ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021 ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಬೆಳಗ್ಗೆ ಚಾಲನೆ ನೀಡಿದರು.
ಆರಂಭದಲ್ಲಿ ವಾಯುಸೇನೆ, ಏರೋ ಇಂಡಿಯಾ 2021 ಹಾಗೂ ಭಾರತ ಧ್ವಜಗಳನ್ನು ಹೊತ್ತ ಮೂರು ಯುದ್ಧ ವಿಮಾನಗಳು ನಿಶಾನ್ ರಚನೆಯಲ್ಲಿ ಹಾರಾಟ ನಡೆಸಿ ಸ್ವಾಗತ ಕೋರಿದವು.
ಬಳಿಕ ಸಾಲಾಗಿ ಮೂರು ತೇಜಸ್ ಯುದ್ಧ ವಿಮಾನಗಳು ಭಾರೀ ಸದ್ದಿನೊಂದಿಗೆ ಬಾನಂಗಳಕ್ಕೆ ಹಾರಿದವು.
ಇದನ್ನೂ ಓದಿ:ಇನ್ಸ್‌ಪೆಕ್ಟರ್ ವಿಕ್ರಂ: ಪ್ರಜ್ವಲಿಸುತ್ತಿದೆ ಪವರ್‌ಪ್ಯಾಕ್ ಟ್ರೇಲರ್
10.30 ರಿಂದ 12 ಗಂಟೆವರೆಗೂ ವೈಮಾನಿಕ ಪ್ರದರ್ಶನದ ನಡೆಯಲಿದೆ. ಒಟ್ಟು 43 ವಿಮಾನಗಳು ಹಾರಾಟ ನಡೆಸಲಿವೆ.
ಏರೋ ಇಂಡಿಯಾ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ವರ್ಚುವಲ್ ಪ್ರದರ್ಶನವನ್ನು ವೀಕ್ಷಿಸಬಹುದು. ಇದೇ ಆ್ಯಪ್ ನಲ್ಲಿ ಪ್ರದರ್ಶನದ ಮೂರು ದಿನಗಳ ಎಲ್ಲಾ ಚಟುವಟಿಕೆಗಳು ಲಭ್ಯವಿರಲಿವೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.