Advertisement

ಜಮ್ಮು ಕಾಶ್ಮೀರ: ಉಗ್ರರಿಂದ ಬ್ಯಾಂಕ್‌ ದರೋಡೆ; 3.29 ಲಕ್ಷ ಲೂಟಿ

04:53 PM May 18, 2018 | udayavani editorial |

ಶ್ರೀನಗರ : ಶಂಕಿತ ಭಯೋತ್ಪಾದಕರು ಇಂದು ಜಮ್ಮು ಕಾಶ್ಮೀರದ ಕುಲಗಾಂವ್‌ ಜಿಲ್ಲೆಯ ಬ್ಯಾಂಕ್‌ ಒಂದರ ಮೇಲೆ ದಾಳಿ ನಡೆಸಿ 3.29 ಲಕ್ಷ ರೂ. ದರೋಡೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಇಲ್ಲಿಂದ 60 ಕಿಮೀ. ದೂರದ ಕೈಮೋಹ್‌ ಪ್ರದೇಶದಲ್ಲಿನ ಜಮ್ಮು ಕಾಶ್ಮೀರ ಬ್ಯಾಂಕಿಗೆ ನುಗ್ಗಿದ ಶಸ್ತ್ರಧಾರಿ ಉಗ್ರರು ಅಧಿಕಾರಿಗಳಿಗೆ ಬಂದೂಕು ತೋರಿಸಿ ಬೆದರಿಸಿ 3.28 ಲಕ್ಷ ರೂ. ಲೂಟಿಗೈದರು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಭದ್ರತಾ ಪಡೆಗಳು ಬ್ಯಾಂಕ್‌ ಶಾಖಾ ಪ್ರದೇಶವನ್ನು ಸುತ್ತುವರಿದು ಉಗ್ರರನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next