Advertisement

ಹಾಲು ಮಾರುವ ಯುವಕನಿಂದ ಅಲೆಮಾರಿ ಜನರಿಗೆ ಹಾಲು ವಿತರಣೆ

01:36 PM Apr 18, 2020 | keerthan |

ಗಂಗಾವತಿ: ಕೋವಿಡ್-19 ರೋಗ ನಿಯಂತ್ರಣಕ್ಕೆ ಹೋರಾಡುವ ಕೋವಿಡ್ ಯೋಧರಿಗೆ ಹಲವು ಜನರು ಸಂಘ ಸಂಸ್ಥೆಯವರು ಉಪಹಾರ ಚಹಾ ಮಜ್ಜಿಗೆ ನೀಡುವ ಜತೆಗೆ ಆರತಿ ಎತ್ತಿ ಹೂಮಾಲೆ ಹಾಕಿ ಸನ್ಮಾನ ಮಾಡುತ್ತಿದ್ದಾರೆ. ಅದರಂತೆ ಕೇಸರಹಟ್ಟಿ ಗ್ರಾಮದ ಹಾಲು ಮಾರುವ ಯುವಕ ಬಸವರೆಡ್ಡಿ ಕೇಸರಟ್ಟಿ ಖಾಸಗಿ ಕಂಪನಿಯವರು ರೈತರ ಹಾಲು ಖರೀದಿಯನ್ನು ನಿಲ್ಲಿಸಿದ್ದನ್ನು ಗಮನಿಸಿ ಸ್ವಂತ ಖರ್ಚಿನಲ್ಲಿ ಪ್ರತಿದಿನ 60-100ಲೀಟರ್ ಹಾಲು ಖರೀದಿಸಿ ಕೇಸರಹಟ್ಟಿ, ಶರಣಬಸವೇಶ್ವರ ಕ್ಯಾಂಪಿನಲ್ಲಿರುವ ಬಡ ಮತ್ತು ಕೂಲಿ ಕಾರ್ಮಿಕರಿಗೆ ಉಚಿತವಾಗಿ ಬೆಳ್ಳಿಗ್ಗೆ ಹಾಲು ಹಂಚುವ ಕಾರ್ಯ ಮಾಡುತ್ತಿದ್ದಾನೆ.

Advertisement

ಉದಯವಾಣಿ ವೆಬ್ ಸುದ್ದಿಯಲ್ಲಿ ಗಂಗಾವತಿ ಅಲೆಮಾರಿ ಜನಾಂಗದವರಿಗೆ ಆಹಾರ ಪಡಿತರ ಭದ್ರತೆ ಕುರಿತು ಸುದ್ದಿ ಓದಿ‌ ಪ್ರೇರಣೆಗೊಂಡು ಶನಿವಾರ ಗಂಗಾವತಿ ಹಿರೇಜಂತಗಲ್ ರಸ್ತೆಯಲ್ಲಿರುವ 101ಅಲೆಮಾರಿ ಜನಾಂಗದವರ ಮನೆಮನೆಗೆ ತೆರಳಿ ಉಚಿತವಾಗಿ ಹಾಲು ಹಂಚಿದ್ದಾರೆ.

ಇಂತಹ ಪುಣ್ಯದ ಕೆಲಸ ಮಾಡಿದ ಬಸವರೆಡ್ಡಿ ಮತ್ತು ಮಂಜುನಾಥ ಸಂಕನಾಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next