Advertisement
ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಜನಾಶೀರ್ವಾದ ಯಾತ್ರೆಗೂ ಆ ಜಿಲ್ಲೆ ಉಸ್ತುವಾರಿಯೂ ಆಗಿದ್ದ ಎಂ.ಕೃಷ್ಣಪ್ಪ ಗೈರು ಹಾಜರಾಗಿದ್ದರು. ಇದೀಗ ತಮ್ಮದೇ ಕ್ಷೇತ್ರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ರಾಹುಲ್ ಗಾಂಧಿ ಬಂದಾಗಲೂ “ಕೈ’ ಕೊಟ್ಟಿದ್ದಾರೆ. ಕೃಷ್ಣಪ್ಪ ಹಾಗೂಅವರ ಪುತ್ರ ಪ್ರಿಯಾ ಕೃಷ್ಣ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳಿಗೆ ಇದು ಮತ್ತಷ್ಟು ಪುಷ್ಠಿ ನೀಡಿದೆ.