Advertisement
ಬಿಲ್ಲವ ಅಸೋಸಿಯೇಶನ್ ಬೆಂಗಳೂರು ವತಿಯಿಂದ ಹುಳಿಮಾವು ಬಿಲ್ಲವ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ “ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಮತ್ತು ವಿದ್ಯಾರ್ಥಿ ವೇತನ ವಿತರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಸಮ ಸಮಾಜದ ನಿರ್ಮಾಣದ ಬಗ್ಗೆ ಹೋರಾಟ ನಡೆಸಿದ ಗುರುಗಳ ತತ್ವ ಸಂದೇಶಗಳನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಆಗಬೇಕು. ನಾರಾಯಣ ಗುರುಗಳು ಸಾರಿರುವ ಸಂದೇಶಗಳು ಸಾರ್ವಕಾಲಿಕವಾಗಿದ್ದು, ಅವುಗಳನ್ನು ನಮ್ಮ ಯುವ ಸಮುದಾಯಕ್ಕೆ ತಲುಪಿಸಲು ಗುರುಗಳ ಜೀವನ ಚರಿತ್ರೆಯನ್ನು ಕೃತಿ ಹೊರತಂದಿರುವುದಾಗಿ ಹೇಳಿದರು.
ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಎಂ. ವೇದಕುಮಾರ್ ಮಾತನಾಡಿ, ಪ್ರತಿ ವರ್ಷ ನಾರಾಯಣ ಗುರುಗಳ ಜಯಂತಿ ವೇಳೆ ಸಾಧಕ ವಿದ್ಯಾರ್ಥಿಗಳ ಜತೆಗೆ ಹಲವು ಕ್ಷೇತ್ರಗಳ ಸಾಧಕರನ್ನೂ ಅಸೋಸಿಯೇಶನ್ ಗೌರವಿಸುತ್ತಾ ಬಂದಿದೆ. ಜತೆಗೆ ತಂದೆ-ತಾಯಿ ಇಲ್ಲದ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣಕ್ಕಾಗಿ ದುಡಿಯುತ್ತಿದೆ. ಈಗಾಗಲೇ ದತ್ತು ಪಡೆದಿರುವ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪದವಿ ಪೂರೈಸುವ ಹಂತದಲ್ಲಿದ್ದಾರೆ. ಅಸೋಸಿಯೇಶನ್ ವತಿಯಿಂದ ಸಮಾಜದ ಬಡ ಮಕ್ಕಳಿಗಾಗಿ ವಸತಿ ಶಾಲೆ ತೆರೆಯಲಾಗಿದೆ. ಇದರ ಜತೆಗೆ ಹೆಣ್ಣು ಮಕ್ಕಳಿಗಾಗೂ ಕೂಡ ವಸತಿ ಶಾಲೆ ಈ ವರ್ಷ ಕಾರ್ಯಾರಂಭ ಮಾಡಿದೆ. ಮುಂದಿನ ದಿನಗಳಲ್ಲಿ ವೃದ್ಧಾಶ್ರಮ ಸ್ಥಾಪಿಸುವ ಆಲೋಚನೆಯೂ ಇದೆ ಎಂದರು.
ಡಾ| ಮಮತೇಶ್ ಕಡೂರು ಅವರ ಶ್ರೀನಾರಾಯಣ ಗುರುಗಳ ಕುರಿತ ಪುಸ್ತಕ “ದಿವ್ಯಚೇತನ’ವನ್ನು ಬಿಡುಗಡೆಗೊಳಿಸಲಾಯಿತು.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ| ಎಂ.ತಿಮ್ಮೇಗೌಡ, ಗೋವಿಂದ ಪೂಜಾರಿ, ಬಿಲ್ಲವ ಅಸೋಸಿಯೇಶನ್ ಪದಾಧಿಕಾರಿಗಳಾದ ಭಾಸ್ಕರ್ ಸಿ. ಅಮೀನ್, ಕೇಶವ ಪೂಜಾರಿ, ಉದಯಕುಮಾರ್, ಭಾಸ್ಕರ ಪೂಜಾರಿ, ಸಂಪತ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.