Advertisement

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

09:36 PM Oct 05, 2024 | Team Udayavani |

ಜೆರುಸಲೇಂ: ಉತ್ತರ ಲೆಬನಾನ್‌ನಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಮಾಸ್ ಅಧಿಕಾರಿ ಸಯೀದ್ ಅತಲ್ಲಾ ಅಲಿ ಮತ್ತು ಅವರ ಕುಟುಂಬದವರು ಸಾವನ್ನಪ್ಪಿದ್ದಾರೆ ಎಂದು ಉಗ್ರ ಸಂಘಟನೆ ಶನಿವಾರ(ಅ5) ತಿಳಿಸಿದೆ.

Advertisement

ಇಸ್ರೇಲ್ ವೈಮಾನಿಕ ದಾಳಿ ನಡೆಸಿ ಲೆಬನಾನ್ ಅನ್ನು ಸಿರಿಯಾದೊಂದಿಗೆ ಸಂಪರ್ಕಿಸುವ ಮುಖ್ಯ ಹೆದ್ದಾರಿಯನ್ನು ಕಡಿತಗೊಳಿಸಿದ ಒಂದು ದಿನದ ನಂತರ ಮತ್ತೊಂದು ದಾಳಿ ನಡೆಸಲಾಗಿದೆ. ಶುಕ್ರವಾರ ನಡೆಸಿದ ವಾಯು ದಾಳಿಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಎರಡು ಬೃಹತ್ ಕುಳಿಗಳು ನಿರ್ಮಾಣವಾಗಿದೆ.

ಹೆಜ್ಬುಲ್ಲಾ ಉಗ್ರರ ವಿರುದ್ಧ ಇಸ್ರೇಲ್ ಮಂಗಳವಾರ ಲೆಬನಾನ್‌ ಮೇಲೆ ನೆಲದ ಆಕ್ರಮಣವನ್ನು ಪ್ರಾರಂಭಿಸಿತ್ತು. ದಕ್ಷಿಣ ಲೆಬನಾನ್‌ನಲ್ಲಿ ನಡೆದ ಸಂಘರ್ಷದಲ್ಲಿ ತನ್ನ ಒಂಬತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಕ್ಷಿಪಣಿಗಳು, ಲಾಂಚ್‌ಪ್ಯಾಡ್‌ಗಳು, ವಾಚ್‌ಟವರ್‌ಗಳು ಮತ್ತು ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯಗಳನ್ನು ಧ್ವಂಸಗೊಳಿಸಿ, ದಕ್ಷಿಣ ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಮೂಲಸೌಕರ್ಯದ ವಿರುದ್ಧ ತನ್ನ ವಿಶೇಷ ಪಡೆಗಳು ನೆಲದ ಮೇಲೆ ದಾಳಿ ನಡೆಸುತ್ತಿವೆ ಎಂದು ಇಸ್ರೇಲಿ ಮಿಲಿಟರಿ ಶನಿವಾರ ತಿಳಿಸಿದೆ. ಇಸ್ರೇಲ್ ಗಡಿಯನ್ನು ಸಮೀಪಿಸಲು ಹೆಜ್ಬುಲ್ಲಾ ಬಳಸಿದ ಸುರಂಗಗಳನ್ನು ಸಹ ಪಡೆಗಳು ನಾಶಮಾಡಿವೆ ಎಂದು ಮಿಲಿಟರಿ ಹೇಳಿದೆ.

ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ಶನಿವಾರ ಬೆಳಗ್ಗೆ 12 ಇಸ್ರೇಲಿ ವೈಮಾನಿಕ ದಾಳಿಗಳು ನಡೆದಿವೆ, ಹೆಜ್ಬುಲ್ಲಾ ಸಮಾರಂಭಗಳನ್ನು ನಡೆಸಲು ಬಳಸುತ್ತಿದ್ದ ದೊಡ್ಡ ಸಭಾಂಗಣವನ್ನು ಭಾರೀ ಪ್ರಮಾಣದಲ್ಲಿ ಹಾನಿಗೊಳಿಸಿದೆ ಎಂದು ಲೆಬನಾನ್‌ನ ರಾಜ್ಯ ಸುದ್ದಿ ಸಂಸ್ಥೆ ತಿಳಿಸಿದೆ.

Advertisement

ಶನಿವಾರ ಬೆಳಗ್ಗೆ ಉತ್ತರ ಮತ್ತು ಮಧ್ಯ ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ತಿನ್ ವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ.

