Advertisement

2047ರ ದೃಷ್ಟಿ, ಮಧ್ಯಮ ವರ್ಗಕ್ಕೆ ಪುಷ್ಟಿ

11:42 PM Feb 01, 2023 | Team Udayavani |

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕಳೆದ ವರ್ಷದ ಬಜೆಟ್‌ನಲ್ಲಿ ದೇಶದ ಸ್ವಾತಂತ್ರ್ಯದ ಶತಮಾನೋತ್ಸವಕ್ಕೆ ಪೂರಕವಾಗಿ ರೂಪಿಸಿದ ನೀಲನಕ್ಷೆಯ ಮೇಲೆ 2023-24ನೇ ಸಾಲಿನ ಬಜೆಟ್‌ ಮುಂದುವರಿದಿದೆ.

Advertisement

ತೆರಿಗೆದಾರರಿಗೆ ಈ ಬಜೆಟ್‌ನಲ್ಲಿ ಸಿಹಿ ಹೆಚ್ಚಿದೆ. ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಈ ಹಿಂದೆ 5 ಲ.ರೂ. ವರೆಗೂ ವಾರ್ಷಿಕ ಆದಾಯ ಹೊಂದಿದವರು 87ಎ ರಿಬೆಟ್‌ ಮೂಲಕ ಯಾವುದೇ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಆದರೆ ಈಗ ಆ ಸ್ಲಾéಬ್‌ ಅನ್ನು 7 ಲ.ರೂ. ವರೆಗೂ ಏರಿಸಲಾಗಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಈ ಸೌಲಭ್ಯ ಹೊಸ ತೆರಿಗೆ ಪದ್ಧತಿಯವರಿಗೆ ಮಾತ್ರ ಅನ್ವಯಿಸಲಿದೆ. ಅತ್ಯಧಿಕ ಸರ್ಚಾರ್ಜ್‌ ರೇಟ್‌ ಅನ್ನು ಶೇ.37ರಿಂದ ಶೇ.25ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಗರಿಷ್ಠ ತೆರಿಗೆ ದರ ಶೇ.42ರಿಂದ ಶೇ.39ಕ್ಕೆ ಇಳಿದಿದೆ. ಕಾರ್ಪೋರೇಟ್‌ ತೆರಿಗೆ ದರವನ್ನು ಹೊಸ ಉದ್ಯಮಿಗಳಿಗೆ ಶೇ.15ರಷ್ಟನ್ನು 2024ರ ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿದೆ. ವ್ಯಕ್ತಿಯೋರ್ವನ ವೈಯಕ್ತಿಕ ವಾರ್ಷಿಕ ಆದಾಯ 9 ಲ.ರೂ. ಇದ್ದಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಆತ ಕೇವಲ 45 ಸಾವಿರ ರೂ. ತೆರಿಗೆ ಪಾವತಿಸಬೇಕು. ಇದು ಆತನ ವಾರ್ಷಿಕ ಆದಾಯದ ಕೇವಲ ಶೇ.5ರಷ್ಟು ಪಾವತಿಸಿದಂತಾಗುತ್ತದೆ.

45.03 ಲಕ್ಷ ಕೋಟಿ ರೂ.ಗಳ ಬೃಹತ್‌ ಗಾತ್ರದ ಬಜೆಟ್‌ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಒತ್ತು ನೀಡಲಾಗಿದೆ. 15.43 ಲ.ಕೋ.ರೂ. ಅಂದಾಜು ಸಾಲ ಮತ್ತು ಇತರ ಜವಾಬ್ದಾರಿಗಳನ್ನು ಬಂಡವಾಳ ವೆಚ್ಚಕ್ಕಾಗಿ ಉಪಯೋಗಿಸುವುದರಿಂದ ಈ ಸಾಲವು ಆರ್ಥಿಕ ಬೆಳವಣಿಗೆಯ ವೇಗ ವರ್ಧಕಕ್ಕೆ ಸಹಕಾರಿಯಾಗುತ್ತದೆ. 2047ರ ವೇಳೆಗೆ ಸಮೃದ್ಧ ಭಾರತ ರೂಪಿಸಲು ಬಜೆಟ್‌ ಅಡಿಪಾಯವಾಗಲಿದೆ.

ಒಟ್ಟಾರೆಯಾಗಿ ಈ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಒಬಿಸಿ, ಮಹಿಳೆಯರು, ಹಿರಿಯ ನಾಗರಿಕರು ಹೀಗೆ ಎಲ್ಲ ವರ್ಗದವರಿಗೂ ಬಜೆಟ್‌ನಿಂದ ಅನುಕೂಲವಾಗಲಿದೆ. ಎಲ್ಲ ಕ್ಷೇತ್ರಗಳನ್ನು ಪರಿಗಣಿಸಲಾಗಿದೆ.

-ಲೋಕೇಶ್‌ ಶೆಟ್ಟಿ, ಅಧ್ಯಕ್ಷ, ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಉಡುಪಿ ಶಾಖೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next