Advertisement

ಸಚಿವ ಜಾರ್ಜ್‌ ರಾಜೀನಾಮೆ ನೀಡಲಿ: ಬಿಜೆಪಿ

11:44 AM Oct 28, 2017 | |

ಸ್ಟೇಟ್‌ಬ್ಯಾಂಕ್‌: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟ್‌ ಸೂಚನೆಯಂತೆ ರಾಜ್ಯದ ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್‌ ಮೇಲೆ ಸಿಬಿಐ ಎಫ್‌ಐಆರ್‌ ದಾಖಲಿಸಿರುವುದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ
ಎದುರು ಪ್ರತಿಭಟನೆ ನಡೆಸಿತು.

Advertisement

ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್‌, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ
ಹಾಗೂ ಮಾಜಿ ವಿಧಾನ ಪರಿಷತ್‌ ಸದಸ್ಯ ಕೆ. ಮೋನಪ್ಪ ಭಂಡಾರಿ, ಪಕ್ಷದ ನಾಯಕ ರವಿ ಶಂಕರ ಮಿಜಾರು ಅವರು ಪ್ರತಿಭಟನ ಸಭೆಯಲ್ಲಿ ಮಾತನಾಡಿದರು.

ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್‌ ಮನವಿ ಪತ್ರ ವಾಚಿಸಿದರು. ದಕ್ಷಿಣ ಮಂಡಲ ಸಮಿತಿ ಅಧ್ಯಕ್ಷ ವೇದವ್ಯಾಸ
ಕಾಮತ್‌ ಸ್ವಾಗತಿಸಿ, ಕಾರ್ಯಕ್ರಮನಿರ್ವಹಿಸಿದರು. 

ರಾಜ್ಯದಲ್ಲಿ ಹಗರಣಗಳ ಮೇಲೆ ಹಗರಣ, ಹತ್ಯೆಗಳ ಮೇಲೆ ಹತ್ಯೆ ಹಾಗೂ ಪ್ರತಿಭಟನೆಗಳ ಮೇಲೆ ಪ್ರತಿಭಟನೆ ನಡೆಯುತ್ತಿದ್ದರೂ ಸರಕಾರ ಕಿವುಡಾಗಿದೆ. ರಾಜ್ಯದಲ್ಲಿ ಏನೂ ಆಗಿಲ್ಲ ಎಂಬಂತೆ ನಟಿಸುತ್ತಿರುವ ಈ ಸರಕಾರ ಭಂಡ ಸರಕಾರ ಎಂದು ಸತ್ಯಜಿತ್‌ ಸುರತ್ಕಲ್‌ ಆರೋಪಿಸಿದರು. ಸಚಿವ ಜಾರ್ಜ್‌ ಅವರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ; ಅವರು ರಾಜೀನಾಮೆ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಹಾಗೂ ಇದರಿಂದ ಮುಂದೆ ಸರಕಾರವೇ ರಾಜೀನಾಮೆ ನೀಡುವ ಪ್ರಮೇಯ ಬರಬಹುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನಿಗೆ ತಲೆ ಬಾಗುವುದೇ ಆಗಿದ್ದಲ್ಲಿ ಕೂಡಲೇ ಸಚಿವ ಜಾರ್ಜ್‌ ಅವರ
ರಾಜೀನಾಮೆಯನ್ನು ಪಡೆಯಬೇಕು ಇಲ್ಲವೇ ಅವರನ್ನು ಸಂಪುಟದಿಂದ ಕಿತ್ತೂಗೆದು ಬಂಧಿಸಬೇಕೆಂದು ಹಾಗೂ
ಪಿಎಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಂತಿ ಮತ್ತು ಎ.ಎಂ.ಪ್ರಸಾದ್‌ ಅವರನ್ನು ಅಮಾನತು ಮಾಡಬೇಕೆಂದು
ಕೆ. ಮೋನಪ್ಪ ಭಂಡಾರಿ ಆಗ್ರಹಿಸಿದರು.

Advertisement

ಮೇಯರ್‌ ರಾಜೀನಾಮೆಗೆ ಆಗ್ರಹ
ಮೇಯರ್‌ ಕವಿತಾ ಸನಿಲ್‌ ಅವರು ತಮ್ಮ ವಾಸ್ತವ್ಯದ ಫ್ಲ್ಯಾಟ್ ನ ವಾಚ್‌ಮೆನ್‌ ನ ಪತ್ನಿ ಮತ್ತು ಆಕೆಯ ಪುತ್ರಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿರುವುದರಿಂದ ಅವರು ರಾಜೀನಾಮೆ ನೀಡಬೇಕು ಎಂದು
ಮೋನಪ್ಪ ಭಂಡಾರಿ ಆಗ್ರಹಿಸಿದರು. ರವಿಶಂಕರ ಮಿಜಾರು, ಬಿಜೆಪಿ ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ, ಮಾಜಿ ಮೇಯರ್‌ ರಜನಿ ದುಗ್ಗಣ, ಕಾರ್ಪೊರೇಟರ್‌ ಸುಧೀರ್‌ ಶೆಟ್ಟಿ ಕಣ್ಣೂರು ಮತ್ತಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next