ಹಾಸನ : ಕರಾವಳಿಯನ್ನು ರಾಜ್ಯ ರಾಜಧಾನಿಯ ಜತೆಗೆ ಬೆಸೆಯುವ ಸಂಪರ್ಕ ಸೇತು ಶಿರಾಡಿ ಘಾಟಿಯ ಹೊಸ ಕಾಂಕ್ರೀಟ್ ರಸ್ತೆ ರವಿವಾರ ಉದ್ಘಾಟನೆಗೊಂಡಿದೆ.
ವಾಸ್ತು ಪ್ರಕಾರ
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ವಾಸ್ತು ಪ್ರಕಾರವೇ ರಿಬ್ಬನ್ ಕತ್ತರಿಸಿ ರಸ್ತೆ ಉದ್ಘಾಟಿಸಿದರು. ಪಶ್ಚಿಮಾಭಿಮುಖವಾಗಿ ನಿಂತು ರಿಬ್ಬನ್ ಕತ್ತರಿಸಲು ಅಧಿಕಾರಿಗಳು ವ್ಯವಸ್ಥೆ ಮಾಡಿಸಿದ್ದರು.
ವಾಸ್ತು ಪ್ರಕಾರ ಹೀಗೆ ಕತ್ತರಿಸುವುದು ಸರಿಯಲ್ಲ ಎಂದು ತಿಳಿದ ಸಚಿವ ರೇವಣ್ಣ ತನ್ನೊಂದಿದ್ದ ಸಚಿವ ಯು.ಟಿ.ಖಾದರ್ , ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಅಧಿಕಾರಿಗಳು ವಿರುದ್ದ ದಿಕ್ಕಿನತ್ತ ನಿಲ್ಲುವಂತೆ, ಅಂದರೆ ಪೂರ್ವಾಭಿಮುಖವಾಗಿ ನಿಂತು ಕತ್ತರಿಸಿದ್ದಾರೆ ಎಂದು ವರದಿಯಾಗಿದೆ.
ಕಾಮಗಾರಿ ಸಂಬಂಧ 6 ತಿಂಗಳಿಂದ ಈ ರಸ್ತೆ ಮುಚ್ಚಿತ್ತು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದ್ದು, ತಡೆಗೋಡೆ ಹಾಗೂ ರಸ್ತೆ ಅಂಚಿಗೆ ಮಣ್ಣು ಹಾಕುವ ಒಂದಷ್ಟು ಕೆಲಸ ಬಾಕಿ ಇದೆ.