Advertisement

ಐವತ್ತು ಸಾವಿರ ಕುಟುಂಬಗಳಿಗೆ ಉಚಿತ ಪಡಿತರ ವಿತರಣೆಗೆ ಸಚಿವ ಡಾ.ಕೆ.ಸುಧಾಕರ್ ಚಾಲನೆ

06:53 PM Apr 10, 2020 | keerthan |

ಚಿಕ್ಕಬಳ್ಳಾಪುರ: ರಾಜ್ಯ ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ತಮ್ಮ‌ ಸ್ವಕ್ಷೇತ್ರದಲ್ಲಿ ಕೋವಿಡ್-19 ಲಾಕ್ ಡೌನ್ ಹಿನ್ನಲೆಯಲ್ಲಿ ಐವತ್ತು ಸಾವಿರ ಬಡ ಕುಟುಂಬಗಳಿಗೆ‌ ಉಚಿತವಾಗಿ ‌ಆಹಾರ ಕಿಟ್ ವಿತರಣೆ ಮಾಡುತ್ತಿದ್ದಾರೆ.

Advertisement

ತಮ್ಮ ಶ್ರೀ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೋವಿಡ್-19 ನಿಂದಾಗಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಕ್ಷೇತ್ರದಾದ್ಯಂತ ನಿರ್ಗತಿಕರು, ಬಡ ಕಾರ್ಮಿಕರು, ಹಾಗೂ ಬಿ.ಪಿ.ಎಲ್ ಪಡಿತರದಾರರಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸುವ ಕಾರ್ಯಕ್ಕೆ ಪೆರೇಸಂದ್ರ ಹಾಗೂ ಅರೂರು ಗ್ರಾಮಗಳಲ್ಲಿ ಚಾಲನೆ ನೀಡಿದರು.

ಕ್ಷೇತ್ರದಾದ್ಯಂತ ಸುಮಾರು 50 ಸಾವಿರ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಟ್ರಸ್ಟ್ ಮುಖಾಂತರ ವಿತರಿಸಲಿದ್ದು, ಕಿಟ್ ಗಳು ಅಕ್ಕಿ, ಸಕ್ಕರೆ, ಬೇಳೆ, ಎಣ್ಣೆ, ಕಾರದಪುಡಿ, ಸಾಂಬಾರ್ ಪುಡಿ, ದನಿಯಾಪುಡಿ, ಹುಣಸೇಹಣ್ಣು ಇನ್ನಿತರ ಆಹಾರ ಪದಾರ್ಥಗಳನ್ನು ಒಳಗೊಂಡಿದೆ.

ನಗರ ವ್ಯಾಪ್ತಿಯಲ್ಲಿ ಸಾಂಕೇತಿಕವಾಗಿ ಆದಿಚುಂಚನಗಿರಿ ಮಠಾಧೀಶರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಅಮೃತ ಹಸ್ತದಿಂದ ಸಚಿವರು ಆಹಾರ ಕಿಟ್  ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next