ರಾಯಚೂರು: ಕನ್ನಡ ನಾಡು, ನುಡಿ, ಜಲದ ವಿಚಾರ ಬಂದಾಗ ನಾವು ಕೈ ಕೂರಲು ಕನ್ನಡಿಗರೇನು ಕೈಗೆ ಬಳೆ ತೊಟ್ಟು ಕೂತಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅನಗತ್ಯ ಹೇಳಿಕೆ ನೀಡುವುದನ್ನು ಬಿಡಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಎಚ್ಚರಿಸಿದರು.
ದೇವದುರ್ಗ ತಾಲೂಕಿನ ಗೂಗಲ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ನಾಡು ನುಡಿ ವಿಚಾರ ಬಂದಾಗ ನಾವು ಹೋರಾಟಕ್ಕೂ ಸಿದ್ಧ. ಎರಡು ಸಾವಿರ ವರ್ಷಗಳ ಹಳೇ ಭಾಷೆ ನಮ್ಮದು. ಮೊದಲ ಭಾಷೆ ಕನ್ನಡವೇ ವಿನಃ ಮರಾಠಿಯಲ್ಲ ಎಂದು ಎಚ್ಚರಿಸಿದರು.
ಇದನ್ನೂ ಓದಿ:ಇದೊಂದು ಸುಳ್ಳಿನ ಕಂತೆ..ರಾಜ್ಯಪಾಲರ ಭಾಷಣಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ
ಮರಾಠಿ ಮಾತನಾಡುವ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕಾದರೆ ಕನ್ನಡ ಮಾತನಾಡುವವರು ಇಡೀ ದೇಶಾದ್ಯಂತ ಇದ್ದಾರೆ. ಆ ಎಲ್ಲ ಪ್ರದೇಶ ನಮಗೆ ಕೊಡಿ ಎಂದು ಕೇಳಿದರೆ ಮೂರ್ಖತನ ಹೇಳಿಕೆಯಾಗುತ್ತಿದೆ. ಹಾಗೆ ಕೇಳಿದರೆ ನಮ್ಮನ್ನು ಮೂರ್ಖರು ಎನ್ನುತ್ತಾರೆ ಎಂದರು.
ಇದನ್ನೂ ಓದಿ: ಮರಾಠ ಸಮಾಜದವರು ಕರ್ನಾಟಕದಲ್ಲಿ ಖುಷಿಯಿಂದಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್
ಉದ್ಧವ್ ಠಾಕ್ರೆ ಅವರೇ ರಾಜಕೀಯ ಕಾರಣಗಳಿದ್ದರೆ ಕರ್ನಾಟಕವನ್ನು ಕೆಣಕುವ ಕೆಲಸ ಮಾಡದಿರಿ. ಎಲ್ಲೆಲ್ಲಿ ಗೊಂದಲ ಸೃಷ್ಟಿಸುತ್ತಿದ್ದಿರೋ ಅದೆಲ್ಲ ಕರ್ನಾಟಕದ ಅವಿಭಾಜ್ಯ ಅಂಗಗಳು. ಎಲ್ಲ ಭಾಷೆಗಳಿಗೂ ಸಂವಿಧಾನದಲ್ಲಿ ಸ್ಥಾನಮಾನವಿದೆ ಎಂದು ಸಚಿವ ಲಿಂಬಾವಳಿ ಹೇಳಿದರು.