Advertisement
ವಾಷಿಂಗ್ಟನ್‌ನಲ್ಲಿ ಅಮೆರಿಕದ ರಕ್ಷಣಾ ಸಚಿವ ಜೇಮ್ಸ್ ಮ್ಯಾಟಿಸ್ ಎಸ್-400 ಕ್ಷಿಪಣಿ ಖರೀದಿ ವಿಚಾರ ಪ್ರಮುಖವಾಗಿ ಚರ್ಚೆಗೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರ ಹೊರತಾಗಿಯೂ ಭಾರತ ಅದನ್ನು ಪ್ರಸ್ತಾಪಿಸಿ 2017ರಲ್ಲಿ ಅಮೆರಿಕ ಜಾರಿ ಮಾಡಿದ ರಷ್ಯಾದಿಂದ ಹೊಸತಾಗಿ ರಕ್ಷಣಾ ಒಪ್ಪಂದ ಮಾಡುವ ರಾಷ್ಟ್ರದ ಮೇಲೆ ದಿಗ್ಬಂಧನ ಹೇರುವ ನಿಯಮದಿಂದ ಭಾರತಕ್ಕೆ ವಿನಾಯಿತಿ ಕೊಡಲೇಬೇಕೆಂದು ಒತ್ತಾಯ ಮಾಡಲಿದೆ. ಇದರ ಜತೆಗೆ ನವೆಂಬರ್ ಬಳಿಕ ಇರಾನ್‌ನಿಂದ ಕಚ್ಚಾ ತೈಲ ಸೇರಿದಂತೆ ಯಾವುದೇ ವಹಿವಾಟು ಅದರ ಜತೆಗೆ ನಡೆಸಬಾರದು ಎಂದು ಅಮೆರಿಕ ತಾಕೀತು ಮಾಡಿರುವುದರಿಂದ ಅದೂ ಪ್ರಮುಖವಾಗಿ ಚರ್ಚೆಗೆ ಬರಲಿದೆ.
ಇಸ್ಲಾಮಾಬಾದ್‌ನಲ್ಲಿ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೊಂಪೊÂà ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್, ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಜತೆಗೆ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ಥಾನಕ್ಕೆ 2,130 ಕೋಟಿ ರೂ. ರಕ್ಷಣಾ ನೆರವು ರದ್ದು ಮಾಡಿದ್ದೇಕೆ ಎಂದು ವಿವರಿಸಿದರು. ಜತೆಗೆ ಅಮೆರಿಕ-ಪಾಕ್ ನಡುವೆ ಬಾಂಧವ್ಯ ವೃದ್ಧಿಗೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪಾಕ್ ಜತೆಗಿನ ಸಂಬಂಧ ಹದಗೆಟ್ಟಿದೆ. ಜನವರಿಯಲ್ಲಿ ಎಲ್ಲಾ ರೀತಿಯ ರಕ್ಷಣಾ ನೆರವನ್ನು ಪಾಕ್‌ಗೆ ರದ್ದು ಮಾಡಲಾಗಿತ್ತು. ಇಂದು ಪ್ರಧಾನಿ ಭೇಟಿ
ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಸಚಿವರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿಯಾಗಲಿದ್ದಾರೆ. ಮುಂದಿನ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಈ ಭೇಟಿ ಪ್ರಮುಖವಾದದ್ದಾಗಿದೆ. ಭಾರತ ಮತ್ತು ಅಮೆರಿಕ ಮಟ್ಟದಲ್ಲಿ ಇದೊಂದು ದೊಡ್ಡ ಮಟ್ಟದ ಸಭೆ ಇದಾಗಲಿದೆ. ಬ್ಯೂನಸ್ ಐರಿಸ್‌ನಲ್ಲಿ ನ.30-ಡಿ.1ರ ವರೆಗೆ ನಡೆಯುವ ಜಿ-20 ರಾಷ್ಟ್ರಗಳ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ- ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಾತುಕತೆ ನಡೆಯಲಿದೆ. ವಿದೇಶಾಂಗ ಸಚಿವ ಪೊಂಪ್ಯೂ ಇಸ್ಲಾಮಾಬಾದ್‌ಗೆ ತೆರಳಿ ನವದೆಹಲಿಗೆ ಆಗಮಿಸಿದ್ದಾರೆ. ಇನ್ನು ಅಮೆರಿಕ ರಕ್ಷಣಾ ಸಚಿವರು ನೇರವಾಗಿ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ.