Advertisement

ಪಾತಕಿ ದಾವೂದ್ ಸಂಬಂಧಿ ಮದುವೆಯಲ್ಲಿ ಬಿಜೆಪಿ ಸಚಿವ, ಪೊಲೀಸರು ಭಾಗಿ!

04:03 PM May 25, 2017 | Team Udayavani |

ನಾಸಿಕ್: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಂಬಂಧಿ ಮದುವೆ ಸಮಾರಂಭದಲ್ಲಿ
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಆಪ್ತ ಸಚಿವ ಸೇರಿದಂತೆ ಹಲವು ಶಾಸಕರು ಹಾಗೂ 10 ಮಂದಿ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. 

Advertisement

ಸೋಮವಾರ ಮಹಾರಾಷ್ಟ್ರ ನಾಸಿಕ್ ನಲ್ಲಿ ಮೇ 19ರಂದು ದಾವೂದ್ ಇಬ್ರಾಹಿಂನ ತಂಗಿ ಮಗಳ ವಿವಾಹ ಕಾರ್ಯಕ್ರಮ ನಡೆದಿತ್ತು. ಈ ಸಮಾರಂಭದಲ್ಲಿ  ಮಹಾರಾಷ್ಟ್ರ ಶಿಕ್ಷಣ ಸಚಿವ, ಫಡ್ನವೀಸ್ ಆಪ್ತ ಗಿರೀಶ್ ಮಹಾಜನ್, ಬಿಜೆಪಿ ಶಾಸಕರಾದ ದೇವಯಾನಿ ಫರ್ನಾಂಡೆ, ಬಾಳಾಸಾಹೇಬ್ , ಸೀಮಾ ಹಿರಾಯ್ ಹಾಗೂ ನಾಸಿಕ್ ಮೇಯರ್ ರಂಜನಾ ಭಾನ್ಸಿ, ಉಪ ಮೇಯರ್ ಪ್ರಥಮೇಶ್ ಗಿಟೆ ಸೇರಿದಂತೆ ಸ್ಥಳೀಯ ಮುನ್ಸಿಪಲ್ ಕಾರ್ಪೋರೇಟರ್ಸ್ ಗಳು ಪಾಲ್ಗೊಂಡಿದ್ದರು.

ಅಷ್ಟೇ ಅಲ್ಲ ಒಬ್ಬ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಹಾಗೂ ಒಂಬತ್ತು ಮಂದಿ ಇನ್ಸ್ ಪೆಕ್ಟರ್ಸ್ಸ್ ಗಳು ದಾವೂದ್ ಸಂಬಂಧಿ ಮದುವೆಯಲ್ಲಿ ಭಾಗಿಯಾಗಿದ್ದರು. ಅತಿಥಿಗಳ ಪಟ್ಟಿಯಲ್ಲಿ ಪೊಲೀಸರ  ಹೆಸರು ಇದ್ದಿರುವ ನಿಟ್ಟಿನಲ್ಲಿ ನಾಸಿಕ್ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಸಿಂಘಾಲ್ ತನಿಖೆಗೆ ಆದೇಶ ನೀಡಿದ್ದಾರೆ.

ದಾವೂದ್ ಇಬ್ರಾಹಿಂನ ಹೆಂಡತಿ ಮತ್ತು ಮದುಮಗಳ ತಾಯಿ ಸಹೋದರಿಯರು ಎಂದು ಪೊಲೀಸ್ ಇಲಾಖೆ ಮೂಲಗಳು ಖಚಿತಪಡಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next