Advertisement

ಗಬ್ಬೆದ್ದು ನಾರುತ್ತಿದೆ ಶೌಚಾಲಯ!

07:13 PM Oct 04, 2021 | Team Udayavani |

ಆರ್‌.ಬಸವರೆಡ್ಡಿ ಕರೂರು

Advertisement

ಸಿರುಗುಪ್ಪ: ನಗರದ ಮಿನಿವಿಧಾನಸೌಧದಲ್ಲಿರುವ ತಾಲೂಕು ಕಚೇರಿ ಮಹಡಿಯಲ್ಲಿರುವ ಶೌಚಾಲಯಗಳು ಗಬ್ಬೆದ್ದು ನಾರುತ್ತಿದ್ದು ಇಲ್ಲಿ ಕಾರ್ಯನಿರ್ವಹಿಸುವ ನೌಕರರು ತಮ್ಮ ದಿನನಿತ್ಯದ ಶೌಚ ಕಾರ್ಯಗಳನ್ನು ಮಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಹಶೀಲ್ದಾರ್‌ ಕಚೇರಿಯಲ್ಲಿ ಆಹಾರ, ಸರ್ವೇ, ಉಪಖಜಾನೆ, ಭೂ ದಾಖಲೆ, ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ನೂರಾರು ಸಿಬ್ಬಂದಿ ಬಳಕೆಗಾಗಿ ಮೇಲ್ಮಹಡಿಯಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಶೌಚಾಲಯಕ್ಕೆ ಬೇಕಾದ ನೀರಿನ ಸೌಕರ್ಯವಿಲ್ಲದೆ ಕಳೆದ 2 ವರ್ಷಗಳಿಂದಲೂ ಈ ಶೌಚಾಲಯಗಳನ್ನು ಬಳಕೆ ಮಾಡದೆ ಇರುವುದರಿಂದ ಈ ಶೌಚಾಲಯಗಳು ಗಬ್ಬು ನಾರುತ್ತಿದ್ದು ಒಳಗೆ ಕಾಲಿಟ್ಟರೆ ವಾಂತಿ ಬರುತ್ತದೆ ಎನ್ನುವ ಕಾರಣದಿಂದ ಇಲ್ಲಿನ ಬಹುತೇಕ ಪುರುಷ ನೌಕರರು ಕಚೇರಿ ಸುತ್ತಮುತ್ತಲು ಮೂತ್ರ ಮಾಡುತ್ತಿದ್ದಾರೆ.

