Advertisement
ಫೆಬ್ರವರಿ 1 ರ ಮಿಲಿಟರಿ ದಂಗೆಯ ಹಾಗೂ ರಾಜಕೀಯ ಪ್ರಕ್ಷುಬ್ಧತೆಯಿಂದ ಮ್ಯಾನ್ಮಾರ್ 6.4 ಮಿಲಿಯನ್ ನಷ್ಟು ಮಂದಿ ತೀವ್ರ ಹಸಿವಿನಿಂದ ಬಳಲುತ್ತಿರುವುದಾಗಿ ವರದಿ ತಿಳಿಸಿದೆ.
Related Articles
Advertisement
ಕಾಚಿನ್ ರಾಜ್ಯದ ಕೆಲವು ಟೌನ್ ಶಿಪ್ ಗಳಲ್ಲಿ ಅಕ್ಕಿ ಬೆಲೆ ಶೇಕಡಾ 43 ರಷ್ಟು ಮತ್ತು ಅಡುಗೆ ಎಣ್ಣೆಯಲ್ಲಿ ಶೇಕಡಾ 32 ರಷ್ಟು ಏರಿಕೆಯಾಗಿದೆ. ಇನ್ನು, ಇಂಧನ ಬೆಲೆ ದೇಶಾದ್ಯಂತ ಸುಮಾರು 30 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಲ್ಲದೇ, ಈ ಎಲ್ಲಾ ಸಮಸ್ಯೆಗಳಿಂದ ಮ್ಯಾನ್ಮಾರ್ ನಲ್ಲಿ ಮಿಲಿಟರಿ ದಂಗೆಯ ನಂತರದಲ್ಲಿ ಬಡತನದ ಸಮಸ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಫೆಬ್ರವರಿ 1 ರಂದು ಮ್ಯಾನ್ಮಾರ್ ನ ಸೈನ್ಯವು ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಗರಿಕ ಸರ್ಕಾರದಿಂದ ಅಧಿಕಾರವನ್ನು ವಶಪಡಿಸಿಕೊಂಡಿದೆ. ಮ್ಯಾನ್ಮಾರ್ ನಲ್ಲಿ ನಡೆದ ನಾಗರಿಕ ಅಸಹಕಾರ ಚಳುವಳಿ ಯಕಾರಣದಿಂದಾಗಿ ಸುಮಾರು 700 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮ್ಯಾನ್ಮಾರ್ ನಲ್ಲಿ ಸೃಷ್ಟಿಯಾದ ಈ ಬಿಕ್ಕಟ್ಟಿನ ಪರಿಣಾಮದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೂ ಕೂಡ ದೊಡ್ಡ ಮಟ್ಟದಲ್ಲಿ ಪರಿಣಾಮ ಉಂಟಾಗಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಸ್ಥಗಿತಗೊಳ್ಳವಂತಾಗಿದೆ, ಬ್ಯಾಂಕ್ ಗಳು ಅನೇಕ ಶಾಖೆಗಳನ್ನು ಸ್ಥಗಿತಗೊಳಿಸಿದೆ, ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಗ್ರಾಹಕರಿಗೆ ಹಣವನ್ನು ಹಿಂಪಡೆಯಲು ಸಾಧ್ಯವಾಗದಿರುವ ಪರಿಸ್ಥಿತಿ ಮ್ಯಾನ್ಮಾರ್ ನಲ್ಲಿ ಉಂಟಾಗಿದೆ.
ಒಟ್ಟಿನಲ್ಲಿ ಮಿಲಿಟರಿ ಆಡಳಿತದ ಕಾರಣದಿಂದಾಗಿ ಮ್ಯಾನ್ಮಾರ್ ನಲ್ಲಿ ಸಂಕಷ್ಟದ ಪರಿಸ್ಥಿತಿ ಉಂಟಾಗಿದ್ದು, ನಾಗರಿಕ ವ್ಯವಸ್ಥೆ ಪರಿತಪಿಸುತ್ತಿದೆ ಎಂಬುದಾಗಿ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇದನ್ನೂ ಓದಿ : ನೆನಪಿಡಿ… ನಿಮ್ಮ ಬದುಕು ನಿಮ್ಮನ್ನು ಚೆಂದಾಗಿ ಬದುಕಿಸುತ್ತದೆ..!