Advertisement

ರಾಜ್ಯದಲ್ಲಿ ಹೆಚ್ಚುತ್ತಿದೆ ಸಿರಿಧಾನ್ಯ ಬಿತ್ತನೆ ; ರೈತ ಸಿರಿ ಯೋಜನೆ, ಆರೋಗ್ಯ ಕಾಳಜಿ ಪ್ರಭಾವ

02:00 AM Sep 01, 2020 | Hari Prasad |

ಬೆಂಗಳೂರು: ಕೋವಿಡ್ 19ನಿಂದ ಉದ್ಯೋಗ ಕಳೆದುಕೊಂಡ ಯುವಜನರು ಗ್ರಾಮೀಣ ಪ್ರದೇಶಕ್ಕೆ ತೆರಳಿದ ಪರಿಣಾಮ ಬಿತ್ತನೆ ಪ್ರಮಾಣ ಹೆಚ್ಚಾಗುತ್ತಿದೆ. ಅದರಲ್ಲೂ ಸಿರಿಧಾನ್ಯ ಬಿತ್ತನೆ ಗಣನೀಯವಾಗಿ ಹೆಚ್ಚಿದೆ.

Advertisement

ರಾಜ್ಯ ಸರಕಾರವು 2017ರಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ‘ಸಿರಿಧಾನ್ಯ ನೀತಿ’ ಜಾರಿಗೆ ತಂದ ಪರಿಣಾಮ ಮತ್ತು ಕಳೆದ ವರ್ಷ ಜಾರಿಗೆ ತಂದಿರುವ ‘ರೈತ ಸಿರಿ’ ಯೋಜನೆಯಿಂದ ರಾಗಿ ಸಹಿತ ಸಿರಿಧಾನ್ಯ ಬಿತ್ತನೆ ಹೆಚ್ಚುತ್ತಿದೆ.

ಸಜ್ಜೆ, ನವಣೆ, ಅರ್ಕ, ಬರಗು, ಬಿತ್ತನೆ 5 ವರ್ಷಗಳಲ್ಲಿ 2 ಪಟ್ಟು ಹೆಚ್ಚಿದೆ.

ಲಕ್ಷ ಹೆಕ್ಟೇರ್‌ ಹೆಚ್ಚಳ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 1 ಲಕ್ಷ ಹೆ. ಪ್ರದೇಶದಲ್ಲಿ ಹೆಚ್ಚುವರಿಯಾಗಿ ಸಿರಿಧಾನ್ಯ ಬಿತ್ತನೆಯಾಗಿದೆ.

ಕಳೆದ ವರ್ಷ 18.26 ಲಕ್ಷ ಹೆಕ್ಟೇರ್‌ಗಳಲ್ಲಿ ಆಗಿದ್ದರೆ ಈ ವರ್ಷ ಇದು 19.54 ಲಕ್ಷ ಹೆಕ್ಟೇರ್‌ಗೇರಿದೆ. ಬಯಲು ಸೀಮೆಯ ಚಿತ್ರದುರ್ಗ, ತುಮಕೂರು, ಹಾವೇರಿ, ಬೆಳಗಾವಿ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಾಮರಾಜನಗರ, ರಾಯಚೂರು ಜಿಲ್ಲೆಗಳಲ್ಲಿ ಸಿರಿಧಾನ್ಯ ಬಿತ್ತನೆಗೆ ಹೆಚ್ಚಿನ ಬೇಡಿಕೆ ಇದೆ. ಆರೋಗ್ಯ ಕಾರಣಕ್ಕಾಗಿ ಗ್ರಾಹಕರಿಂದಲೂ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಿದೆ.

Advertisement

ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಸಿರಿಧಾನ್ಯ ಉತ್ಪನ್ನಗಳನ್ನು ಬಿಸಿಯೂಟ ಮುಂತಾದ ಕಾರ್ಯಕ್ರಮಗಳಡಿ ಬಳಸುವ ಚಿಂತನೆ ನಡೆಸಲಾಗಿದೆ.
– ಬಿ.ಸಿ. ಪಾಟೀಲ್‌, ಕೃಷಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next