Advertisement

ಬೌನ್ಸರ್‌ ನಿಷೇಧಕ್ಕೆ ಆಗ್ರಹ

11:48 PM Jan 26, 2021 | Team Udayavani |

ದುಬಾೖ: ತಲೆಗೆ ಪೆಟ್ಟುಬೀಳುವುದನ್ನು ತಡೆಯಲು ಜೂನಿಯರ್‌ ಹಂತದ ಕ್ರಿಕೆಟ್‌ನಲ್ಲಿ ಬೌನ್ಸರ್‌ ಎಸೆತಗಳನ್ನು ನಿಷೇಧಿಸಬೇಕೆಂದು ಅಂತಾರಾಷ್ಟ್ರೀಯ ಕನ್‌ಕಷನ್‌ ತಜ್ಞ ಮತ್ತು ಹೆಡ್‌ ಇಂಜುರಿ ರೀಸರ್ಚ್‌ ಫೌಂಡೇಷನ್‌ನ ವೈದ್ಯಕೀಯ ನಿರ್ದೇಶಕ ಮೈಕಲ್‌ ಟರ್ನರ್‌ ಆಗ್ರಹಿಸಿದ್ದಾರೆ.

Advertisement

ಸಂದರ್ಶನವೊಂದರಲ್ಲಿ ಮಾತನಾಡಿದ ಟರ್ನರ್‌, ಹದಿಹರೆಯದವರಲ್ಲಿ ಮೆದುಳು ಬೆಳವಣಿಗೆಯ ಸ್ಥಿತಿಯಲ್ಲಿರುತ್ತದೆ. ಆ ಸಂದರ್ಭದಲ್ಲಿ ತಲೆಗೆ ಪೆಟ್ಟು ಬೀಳದಂದೆ ನೋಡಿಕೊಳ್ಳುವುದು ಅತ್ಯಗತ್ಯ. ಕನ್‌ಕಷನ್‌ ತಡೆಗಟ್ಟಲು ಶಾರ್ಟ್‌ಬಾಲ್‌ ಎಸೆತಗಳನ್ನು ನಿಷೇಧಿಸುವುದಾದರೆ ಅದೊಂದು ಮಹತ್ವದ ಹೆಜ್ಜೆ ಆಗಲಿದೆ. ತಲೆ ಬುರುಡೆಯನ್ನು ಗಾಯದಿಂದ ರಕ್ಷಿಸುವ ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿದ್ದರೂ ನಿಯಮಗಳನ್ನು ಬದಲಿಸಿ ಅಪಾಯವನ್ನು ತಡೆಗಟ್ಟುವುದು ಉತ್ತಮ ಎಂದು ಸಲಹೆಯೊಂದನ್ನು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next