Advertisement

ಹಾಲು ವ್ಯಾಪಾರವಾಗದೇ ಬಮೂಲ್‌ ಕಂಗಾಲು

11:15 AM May 01, 2021 | Team Udayavani |

ಬೆಂಗಳೂರು: ಹಾಲು ಉತ್ಪಾದನೆ ಅಧಿಕವಿದೆ. ಆದರೆ ಉತ್ಪಾದನೆ ಆಗುವ ಹಾಲೆಲ್ಲ ಮಾರಾಟವಾಗುತ್ತಿಲ್ಲ.ಇದು ಬೆಂಗಳೂರು ಸಹಕಾರ ಹಾಲು ಒಕ್ಕೂಟ ಮಂಡಳಿಯ ಕಥೆ ವ್ಯಥೆ.

Advertisement

ಬೆಂಗಳೂರು ಸಹಕಾರ ಹಾಲು ಒಕ್ಕೂಟ ಪ್ರತಿನಿತ್ಯ ಸುಮಾರು 10.5 ಲಕ್ಷ ಲೀಟರ್‌ ನಿಂದ 11 ಲಕ್ಷ ಲೀಟರ್‌ ವರೆಗೆ ಹಾಲು ಉತ್ಪಾದನೆ ಮಾಡುತ್ತದೆ. ಆದರೆ ಈಗ ಕರ್ಫ್ಯೂ ಸೇರಿದಂತೆ ಇನ್ನಿತರ ಕಾರಣದಿಂದಾಗಿ ಹಾಲು ಮಾರಾಟ 6.5 ಲಕ್ಷ ಲೀಟರ್‌ಗೆ ಇಳಿದಿದೆ. ಹೀಗಾಗಿ ಹಾಲು ಒಕ್ಕೂಟಕ್ಕೆ ದಿಕ್ಕು ತೋಚದಂತಾಗಿದೆ.

ಪ್ರತಿ ವರ್ಷ ಮೇ- ತಿಂಗಳಿಂದ ಡಿಸೆಂಬರ್‌ ವರೆಗೂ ಸುಮಾರು 16.5 ಲಕ್ಷದಿಂದ 17 ಲಕ್ಷ ಲೀಟರ್‌ ಹಾಲು ಉತ್ಪಾದನೆ ಆಗಲಿದೆ. ಈ ಅವಧಿಯಲ್ಲಿ ಹಸು ಕರು ಹಾಕಿ ಹಾಲು ಅಧಿಕವಾಗಿ ನೀಡುತ್ತವೆ. ಹಾಗೆಯೇ ಮಳೆ ಬೀಳುವ ದಿನಗಳಾಗಿರುವುದರಿಂದ ಹಸುವಿಗೆ ಹಸಿಮೇವು ಕೂಡ ದೊರೆಯಲಿದೆ. ಹೀಗಾಗಿಹೆಚ್ಚುವರಿಯಾಗಿ ಉತ್ಪಾನೆಯಾಗುವ ಸುಮಾರು 5ರಿಂದ 6 ಲಕ್ಷ ಲೀಟರ್‌ ಹಾಲನ್ನು ಸಂಗ್ರಹ ಮಾಡುವುದು ಹೇಗೆ ಎಂಬ ಆಲೋಚನೆಯಲ್ಲಿದೆ.

ಬೆಂಗಳೂರು ಸಹಕಾರ ಹಾಲು ಒಕ್ಕೂಟದಲ್ಲಿ ಸುಮಾರು 1.30 ಲಕ್ಷ ರೈತರು ಹಾಲು ಉತ್ಪಾದನೆ ಮಾಡುತ್ತಾರೆ. ಅವರೆಲ್ಲರ ಮೇಲೆ ಕೋವಿಡ್‌ಹಿನ್ನೆಲೆಯಲ್ಲಿ ಜಾರಿ ಆಗಿರುವ ಕರ್ಫ್ಯೂಯೂ ಆತಂಕಮೂಡಿಸಿದೆ. ಆದರೂ ಹೆಚ್ಚುವರಿಯಾಗಿ ಉತ್ಪಾದನೆ ಆಗುವ ಹಾಲನ್ನು ಪೌಡರ್‌ ಮಾಡುವ ಆಲೋಚನೆಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟವಿದೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಹೊಡೆತ: ಕಳೆದ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆದಾಗಬಮೂಲ್‌ ದೊಡ್ಡ ಪ್ರ ‌ಮಾಣದ ನಷ್ಟ ಅನುಭವಿಸಿತ್ತು. ಹಾಲನ್ನು ಖರೀದಿಸುವರಿಲ್ಲದೆ ತೊಂದರೆಅನುಭವಿಸಿತ್ತು. ಆ ವೇಳೆ ಹಾಲಿನ ಮಾರಾಟದ ಪ್ರಮಾಣ 7ಲಕ್ಷ ಲೀಟರ್‌ಗೆ ಇಳಿದಿತ್ತು ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹ ಮೂರ್ತಿ ಹೇಳಿದ್ದಾರೆ.

