Advertisement

Narendra Modi: “ದೇಶದ ಲಕ್ಷಾಂತರ ಹೆಣ್ಣುಮಕ್ಕಳು ಈಗ ಮನೆಗಳ ಮಾಲೀಕರು”: ಮೋದಿ

09:44 PM Sep 27, 2023 | Team Udayavani |

ವಡೋದರಾ: “ನನ್ನ ಹೆಸರಿನಲ್ಲಿ ಯಾವುದೇ ಮನೆ ಇಲ್ಲ. ಆದರೆ ಕೇಂದ್ರ ಸರ್ಕಾರದ ಯೋಜನೆಗಳ ಫ‌ಲವಾಗಿ ಈ ದೇಶದ ಲಕ್ಷಾಂತರ ಹೆಣ್ಣುಮಕ್ಕಳು ಮನೆಗಳ ಮಾಲೀಕರಾಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಎರಡು ದಿನಗಳ ಭೇಟಿಗಾಗಿ ಗುಜರಾತ್‌ಗೆ ಆಗಮಿಸಿರುವ ಅವರು, ಛೋಟೌಡೇಪುರ್‌ ಜಿಲ್ಲೆಯ ಬೊಡೇಲಿ ಪಟ್ಟಣದಲ್ಲಿ 5,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.

“ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಸ್ವಂತ ಮನೆಗಳನ್ನು ಹೊಂದಿ, ಬುಡಕಟ್ಟು, ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಕೋಟ್ಯಂತರ ಮಹಿಳೆಯರು ಈಗ ಲಕ್ಷಾಧೀಶ್ವರರಾಗಿದ್ದಾರೆ’ ಎಂದರು.

“ಕೇಂದ್ರ ಸರ್ಕಾರ ದೇಶಾದ್ಯಂತ ಜನರಿಗಾಗಿ ಒಟ್ಟು ನಾಲ್ಕು ಕೋಟಿ ಮನೆಗಳನ್ನು ನಿರ್ಮಿಸಿದೆ. ಬಡವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಅವರಿಗೆ ಗೌರವ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಜನರ ಅಗತ್ಯಗಳಿಗೆ ತಕ್ಕಂತೆ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮಹಿಳೆಯರ ಹೆಸರಿನಲ್ಲಿ ಈ ಮನೆಗಳ ನೋಂದಣಿ ಮಾಡಲಾಗುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಜಾತಿಗಳ ಹೆಸರಿನಲ್ಲಿ ಮಹಿಳೆಯರ ವಿಭಜನೆಗೆ ಯತ್ನ:
“ಕಳೆದ ಮೂರು ದಶಕಗಳಿಂದ ಮಹಿಳಾ ಮೀಸಲು ವಿಧೇಯಕವನ್ನುಜಾರಿಗೆ ತರದೆ ಪ್ರತಿಪಕ್ಷಗಳು ಅದನ್ನು ಮೂಲೆಗೆ ತಳ್ಳಿತ್ತು. ಇದೀಗ ಜಾತಿ ಮತ್ತು ಮತಗಳ ಆಧಾರದಲ್ಲಿ ಮಹಿಳೆಯರನ್ನು ವಿಭಜಿಸಲು ಪ್ರತಿಪಕ್ಷಗಳು ಮುಂದಾಗಿವೆ’ ಎಂದು ಆರೋಪಿಸಿದರು.

Advertisement

“ಸಂಸತ್‌ನಲ್ಲಿ ಮಹಿಳಾ ವಿಧೇಯಕ ಅಂಗೀಕಾರ ಆಗದಂತೆ ಇಷ್ಟು ವರ್ಷಗಳು ಪ್ರತಿಪಕ್ಷ ನಾಯಕರು “ಮ್ಯಾಚ್‌ ಫಿಕ್ಸಿಂಗ್‌’ನಲ್ಲಿ ತೊಡಗಿದ್ದರು. ಲೋಕಸಭೆಯಲ್ಲಿ ಅಂಗೀಕಾರದರೆ, ಅದನ್ನು ರಾಜ್ಯಸಭೆಯಲ್ಲಿ ಅಂಗೀಕಾರ ಆಗದಂತೆ ತಡೆಯುತ್ತಿದ್ದರು. ಇವರ ಬಗ್ಗೆ ಮಹಿಳೆಯರು ಜಾಗ್ರತೆ ವಹಿಸಬೇಕಿದೆ. ಬಿಜೆಪಿ ಸರ್ಕಾರ ಯಶಸ್ವಿಯಾಗಿ ಎರಡೂ ಕಡೆಗಳಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next