ಮುಂಬೈ: ವೆಸ್ಟ್ ಇಂಡೀಸ್ ಕ್ರಿಕೆಟ್ ನ ದಿಗ್ಗಜ, ಮಾಜಿ ವೇಗದ ಬೌಲರ್ ಮೈಕಲ್ ಹೋಲ್ಡಿಂಗ್ ಅವರು ಮತ್ತೆ ಟಿ20 ಕ್ರಿಕೆಟ್ ಬಗ್ಗೆ ಕಿಡಿಕಾರಿದ್ದಾರೆ. ಟಿ20 ಮಾದರಿ ಎನ್ನುವುದು ಕ್ರಿಕೆಟ್ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ.
ಟಿ 20 ಪಂದ್ಯಾವಳಿಯನ್ನು ಗೆಲ್ಲುವುದರಿಂದ ತಂಡದ ಉದ್ದಾರವಾಗಲ್ಲ. ಯಾಕೆಂದರೆ ಅದು ಕ್ರಿಕೆಟ್ ಕೂಡ ಅಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ನ ಇಂದಿನ ಪರಿಸ್ಥಿತಿಗೆ ಟಿ20 ಮಾದರಿಯೇ ಎಂದು ಮೈಕಲ್ ಹೋಲ್ಡಿಂಗ್, ಇದೇ ಕಾರಣಕ್ಕೆ ತಾನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಮೆಂಟರಿ ಮಾಡುವುದಿಲ್ಲ ಎಂದರು.
ಇದನ್ನೂ ಓದಿ:ಚಂದನವನಕ್ಕೆ ಬಾಲಿವುಡ್ ನಟಿ:ವಿಕ್ರಾಂತ್ ರೋಣನ ಜೊತೆ ಬಿಟೌನ್ ಬೆಡಗಿ ಮಸ್ತ್ ಸ್ಟೆಪ್
“ಅನೇಕ ವೆಸ್ಟ್ ಇಂಡೀಸ್ ಆಟಗಾರರು ರಾಷ್ಟ್ರೀಯ ತಂಡದ ಪರ ಆಡಲು ಆಸಕ್ತಿ ಹೊಂದಿಲ್ಲ. ನೀವು ಆರು ವಾರಗಳವರೆಗೆ 600,000 ಅಥವಾ 800,000 ಡಾಲರ್ ಗಳಿಸುತ್ತಿರುವಾಗ, ಅವರೇನು ಮಾಡುತ್ತಾರೆ? ನಾನು ಇದಕ್ಕಾಗಿ ಕ್ರಿಕೆಟಿಗರನ್ನು ದೂಷಿಸುವುದಿಲ್ಲ. ನಾನು ಆಡಳಿತವನ್ನು ದೂಷಿಸುತ್ತೇನೆ” ಎಂದು ಹೋಲ್ಡಿಂಗ್ ಹೇಳಿದರು.
ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ವೆಸ್ಟ್ ಇಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್ ಗೆ ಹೋಲಿಸಿದ ಅವರು, ಮೈದಾನದಲ್ಲಿ ಹೆಚ್ಚೆನಿಸುವ ಆಕ್ರೋಶ ತೋರಿಸುವುದನ್ನು ಕೊಹ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬೇಕಿದೆ ಎಂದು ಹೇಳಿದರು.