ಕೇಳಿಲ್ಲ:
ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ಕನ್ನಡ ಬಿಟ್ಟು ಬೇರ್ಯಾವುದೇ ಯೋಚನೆ ಮಾಡಲು ಸಾಧ್ಯವೇ ಇಲ್ಲ. ಕನ್ನಡದ ಎಲ್ಲ ಚಟುವಟಿಕೆ ಹಾಗೂ ಕನ್ನಡಿಗರ ಜತೆಗೆ ತುಳುನಾಡು ಅವಿನಾಭಾವ ಸಂಬಂಧ ಹೊಂದಿದೆ. ನಾವೇನು ಪ್ರತ್ಯೇಕ ತುಳುನಾಡು ಕೇಳುತ್ತಿಲ್ಲ ಮತ್ತು ಕೇಳಿಯೂ ಇಲ್ಲ. ತುಳು ಬಾಷೆಗೆ ಎರಡನೇ ಆದ್ಯತೆ ನೀಡುವಂತೆ ಕೇಳಿದ್ದೇವೆ. ಕನ್ನಡಕ್ಕೆ ಮೊದಲ ಆದ್ಯತೆ ಮತ್ತು ಪರಮೋಚ್ಛ ಸ್ಥಾನಮಾನ. ತುಳು ಕನ್ನಡದ್ದೇ ಇನ್ನೊಂದು ಭಾಗವಾಗಿರುವುದರಿಂದ ಎರಡನೇ ಆದ್ಯತೆ ಕೇಳಿದ್ದೇವೆ. ಬೇರೆ ರಾಜ್ಯಗಳಲ್ಲಿ ಮೊದಲ ಆದ್ಯತೆ ಭಾಷೆಯ ಜತೆಗೆ ಬೇರೆ ಬೇರೆ ಭಾಷೆಗೂ ಆದ್ಯತೆ ನೀಡಿದ್ದಾರೆ. ಹೀಗಾಗಿ ಇಲ್ಲಿಯೂ ತುಳು ಭಾಷೆಗೆ ಎರಡನೇ ಆದ್ಯತೆ ನೀಡುವಂತೆ ಅನೇಕರು ಮನವಿ ಸಲ್ಲಿಸಿದ್ದಾರೆ. ಇದರ ಸಾಧಕ-ಬಾಧಕ ಚರ್ಚೆಗೆ ಸಮಿತಿ ರಚನೆ ಮಾಡಲಾಗಿದೆ. ಸಮಿತಿ ವರದಿ ಆಧಾರದಲ್ಲಿ ಸರಕಾರ ಮುಂದೆ ಕ್ರಮ ತೆಗೆದುಕೊಳ್ಳಲಿದೆ ಎಂದರು.