ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ 4ಜಿ ಸೇವೆಗಳನ್ನು ಶುರು ಮಾಡಿದೆ. ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮೊದಲ ಕರೆಯನ್ನು ಮಾಡಿದ್ದಾರೆ.
ಈ ಬಗ್ಗೆ ಅವರು ಟ್ವೀಟ್ ಮಾಡಿದ್ದು, “ಭಾರತೀಯ ತಂತ್ರಜ್ಞಾನವನ್ನು ಅವಲಂಬಿಸಿದ ಬಿಎಸ್‌ಎನ್‌ಎಲ್‌ನ 4ಜಿ ನೆಟ್‌ವರ್ಕ್‌ನಲ್ಲಿ ಮೊದಲನೇ ಕರೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನಿರೀಕ್ಷೆಯ ಆತ್ಮನಿರ್ಭರ ಭಾರತ ತಯಾರಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
ಸರ್ಕಾರಿ ದೂರಸಂಪರ್ಕ ಕಂಪನಿಯ 4ಜಿಗೆ ಟಿಸಿಎಸ್ ಕೈ ಜೋಡಿಸುವ ಸಾಧ್ಯತೆ ಇದೆ. ಮುಂದಿನ ಹಂತದಲ್ಲಿ 4ಜಿ ಸೇವೆ ಜಾರಿಯಾಗುವ ಹಂತದಲ್ಲಿ ಈ ಅಂಶ ಖಚಿತವಾಗಲಿದೆ.
ದೇಶದ ಹಲವು ಭಾಗಗಳಲ್ಲಿ ಬಿಎಸ್‌ಎನ್‌ಎಲ್ ಇಂಡಿಯನ್ 4ಜಿ ಪರಿಚಯಿಸಲಾಗಿದೆ. ಡಿ.31ರ ವರೆಗೆ ಗ್ರಾಹಕರಿಗೆ ಉಚಿತವಾಗಿ ಸಿಮ್ ಕಾರ್ಡ್ ನೀಡಲಾಗುತ್ತದೆ.
ಇದನ್ನೂ ಓದಿ:ಸ್ವಾಮಿ ವಿವೇಕಾನಂದರ ಕನಸು ನನಸು ಮಾಡುತ್ತಿರುವ ಮೋದಿ: ನಳಿನ್‍ಕುಮಾರ್ ಕಟೀಲ್