ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಇನ್ಮುಂದೆ ಕಡ್ಡಾಯವಾಗಿ ಸರ್ಕಾರಿ ಬಸ್‌ಗಳಲ್ಲಿ ವಚನಕಾರರು, ದಾಸರು, ಖ್ಯಾತ ಸಾಹಿತಿಗಳು ಮತ್ತು ಕವಿಗಳ ವಾಣಿಗಳನ್ನು ಹಾಕಬೇಕು ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಆದೇಶಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ರಾಯಭಾರಿಗಳಾಗಿವೆ. ಆದ್ದರಿಂದ ಈ ಬಸ್‌ಗಳ ಒಳಗಡೆ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡುವ ಆಯ್ದ
ಸಾಲುಗಳನ್ನು ಹಾಕಬೇಕು ಎಂದು ಸಚಿವರು ಆದೇಶಿಸಿದ್ದಾರೆ. ಕವಿರಾಜಮಾರ್ಗದಿಂದ ಇದುವರೆಗಿನ ರಚಿತವಾಗಿರುವ ಯಾವುದೇ ಮಹನೀಯರ ಒಳ್ಳೆಯ ಸಂದೇಶಗಳನ್ನು ಹಾಕಬಹುದು ಎಂದು ತಿಳಿಸಿದ್ದಾರೆ.
ಆದರೆ, ಈಗಾಗಲೇ ಕೆಎಸ್‌ಆರ್‌ಟಿಸಿ ಸೇರಿ ನಾಲ್ಕೂ ಸಾರಿಗೆ ಸಂಸ್ಥೆಯ ಬಹುತೇಕ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಡಿ.ವಿ.ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಸೇರಿ ಹಲವು ಸಂದೇಶಗಳನ್ನು ಹಾಕಲಾಗಿದೆ. ಈಗ ಇದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.