ಹೊಸದಿಲ್ಲಿ: ಭಾರತೀಯ ವಾಯುಪಡೆಗೆ ಸೇರಿದ ಮಿಗ್ 21 ಯುದ್ದ ವಿಮಾನವು ಪಂಜಾಬ್ ನ ಮೋಗ ಬಳಿ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ ಒಂದು ಗಂಟೆಯ ವೇಳೆಗೆ ಈ ಘಟನೆ ನಡೆದಿದೆ.
ಮೋಗಾದ ಬಾಘಪುರಾನದ ಲಂಗಿಯಾನ ಖರ್ದ್ ಗ್ರಾಮದಲ್ಲಿ ಈ ಯುದ್ದ ವಿಮಾನ ಪತನವಾಗಿದೆ. ವಿಮಾನದ ಪೈಲಟ್ ಪತನಕ್ಕೂ ಮೊದಲೇ ಹೊರ ಎಸೆಯಲ್ಪಟ್ಟು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಐಎಎಫ್ ವಿಮಾನವು ದಿನನಿತ್ಯದ ತರಬೇತಿ ಹಂತದಲ್ಲಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂಓದಿ:ಭಾರತ-ಕಿವೀಸ್ ಟೆಸ್ಟ್ ವಿಶ್ವಕಪ್ ಫೈನಲ್ : 4 ಸಾವಿರ ಪ್ರೇಕ್ಷಕರಿಗೆ ಅನುಮತಿ
‘ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನವೊಂದು ಕಳೆದ ರಾತ್ರಿ ಪಂಜಾಬ್ ನ ಮೋಗಾ ಬಳಿ ಅಪಘಾತಕ್ಕೀಡಾಯಿತು. ಅಪಘಾತ ಸಂಭವಿಸಿದಾಗ ವಿಮಾನವು ವಾಡಿಕೆಯ ತರಬೇತಿಯಲ್ಲಿತ್ತು’ ಎಂದು ಐಎಎಫ್ ಅಧಿಕಾರಿಗಳು ಹೇಳಿದ್ದಾರೆ.