Advertisement

ದಸರಾ ರಜೆ ಮಾರ್ಪಾಡಿಗೆ ಸಿಎಂಗೆ ಸಚಿವ ರಮಾನಾಥ ರೈ ಮನವಿ

06:50 AM Sep 19, 2017 | |

ಮಂಗಳೂರು: ಈ ಬಾರಿ ಶಾಲೆಗಳಿಗೆ ದಸರಾ ರಜೆ ಅ. 11ರಿಂದ 25ರ ವರೆಗೆ ಎಂದು ಸರಕಾರ ಈಗಾಗಲೇ ನಿಗದಿಗೊಳಿಸಿದೆ. ಆದರೆ ನವರಾತ್ರಿ,ದಸರಾ ಉತ್ಸವಗಳು ಸೆ. 21ರಿಂದ ಆರಂಭವಾಗಿ ಸೆ.30ರ ವರೆಗೆ ನಡೆಯುತ್ತವೆ. ಇದರಿಂದಾಗಿ ಅಕ್ಟೋಬರ್‌ನಲ್ಲಿ ರಜೆ ನೀಡಿದರೆ ಉದ್ದೇಶ ಸಾರ್ಥಕವಾಗುವುದಿಲ್ಲ. ಆದ್ದರಿಂದ ಉತ್ಸವಕ್ಕೆ ಅನುಕೂಲವಾಗುವಂತೆ ದಸರಾ ರಜೆ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಚಿವ ರಮಾನಾಥ ರೈ ಹೇಳಿದರು.

Advertisement

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾಕ್ಕೆ ರಜೆ ಮಾರ್ಪಡಿಸಿದಂತೆ ಕರಾವಳಿಗೂ ಅನ್ವಯಿಸಬೇಕು. ಸೆ. 21ರಿಂದ ಅ.5ರ ವರೆಗೆ ದಸರಾ ರಜೆ ನೀಡುವಂತೆ ದ.ಕ. ಜಿಲ್ಲಾಡಳಿತ ಕೂಡ ಸರಕಾರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಿದೆ. ಪರಿಶೀಲನೆಗೆ ಮುಖ್ಯಮಂತ್ರಿಯವರು ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. ತಾವೂ ಈ ಬಗ್ಗೆ ಅಧಿಕಾರಿಗಳು, ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಬೇಡಿಕೆ ಈಡೇರುವ ಭರವಸೆ ಇದೆ ಎಂದು ಸಚಿವ ರೈ ಹೇಳಿದರು.

ಈಗಾಗಲೇ ಸೆ. 21ರಿಂದ ಕೆಲವು ಶಾಲೆಗಳಲ್ಲಿ ಅರ್ಧ ವಾರ್ಷಿಕ ಪರೀಕ್ಷೆ ನಿಗದಿಯಾಗಿದೆ. ಆದ್ದರಿಂದ ಇನ್ನೆರಡು ದಿನಗಳೊಳಗೆ ಸರಕಾರದ ಖಚಿತ ನಿರ್ಧಾರ ಹೊರಬೀಳಲಿದೆ ಎಂದು ಸಚಿವ ರಮಾನಾಥ ರೈ ಹೇಳಿದರು.ಮೇಯರ್‌ ಕವಿತಾ ಸನಿಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next