ಆದರೆ ಮಹಿಳಾ ನೌಕರರು ಮಾತ್ರ ಕಚೇರಿ ಸಮೀಪದ ಬಸ್‌ ನಿಲ್ದಾಣದ ಶೌಚಾಲಯಕ್ಕೆ ಅಥವಾ ತಮ್ಮ ಮನೆಗೆ ತೆರಳುವ ಪರಿಸ್ಥಿತಿ ಇದೆ. ಶೌಚಾಲಯಗಳಲ್ಲಿ ನೀರಿನ ಸೌಲಭ್ಯ ಕಲ್ಪಿಸದೇ ಇರುವುದರಿಂದ ಇಲ್ಲಿ ಯಾವುದೇ ನೌಕರರು ಶೌಚಾಲಯದೊಳಗೆ ಕಾಲಿಡಲು ಆಗದಂತಹ ಹೊಲಸು ತುಂಬಿದ್ದು, ನೆಲದಲ್ಲಿ ಖಾಲಿ ಬಾಟಲ್‌ಗ‌ಳು, ರದ್ದಿ ಪೇಪರ್‌ಗಳು ಬಿದ್ದಿದ್ದು, ಅವು ಬಿದ್ದಲ್ಲಿಯೇ ಕೊಳೆತಿದ್ದು, ಹುಳು ಹುಪ್ಪಡಿಗಳ, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿವೆ. ಕಚೇರಿ ಮೇಲ್ಮಹಡಿಯಲ್ಲಿ ವೀಡಿಯೋ ಕಾನ್ಫರೆನ್ಸ್‌ ಹಾಲ್‌ ಇದ್ದು, ಇಲ್ಲಿ ಪ್ರತಿನಿತ್ಯಲೂ ಒಂದಲ್ಲ ಒಂದು ಇಲಾಖೆಯ ವೀಡಿಯೋ ಕಾನ್ಫರೆನ್ಸ್‌ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಇಲ್ಲಿಗೆ ಒಂದೊಂದು ಬಾರಿ ನೂರಕ್ಕಿಂತಲೂ ಹೆಚ್ಚು ನೌಕರರು ವೀಡಿಯೋ ಕಾನ್ಫ ರೆನ್ಸ್‌ ಹಾಲ್‌ನಲ್ಲಿ ಕುಳಿತುಕೊಳ್ಳುತ್ತಾರೆ. ಕೆಲವು ಬಾರಿ ದಿನವಿಡೀ ಕಾನ್ಫರೆನ್ಸ್‌ ನಡೆಯುತ್ತದೆ. ಆದರೆ ಕಾನ್ಫ ರೆನ್ಸ್‌ನಲ್ಲಿ ಭಾಗವಹಿಸುವವರು ಶೌಚಾಕಾರ್ಯಗಳನ್ನು ಮುಗಿಸಿಕೊಳ್ಳಲು ತಮ್ಮ ಕಚೇರಿಗಳಿಗೆ ಹೋಗುವುದು ಅನಿವಾರ್ಯವಾಗಿದೆ. ವೀಡಿಯೋ ಕಾನ್ಫರೆನ್ಸ್‌ಗೆ ಬರುವ ಬಹುತೇಕ ನೌಕರರು ಇಲ್ಲಿನ ಶೌಚಾಲಯದ ಅವ್ಯವಸ್ಥೆ ನೋಡಿ ಅದರೊಳಗೆ ಕಾಲಿಡಲು ಹಿಂಜರಿಯುತ್ತಿದ್ದು, ಅನಿವಾರ್ಯವಿದ್ದರೂ ಅದರೊಳಗೆ ಕಾಲಿಡದೆ ತಾಲೂಕು ಕಚೇರಿ ಆವರಣದೊಳಗೆ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆ ಇರುತ್ತದೆ.

ವೀಡಿಯೋ ಕಾನ್ಫರೆನ್ಸ್‌ಗೆ ಬಂದರೆ ಶೌಚಾಕಾರ್ಯವನ್ನು ಮೊದಲೇ ಮುಗಿಸಿಕೊಂಡು ಬರುತ್ತೇವೆ. ಇಲ್ಲಿರುವ ಶೌಚಾಲಯ ನೀರು ಕಾಣದೇ ಅಸ್ವತ್ಛತೆಯಿಂದ ಕೂಡಿದ್ದು ಒಳಗೆ ಕಾಲಿಡಲು ಸಾಧ್ಯವಿಲ್ಲ.

Advertisement

ನೌಕರ

ಮೇಲ್ಮಹಡಿಯಲ್ಲಿರುವ ಶೌಚಾಲಯ ಬಳಸಲು ಯೋಗ್ಯವಾಗುವಂತೆ ಸ್ವತ್ಛಗೊಳಿಸುವ ಕಾರ್ಯ ಮಾಡಿಸಲಾಗುತ್ತಿದೆ. ಶೌಚಾಲಯ ಬಳಕೆ ಮಾಡುವವರು ಸರಿಯಾಗಿ ನೀರು ಹಾಕಿ ಸ್ವತ್ಛವಾಗಿಟ್ಟುಕೊಂಡರೆ ಶೌಚಾಲಯಗಳು ಬಳಕೆಗೆ ಅನುಕೂಲವಾಗುತ್ತವೆ.

ಮಂಜುನಾಥಸ್ವಾಮಿ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next