ಚೆನ್ನೈ: ದೇವಸ್ಥಾನದಲ್ಲಿ ತಮಗೆ ಮತ್ತು ಕುಟುಂಬಕ್ಕೆ “ಅನ್ನದಾನಮ್’ ನಿರಾಕರಿಸಲಾಗಿದೆ ಎಂದು ಆರೋಪಿಸಿದ ಬುಡಕಟ್ಟು ಮಹಿಳೆಯೊಂದಿಗೇ ಕುಳಿತು ತಮಿಳುನಾಡಿನ ಮುಜರಾಯಿ ಸಚಿವ ಪಿ.ಕೆ. ಶೇಖರ್ ಬಾಬು ದೇವಸ್ಥಾನದಲ್ಲಿ ಪ್ರಸಾದ ಸೇವಿಸಿದ್ದಾರೆ.
ಕಂಚೀಪುರಂ ಥಲಸೈಯ್ಯನಾರ್ ದೇವಾಲಯಕ್ಕೆ ಹೋದಾಗ ನಾವು ಪರಿಶಿಷ್ಟ ಪಂಗಡಕ್ಕೆ ಸೇರಿದವಳು ಎಂಬ ಕಾರಣಕ್ಕಾಗಿ, ನಮಗೆ ಅವಮಾನ ಮಾಡಲಾಯಿತು.
ಅನ್ನದಾನ ಮಾಡದೇ, ನಮ್ಮ ಮೇಲೆ ಹಲ್ಲೆ ನಡೆಸಿ ಹೊರಗಟ್ಟಲಾಯಿತು ಎಂದು ಹೇಳುತ್ತಾ ಮಹಿಳೆ ಅಳುತ್ತಿದ್ದ ವಿಡಿಯೋ ರಾಜ್ಯಾದ್ಯಂತ ವೈರಲ್ ಆಗಿತ್ತು.
ಈ ವಿಚಾರ ತಿಳಿಯುತ್ತಿದ್ದಂತೆ, ಅದೇ ದೇವಸ್ಥಾನಕ್ಕೆ ಬಂದ ಸಚಿವರು, ಆ ಮಹಿಳೆಯನ್ನು ತಮ್ಮ ಪಕ್ಕದಲ್ಲೇ ಕೂರಿಸಿ, ಅನ್ನ ಪ್ರಸಾದವನ್ನು ಸ್ವೀಕರಿಸಿದ್ದಾರೆ.
ಇದನ್ನೂ ಓದಿ:ನೌಶೇರಾ ಸೆಕ್ಟರ್‌ನಲ್ಲಿ ನಿಗೂಢ ಸ್ಫೋಟ : ಸೇನಾಧಿಕಾರಿ, ಯೋಧ ಹುತಾತ್ಮ
ಜತೆಗೆ, ಎಲ್ಲರನ್ನೂ ಸಮಾನವಾಗಿ ಕಾಣುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಚಿವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.