ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿ ಸುವ ಸ್ತಬ್ಧಚಿತ್ರಗಳ ನಿರ್ಮಾಣದ ಸಿದ್ಧತಾ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲಿಸಿದರು. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ರಂಗಮಂದಿರ ಮಂಟಪದ ಎದುರಿನ ಮಳಿಗೆಯಲ್ಲಿ ನಿರ್ಮಿಸುತ್ತಿರುವ ಸ್ತಬ್ಧಚಿತ್ರ ಪರಿಶೀಲಿಸಿದರು.
ನಿರ್ಮಾಣದ ಕಾರ್ಯದಲ್ಲಿ ತೊಡ ಗಿದ್ದ ಕಲಾವಿದರ ಜತೆಗೆ ಸಮಾಲೋಚಿಸಿ ಮಾಹಿತಿ ಪಡೆದರು. ಈ ವೇಳೆ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಅವರು 6 ಸ್ತಬ್ಧಚಿತ್ರಗಳ ಬ್ಲೂಪ್ರಿಂಟ್ ಹಿಡಿದು ವಿವರಣೆ ಒದಗಿಸಿದರು. ಬಹು ವಸತಿ ಸಂಕೀರ್ಣ, ಕೊರೊನಾ ಮುಕ್ತ ಕರ್ನಾಟಕ, ಆನೆಬಂಡಿ, ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ, ಪರಿಸರ ಸಂರಕ್ಷಣೆ, ಸಮಗ್ರ ಕೃಷಿಯ ಸ್ತಬ್ಧಚಿತ್ರ ತಯಾರಾಗುವ ಕುರಿತು ಮಾಹಿತಿ ನೀಡಿದರು.
ತಾಲೀಮಿಗೆ ಸಜ್ಜು:ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ತೀರ್ಮಾನದಂತೆ ಸ್ತಬ್ಧಚಿತ್ರಗಳನ್ನು ಕಡಿಮೆ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಬಾರಿ 6 ಸ್ತಬ್ಧಚಿತ್ರ ಪಾಲ್ಗೊಳ್ಳಲಿವೆ. ಅ.13ರ ಸಂಜೆ ಹೊತ್ತಿಗೆ ಸಂಪೂರ್ಣ ಸಿದ್ಧವಾಗಲಿದೆ. ಕಲಾತಂಡ ಭಾಗವಹಿಸಲಿವೆ. ದಸರಾ ಮಹೋತ್ಸವದ ಎಲ್ಲ ಸಿದ್ಧತೆ ಮುಗಿಯುತ್ತಿವೆ. ತಾಲೀಮಿಗೆ ಆನೆಗಳು ಸಜ್ಜಾಗಿವೆ ಎಂದರು. ಸರಳ ದಸರಾ ಮಹೋತ್ಸವ ಆಚರಣೆಯಾಗಿದ್ದರಿಂದ ಅಧಿಕಾರೇತರ ಸದಸ್ಯರನ್ನು ರಚನೆ ಮಾಡದೆ ಅಧಿಕಾರಿಗಳು ನಿರ್ವಹಣೆ ಮಾಡಿದ್ದಾರೆ. ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಗಳು ಸುಲಲಿತವಾಗಿ ಜರುಗುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ;- ಶಿರ್ವ: ನೀರು ಪಾಲಾದ ಯುವಕನ ಶವ ಪತ್ತೆ
ಐಟಿ ದಾಳಿಗೂ-ಬಿಎಸ್‌ವೈಗೂ ಸಂಬಂಧವಿಲ್ಲ: ಐಟಿ ದಾಳಿಗೂ-ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವ ರಿಗೂ ಯಾವುದೇ ಸಂಬಂಧವಿಲ್ಲ. ಪ್ರತಿಪಕ್ಷಗಳು ಟೀಕೆ ಮಾಡ ಬೇಕೆಂಬ ಕಾರಣಕ್ಕಾಗಿ ಟೀಕಿಸುವ ಕೆಲಸದಲ್ಲಿ ತೊಡಗಿದ್ದಾರೆ. ಪ್ರತಿಪಕ್ಷದವರ ಮನೆಯ ಮೇಲೆ ದಾಳಿ ಮಾಡಿದಾಗ ರಾಜಕೀಯಪ್ರೇರಿತ ಎನ್ನುತ್ತಾರೆ. ಈಗ ಬೇರೆಯವರ ಮನೆಯಲ್ಲಿ ದಾಳಿ ಮಾಡಿದರೂ ರಾಜಕೀಯ ಬಣ್ಣ ಕಟ್ಟುತ್ತಾರೆ. ಐಟಿ ದಾಳಿ ಕಾನೂನಿನ ಪ್ರಕಾರ ನಡೆದಿದೆ. ಐಟಿಯವರು ಎಲ್ಲರ ಮನೆಯ ಮೇಲೂ ದಾಳಿ ನಡೆಸಲು ಹೋಗುತ್ತಾರೆಯೇ ಎಂದು ಪ್ರಶ್ನಿಸಿದರು.
ಸಿಂದಗಿ, ಹಾನಗಲ್ ಕ್ಷೇತ್ರದ ಉಪ ಚುನಾವಣೆಯ ಮೇಲೆ ಯಾವ ಪರಿಣಾಮ ಬೀರಲ್ಲ. ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ಸಿ.ಎಂ.ಉದಾಸಿ ಕುಟುಂಬಕ್ಕೆ ಟಿಕೆಟ್ ಕೊಡದೆ ಇರುವುದು ಹೈಕಮಾಂಡ್ ತೀರ್ಮಾನ. ಅದನ್ನು ಯಾರೂ ಪ್ರಶ್ನೆ ಮಾಡಲಾಗದು. ನೀವು ಮಾಡಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಅಧ್ಯಕ್ಷ ಎಂ.ಅಪ್ಪಣ್ಣ, ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿ ಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಎ.ಎಂ.ಯೋಗೀ ಶ್, ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ಇದ್ದರು.