Advertisement

Microsoft ತಲ್ಲಣಕ್ಕೆ ತೆರೆ: ವಿಮಾನಯಾನ ಸಹಜ ಸ್ಥಿತಿಗೆ

01:49 AM Jul 21, 2024 | Team Udayavani |

ಹೊಸದಿಲ್ಲಿ: ಮೈಕ್ರೋಸಾಫ್ಟ್ನಲ್ಲಿ ಉಂಟಾದ ಕ್ರೌಡ್‌ಸ್ಟ್ರೈಕ್‌ ಅಪ್‌ಡೇಟ್‌ನಿಂದಾಗಿ ವಿಮಾನಯಾನ ಸೇವೆಗಳಲ್ಲಿ ಉಂಟಾಗಿದ್ದ ಸಮಸ್ಯೆ ಕೊಂಚ ಮಟ್ಟಿಗೆ ಸುಧಾರಿ ಸಿದ್ದು, ಸಹಜಸ್ಥಿತಿಗೆ ಮರಳುತ್ತಿದೆ ಎಂದು ಕೇಂದ್ರ ಸರಕಾರ ಶನಿವಾರ ತಿಳಿಸಿದೆ.

Advertisement

ಹೊಸದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾ ಣದಲ್ಲಿ ಸಮಸ್ಯೆ ಮುಂದುವರಿದಿದ್ದು, ಟರ್ಮಿನಲ್‌ 3ರಲ್ಲಿ ಮಾತ್ರ ಬದಲಾವಣೆ ಕಂಡುಬಂದಿದೆ. ಡಿಜಿ ಯಾತ್ರಾ ಗೇಟ್‌ಗಳನ್ನು ಮುಚ್ಚಿದ್ದ ಕಾರಣ, ಪ್ರಯಾ ಣಿಕರು ಶನಿವಾರವೂ ಸಮಸ್ಯೆ ಅನುಭವಿಸುವಂತಾ ಯಿತು. ಬೆಂಗಳೂರಿನಲ್ಲೂ ಕೊಂಚ ಸಮಸ್ಯೆ ಕಾಣಿಸಿ ಕೊಂಡಿತು. ಆದರೆ ಮುಂಬಯಿ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯ ನಿರ್ವಹಿಸಿತು. ವಿಮಾನ ನಿಲ್ದಾಣದಲ್ಲಿ ಉದ್ದದ ಸರತಿ ಸಾಲುಗಳು ಕಂಡು ಬಂದವು. ಶನಿವಾರ ಮುಂಜಾನೆಯೂ ಸಹ ಕೆಲವು ವಿದೇಶಿ ವಿಮಾನಗಳನ್ನು ರದ್ದು ಮಾಡಲಾಯಿತು.

ಹಲವೆಡೆ ಮ್ಯಾನುಯೆಲ್‌ ಚೆಕ್‌ಇನ್‌: ಬೆಂಗಳೂರು, ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಮ್ಯಾನುಯೆಲ್‌ ಆಗಿ ಚೆಕ್‌ ಇನ್‌ ಮಾಡಲಾಯಿತು. ಹೀಗಾಗಿ ಇಂಡಿಗೋ, ಸ್ಪೈಸ್‌ ಜೆಟ್‌ ಮತ್ತು ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ವಿಮಾನ ಗಳು ವಿಳಂಬಗೊಂಡು ಜನ ಸಮಸ್ಯೆ ಅನುಭವಿಸಿದರು.

ಅಮೆರಿಕ, ಬ್ರಿಟನ್‌ನಲ್ಲಿ ನಿಲ್ಲದ ತಲ್ಲಣ
ಮೈಕ್ರೋಸಾಫ್ಟ್ ಸಾಫ್ಟ್ವೇರ್‌ ಸಮಸ್ಯೆಯಿಂ ದಾಗಿ ಬಿಕ್ಕಟ್ಟಿಗೆ ಸಿಲುಕಿದ್ದ ಬ್ರಿಟನ್‌ನ ಸಾರಿಗೆ ವ್ಯವಸ್ಥೆಯ ಸಮಸ್ಯೆ ಶನಿ ವಾರವೂ ಮುಂದುವ ರಿದಿದೆ. ಮ್ಯಾಂಚೆಸ್ಟರ್‌ ವಿಮಾನ ನಿಲ್ದಾಣದಲ್ಲಿ ಮ್ಯಾನುಯೆಲ್‌ ಆಗಿ ಚೆಕ್‌ಇನ್‌ ನಡೆಸುತ್ತಿ ರುವ ಕಾರಣ, ಪ್ರಯಾ ಣಿಕರು ತೊಂದರೆ ಅನುಭವಿಸುವಂತಾಯಿತು. ಅಮೆರಿಕ ದಲ್ಲೂ ಸಮಸ್ಯೆ ಮುಂದುವರಿದಿದೆ.

 

Advertisement

ನಕಲಿ ಕ್ರೌಡ್‌ಸ್ಟ್ರೈಕ್‌ ಉದ್ಯಮಿ ಬರೆದ ಪೋಸ್ಟ್‌ ವೈರಲ್‌
ಮೈಕ್ರೋಸಾಫ್ಟ್ ಸಮಸ್ಯೆ ಉಂಟಾದ ಬಳಿಕ ಇದಕ್ಕೆ ನಾನೇ ಕಾರಣ ಎಂದು ಹೇಳಿದ ವ್ಯಕ್ತಿ  ಯೊಬ್ಬನ ಪೋಸ್ಟ್‌ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್‌ ಆಗಿದೆ. ಕೃತಕ ಬುದ್ಧಿ ಮತ್ತೆಯ ಮೂಲಕ ಕ್ರೌಡ್‌ಸ್ಟ್ರೈಕ್‌ ಎಂಬ ಕಚೇರಿಯನ್ನು ಸೃಷ್ಟಿಸಿದ ವಿನ್ಸೆಂಟ್‌ ಎಂಬ ವ್ಯಕ್ತಿ “ನಾನು ಕೋಡ್‌ ನಲ್ಲಿ ಒಂದು ಸಾಲನ್ನು ಬದಲು ಮಾಡಿದೆ, ಇಡೀ ವಿಶ್ವ ತೊಂದ ರೆಗೆ ಸಿಲುಕಿಕೊಂಡಿತು’ ಎಂದು ಹೇಳಿದ್ದಾನೆ. ಕ್ರೌಡ್‌ಸ್ಟ್ರೈಕ್‌ ಸಂಸ್ಥೆ ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದು, ಕೆಲಸ ಹುಡುಕುತ್ತಿದ್ದೇನೆ ಎಂದು ತಮಾಷೆ ಮಾಡಿ ದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಆತನಿಗೆ ಒಂದಷ್ಟು ಮಂದಿ ಬೈದರೆ, ಕೆಲಸ ತಪ್ಪಿಸಿದ್ದಕ್ಕೆ ಒಂದಷ್ಟು ಜನ ಹೊಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next