Advertisement
ಪಾಲೋಳಿಯಲ್ಲಿ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇದ್ದರು. ಕಳೆದ ತಿಂಗಳು ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್‌ಮೀರಾ ಸಾಹೇಬ್ ಅವರು ಗ್ರಾಮಸ್ಥರ ಮನವಿಯೊಂದಿಗೆ ಸಚಿವ ಎಚ್.ಡಿ. ರೇವಣ್ಣ ಅವರನ್ನು ಭೇಟಿಯಾಗಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ್ದರು.
ಸೆ. 11ರಂದು ಪಾಲೋಳಿಗೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಅಂದಾಜು ಪಟ್ಟಿ ತಯಾರಿಸುವ ಸಲುವಾಗಿ ಸ್ಥಳ ಪರಿಶೀಲಿಸಿದ್ದೇವೆ. ಸೇತುವೆ, ಸಂಪರ್ಕ ರಸ್ತೆ ನಿರ್ಮಾಣಕ್ಕೆ 18 ಕೋಟಿ ರೂ. ಬೇಕಾಗಬಹುದು. ಅಂದಾಜುಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜಾರಾಮ್ ತಿಳಿಸಿದ್ದಾರೆ. ಸಹಾಯಕ ಎಂಜಿನಿಯರ್ ಪ್ರಮೋದ್ ಕುಮಾರ್, ಜಿ.ಪಂ. ಎಂಜಿನಿಯರ್ ಭರತ್, ಪ್ರಮುಖರಾದ ಸಯ್ಯದ್ ಮೀರಾ ಸಾಹೇಬ್, ರೋಯ್ ಅಬ್ರಹಾಂ, ಕಡಬ ಗ್ರಾ.ಪಂ. ಸದಸ್ಯರಾದ ಕೃಷ್ಣಪ್ಪ ಬೈಲಂಗಡಿ, ಸರೋಜಿನಿ ಎಸ್. ಆಚಾರ್, ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಸಾಂತಪ್ಪ ಗೌಡ ಪಿಜಕ್ಕಳ, ಕಾರ್ಯದರ್ಶಿ ಶ್ಯಾಮ್ ಥಾಮಸ್, ಉಪಾಧ್ಯಕ್ಷ ಜೋಸ್ ಕೇಂಜೂರು, ಖಜಾಂಚಿ ರವೀಂದ್ರ ಎಡಮಂಗಲ, ಸ್ಥಳೀಯರಾದ ಅರುಣ್ ಕುಮಾರ್, ಯತೀಂದ್ರ, ಸುಂದರ, ರಂಜೀವ್ ಪಿ.ಆರ್., ಸತೀಶ್, ನಾರಾಯಣ, ಮುರಳೀಧರ, ಹರೀಶ್, ಪುರುಷೋತ್ತಮ, ರಫೀಕ್, ಉಸ್ಮಾನ್, ಶ್ರೀನಿವಾಸ, ದಯಾನಂದ, ಮಧುಸೂದನ, ಪೂವಪ್ಪ ಉಪಸ್ಥಿತರಿದ್ದರು.
Related Articles
ಅಧಿಕಾರಿಗಳು ನೂಜಿಬಾಳ್ತಿಲ ಗ್ರಾಮವನ್ನು ಸಂಪರ್ಕಿಸುವ ಕಾಯರಡ್ಕ-ಪೇರಡ್ಕ ಹಾಗೂ ಕಲ್ಲುಗುಡ್ಡೆ-ಎಂಜಿರ ರಸ್ತೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅಂದಾಜು ಪಟ್ಟಿ ಸಲ್ಲಿಸಲು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯನ್ನು ಪರಿಶೀಲಿಸಿದರು. ಸೈಯದ್ ಮೀರಾ ಸಾಹೇಬ್, ಜೆಡಿಎಸ್ ಮುಖಂಡರಾದ ಸುಂದರ ಗೌಡ ಬಳ್ಳೇರಿ, ಇ.ಜಿ. ಜೋಸೆಫ್, ದಿಲ್ಫರ್ ಫಾರೂಕ್, ಹರಿಪ್ರಸಾದ್ ಎನ್ಕಾಜೆ ಹಾಜರಿದ್ದರು.
Advertisement