Advertisement

ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ : ಸಚಿವ ಸಿಂಗ್‌

03:55 PM Feb 13, 2021 | Team Udayavani |

ಹೊಸಪೇಟೆ: ಕಾಂಗ್ರೆಸ್‌ ಪರಿಸ್ಥಿತಿ ಗೋವಿಂದಾ, ಬಳ್ಳಾರಿಯಲ್ಲೂ ಬರಲ್ಲ, ವಿಜಯನಗರದಲ್ಲಿ ಬರೊಲ್ಲ, ರಾಜ್ಯದಲ್ಲಿ ಬರೊಲ್ಲ, ಕೇಂದ್ರದಲ್ಲಿ ಬರೊಲ್ಲ ಎಂದು ಸಚಿವ ಆನಂದ ಸಿಂಗ್‌ ಲೇವಡಿ ಮಾಡಿದರು.

Advertisement

ವಿಜಯನಗರ ಜಿಲ್ಲೆ ಅಧಿಕೃತವಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ನಗರದ ಪಟೇಲ್‌ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿಯಿಂದ ಶುಕ್ರವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚಿಗೆ ಬಳ್ಳಾರಿ ಗ್ರಾಮೀಣ ಭಾಗದ ಶಾಸಕ ನಾಗೇಂದ್ರ ಅವರು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ವಿಜಯನಗರವನ್ನು ಬಳ್ಳಾರಿ ಸೇರಿಸಿಕೊಳ್ಳುವುದಾಗಿ ನೀಡಿದ ಹೇಳಿಕೆಗೆ ಟಾಂಗ್‌ ಕೊಟ್ಟರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿ ಕಾರಕ್ಕೆ ಬಂದರೆ ವಿಜಯನಗರ ಜಿಲ್ಲೆಯನ್ನು ಬಳ್ಳಾರಿಯಲ್ಲಿ ಸೇರಿಸುವ ಮಾತಗಳನ್ನಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ನನ್ನ ರಾಜಕೀಯ ಭವಿಷ್ಯ ಏನಾಗುತ್ತದೆ ಎಂದು ನಾನು ಹೆದರೋದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ನೀವು ಜಿಲ್ಲೆ ಘೋಷಣೆ ಮಾಡಿ ಎಂದು ಹೇಳಿದ್ದೆ. ಒಬ್ಬ ಆನಂದ ಸಿಂಗ್‌ ಹೋದ್ರೆ ಹೋಗಲಿ ಬಿಡಿ ಎಂದು ನಿರ್ಲಕ್ಷ್ಯ ಮಾಡಿದರು.

ರಾಜೀನಾಮೆ ನೀಡಿದ ಎಂಟು ದಿನಗಳವರಗೆ ಯಾರು ರಾಜೀನಾಮೆ ನೀಡಲ್ಲಿಲ್ಲ. ಕೊನೆಗೆ ಪಂಪಾ ವಿರೂಪಾಕ್ಷ 16 ಜನರನ್ನು ನನ್ನೊಂದಿಗೆ ಕಳುಹಿಸಿ ಸಮಿಶ್ರ ಸರ್ಕಾರ ಪಥನವಾಯಿತು ಎಂದು ಸಮರ್ಥಿಸಿಕೊಂಡರು.

ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರುವ ಮುನ್ನ ವಿಜಯನಗರ ಜಿಲ್ಲೆ ಬೇಡಿಕೆ ಇಟ್ಟಿದ್ದೆ, ಜಿಲ್ಲೆ ಬದಲು ನನಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿದರು. ಆದರೆ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದರು. ಸಮಿಶ್ರ ಸರ್ಕಾರದಲ್ಲಿ ವಿಜಯನಗರ ಜಿಲ್ಲೆ, ಏತ ನೀರಾವರಿ ಯೋಜನೆ ಬೇಡಿಕೆ ಇಟ್ಟಿದ್ದೆ. ಆದರೆ ಸಚಿವ ಸ್ಥಾನ ನೀಡುವುದಾಗಿ ಹೇಳಿದರು. ಮಂತ್ರಿಗಿರಿ ನೀಡಿ ನನ್ನನ್ನು ಕಟ್ಟಿ ಹಾಕುತ್ತಾರೆ ಎಂದು ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡೆ. ಇದೀಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ವಿಜಯನಗರ ಜಿಲ್ಲೆ ರಚನೆ ಮಾಡುವ ಮೂಲಕ ಈ ಭಾಗದ ಬಹುದಿನದ ಬೇಡಿಕೆ ಈಡೇರಿಸಿದರು ಎಂದು ಸ್ಮರಿಸಿದರು.

Advertisement

ಮಾಜಿ ಬುಡಾ ಅಧ್ಯಕ್ಷ ರಾಮಲಿಂಗಪ್ಪ, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಕವಿತಾ ಈಶ್ವರ ಸಿಂಗ್‌, ಕಟಿಗಿ ರಾಮಕೃಷ್ಣ, ಅಯ್ನಾಳಿ ತಿಮ್ಮಪ್ಪ, ವ್ಯಾಸನಕೇರಿ ಶ್ರೀನಿವಾಸ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next