Advertisement

ಸಚಿವ ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹ

06:24 AM May 22, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಕೋಲಾರ ಜಿಲ್ಲೆಯ ಅಗ್ರಹಾರ ಕೆರೆಗೆ ಹರಿದಿರುವ ಎಚ್‌.ಎನ್‌.ವ್ಯಾಲಿ ಯೋಜನೆಯ ವೀಕ್ಷಣೆಗೆ ಆಗಮಿಸಿದ್ದ ಕಾನೂನು ಸಚಿವ ಮಾಧುಸ್ವಾಮಿಗೆ ಕೆರೆ ಒತ್ತುವರಿಯ ಬಗ್ಗೆ ಮನವಿ ಸಲ್ಲಿಸಲು ಹೋದ ರೈತ ಮಹಿಳೆಯ  ಮೇಲೆ ದರ್ಪ ತೋರಿಸಿ ಅಸಂವಿಧಾನಿಕ ಪದ ಬಳಕೆ ಮಾಡಿರುವುದು ಖಂಡನೀಯ ಎಂದು ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್‌ ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದ ಎದುರು ಗುರುವಾರ ಸಚಿವ ಮಾಧುಸ್ವಾಮಿ ರಾಜೀನಾಮೆಗೆ  ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಕಾನೂನು ಸಚಿವರಾಗಿ ದರ್ಪ ತೋರಿರುವುದು ಅವರಿಗೆ ಶೋಭೆ ತರುವುದಿಲ್ಲ. ಮಾಧುಸ್ವಾಮಿಯವರ ಮಾತುಗಳಿಂದ ಬಿಜೆಪಿ ಸಂಸ್ಕೃತಿಯ ಅಸಲಿ ಮುಖವಾಡ  ಮತ್ತೂಮ್ಮೆ ಹೊರಬಿದ್ದಿದೆ ಎಂದರು.

ಸಚಿವರ ಮಾತು ರೈತ ಸಮುದಾಯ ಹಾಗೂ ಮಹಿಳೆಯರಿಗೆ ಮಾಡಿದ ಅವಮಾನವಾಗಿದ್ದು ಈ ಕೂಡಲೇ ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.  ವಿಧಾನಸಭೆಯಲ್ಲಿ ತಾವೊ ಬ್ಬನೇ ಪ್ರಾಮಾಣಿಕ ಎನ್ನುವಂತೆ ಏರು ಧ್ವನಿಯಲ್ಲಿ ಅಬ್ಬರಿಸುವ ಮಾಧುಸ್ವಾಮಿಯವರೇ ಇದೇನಾ ನೀವು ರೈತ ಮಹಿಳೆಗೆ ನೀಡುವ ಗೌರವ ಎಂದು ಕಿಡಿ ಕಾರಿದರು. ಮಾಧುಸ್ವಾಮಿ ಅವರನ್ನು  ಮಂತ್ರಿಮಂಡಲದಿಂದ ವಜಾ ಮಾಡುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ  ನಾರಾಯಣಸ್ವಾಮಿ, ಎನ್‌ಎಸ್‌ಯುಐ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಕೃಷ್ಣ, ಮುಖಂಡರಾದ ಕುಬೇರ್‌ ಅಚ್ಚು, ನಾರಾಯಣಸ್ವಾಮಿ, ವೇಣುಗೋಪಾಲ, ವೆಂಕಟೇಶ್‌, ಅನಿಲ, ಮಹಮ್ಮದ್‌ ಹಮೀಮ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next