Advertisement

ಈ ಬಾರಿ ಕೂಡ ಕೋವಿಡ್‌ ಸೋಂಕನ್ನು ನಿಯಂತ್ರಣಕ್ಕೆ ತರಬೇಕು ಎಂಬ ಉದ್ದೇಶದಿಂದ ಸರ್ಕಾರಕರ್ಫ್ಯೂಯೂ ಜಾರಿ ಮಾಡಿದೆ. ಆ ಹಿನ್ನೆಲೆಯಲ್ಲಿ ಹಾಲು ಮಾರಾಟ ಇದೀಗ 6.5ಲಕ್ಷಕ್ಕೆ ಇಳಿದಿದೆ. ಒಕ್ಕೂಟ ಈಗ ಸುಮಾರು 16.5 ಲಕ್ಷ ಹಾಲನ್ನು ಉತ್ಪಾದಿಸುತ್ತಿದೆ. ಆದರೆಮಾರಾಟ ಮಾತ್ರ ಕಡಿಮೆ ಇದೆ. ಉಳಿಕೆ ಹಾಲನ್ನುಪೌಡರ್‌ ಮಾಡಲಾಗುವುದು ಎಂದು ಹೇಳಿದ್ದಾರೆ.

ಬಾಗಿಲು ಮುಚ್ಚಿಸಿದ ಹಿನ್ನೆಲೆಯಲ್ಲಿ ನಷ್ಟ: ಕೋವಿಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ನಂದಿನಿ ಹಾಲಿನ ಬೂತ್‌ ಅನ್ನು ಕೂಡ ಬೇಗನೆ ಮುಚ್ಚಿಸಿದರು. ಆಹಿನ್ನೆಲೆಯಲ್ಲಿ ಏಪ್ರಿಲ್‌ 29 ರಂದು ಹಾಲು ಮಾರಾಟದಪ್ರಮಾಣ 6.5 ಲಕ್ಷ ಲೀಟರ್‌ಗೆ ಬಂದು ತಲುಪಿದೆ.ಆದರೆ ಈಗ ಪಾಲಿಕೆ ಅಧಿಕಾರಿಗಳು ಬೆಳಗ್ಗೆ 6 ರಿಂದರಾತ್ರಿ 8ರ ವರೆಗೂ ಹಾಲು ಮಾರಾಟಕ್ಕೆ ಅವಕಾಶಕಲ್ಪಿಸಿರುವ ಹಿನ್ನೆಲೆಯಲ್ಲಿ ಈಗ 8 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿದೆ ಎಂದು ಬಮೂಲ್‌ ಅಧಿಕಾರಿಗಳು ಹೇಳಿದ್ದಾರೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಹಲವು ಕುಟುಂಬಗಳು ಊರು ಸೇರಿವೆ. ಆ ಹಿನ್ನೆಲೆಯಲ್ಲಿ ಹಾಲು ಡೀಲರ್ಸ್ ಗಳು ಅಧಿಕ ಪ್ರಮಾಣದಲ್ಲಿ ಹಾಲು ಮಾರಾಟವಾಗುವುದಿಲ್ಲ ಎಂದು ಹೇಳಿ ಕಡಿಮೆ ಹಾಲು ಖರೀದಿಸುತ್ತಿದ್ದರು. ಆ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಹಾಲಿನ ಅಭಾವ ಉಂಟಾಗಿತ್ತು. ಈಗ ಎಲ್ಲೆಡೆಗಳಲ್ಲೂ ಅಧಿಕ ಪ್ರಮಾಣದಲ್ಲಿ ‌ ಹಾಲಿನ ಉತ್ಪನ್ನ ದೊರೆಯುತ್ತಿದೆ ಎಂದು ತಿಳಿಸಿದ್ದಾರೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಕೂಡ ಮುಚ್ಚಿವೆ. ಹೋಟೆಲ್‌ ಗಳೆ ಸುಮಾರು 1.5ಲಕ್ಷ ಲೀಟರ್‌ ಹಾಲು ಖರೀದಿ ಮಾಡುತ್ತಿದ್ದವು. ಆದರೆ ಈಗ ಹೋಟೆಲ್‌ಗ‌ಳು ಬಂದ್‌ ಆಗಿರುವುದರಿಂದ ಬಮೂಲ್‌ಗ‌ೂ ಹೊಡೆತ ಬಿದ್ದಿದೆ. ನರಸಿಂಹ ಮೂರ್ತಿ, ಬಮೂಲ್‌ ಅಧ್ಯಕ್ಷ

 

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next