2023 ಅಕ್ಟೋಬರ್ 7 ರಂದು ಹಮಾಸ್‌ ಉಗ್ರರು ಗಡಿಯಾಚೆಗಿನ ಭೀಕರ ದಾಳಿ ನಡೆಸಿ 1,200 ಇಸ್ರೇಲಿಗಳನ್ನು ಹತ್ಯೆಗೈದು 250 ಮಂದಿಯನ್ನು ಒತ್ತೆಯಾಳಾಗಿ ತೆಗೆದುಕೊಂಡ ಮರುದಿನದಿಂದ ಇಸ್ರೇಲ್ ಪಡೆಗಳು ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಲೆಬನಾನ್ ಗಡಿಯಾದ್ಯಂತ ನಿರಂತರ ದಾಳಿ ನಡೆಸುತ್ತಿವೆ.

ಉಗ್ರಗಾಮಿಗಳಿಗೆ ಪ್ರತಿಕ್ರಿಯೆಯಾಗಿ ತನ್ನ ಪಡೆಗಳು ಶೀಘ್ರದಲ್ಲೇ ಭಾರೀ ಕಾರ್ಯಾಚರಣೆ ನಡೆಸಲಿವೆ ಎಂದು ಇಸ್ರೇಲಿ ಮಿಲಿಟರಿ ಶನಿವಾರ ಕೇಂದ್ರ ಗಾಜಾದ ಕೆಲವು ಭಾಗಗಳಲ್ಲಿ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ.

ಇಸ್ರೇಲ್-ಹಮಾಸ್ ಯುದ್ಧವು ಒಂದು ವರ್ಷದ ಗಡಿಯನ್ನು ತಲುಪುತ್ತಿದ್ದಂತೆ, 41,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಹತ್ಯೆಗೀಡಾಗಿದ್ದು, ಸತ್ತವರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. 2023 ಸೆಪ್ಟೆಂಬರ್ 23 ರಿಂದ ಲೆಬನಾನ್‌ನಲ್ಲಿ ಸುಮಾರು 2,000 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಸುಮಾರು 375,000 ಜನರು ಲೆಬನಾನ್‌ನಿಂದ ಸಿರಿಯಾಕ್ಕೆ ದಾಟಿದ್ದಾರೆ, ಇಸ್ರೇಲಿ ಬಾಂಬ್ ದಾಳಿಗೆ ಹೆದರಿ ಪಲಾಯನ ಮಾಡಿದ್ದಾರೆ ಎಂದು ಲೆಬನಾನಿನ ಅಧಿಕಾರಿಗಳು ತಿಳಿಸಿದ್ದಾರೆ.

ಶತ್ರುಗಳನ್ನು ತಡೆಯಬಹುದು : ಸಿರಿಯಾ
ಈ ವಾರದ ಆರಂಭದಲ್ಲಿ ಇಸ್ರೇಲ್‌ನ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿರುವುಕ್ಕೆ ಇರಾನ್ ಅನ್ನು ಸಿರಿಯಾ ಅಧ್ಯಕ್ಷ ಬಶರ್ ಅಸ್ಸಾದ್ ಶ್ಲಾಘಿಸಿದ್ದಾರೆ. ಇದು ಇರಾನ್ ಮತ್ತು ಅದರ ಮಿತ್ರರಾಷ್ಟ್ರಗಳು “ಶತ್ರುಗಳನ್ನು ತಡೆಯಬಹುದು” ಎಂದು ಇಸ್ರೇಲ್‌ಗೆ ನೀಡಿದ ಸಂದೇಶವಾಗಿದೆ ಎಂದಿದ್ದಾರೆ.

ಮಧ್ಯ ಸಿರಿಯಾದಲ್ಲಿ ಕಾರಿನ ಮೇಲೆ ಇಸ್ರೇಲ್ ಡ್ರೋನ್ ದಾಳಿ ನಡೆಸಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಸಿರಿಯನ್ ಸರ್ಕಾರದ ಪರ ಮಾಧ್ಯಮಗಳು ವರದಿ ಮಾಡುತ್ತಿವೆ.

ಲೆಬನಾನ್‌ನಿಂದ 97 ಜನರನ್ನು ಸ್ಥಳಾಂತರಿಸಿದ ದಕ್ಷಿಣ ಕೊರಿಯಾ

ಲೆಬನಾನ್‌ನಿಂದ 97 ಜನರನ್ನು ಸ್ಥಳಾಂತರಿಸುವ ಮಿಲಿಟರಿ ವಿಮಾನವು ಶನಿವಾರ ದಕ್ಷಿಣ ಕೊರಿಯಾವನ್ನು ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next