Advertisement
ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್(ಎಂಐಸಿ)ಯ ರಜತ ಮಹೋತ್ಸವ ಮತ್ತು ಹಳೆ ವಿದ್ಯಾರ್ಥಿಗಳ ಸಹಮಿಲನ ಕಾರ್ಯ ಕ್ರಮವನ್ನು ಶನಿವಾರ ಹೊಟೇಲ್ ಫಾರ್ಚೂನ್ ವ್ಯಾಲಿವ್ಯೂನಲ್ಲಿ ಉದ್ಘಾ ಟಿಸಿ, “ಮೈಂಡ್ ದಿ ಗ್ಯಾಪ್- ದಿ ಕಮ್ಯೂ ನಿಕೇಶನ್ ಗ್ಯಾಪ್’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಮಣಿಪಾಲ ದೇಶದ ಯುವನಗರ. ಇಲ್ಲಿ ಸದಾ ಸರಾಸರಿ 23 ವರ್ಷದವರೇ ಹೆಚ್ಚು. ದೇಶದ ಯಾವ ನಗರದಲ್ಲೂ ಈ ರೀತಿಯಿಲ್ಲ. ಮಣಿಪಾಲ ಸಣ್ಣ ನಗರವಾದರೂ ಯುವ ಸಂಪತ್ತು ಹೆಚ್ಚಿದೆ ಎಂದು ಬಣ್ಣಿಸಿದರು.
Related Articles
Advertisement
ಮಾಹೆ ವಿ.ವಿ. ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಮಾತನಾಡಿ, ಎಂಐಸಿ ಸ್ಥಾಪನೆ ಹಾಗೂ ಪ್ರಸ್ತುತ ಬೆಳೆದು ಬಂದಿರುವ ಹಾದಿಯ ಜತೆಗೆ ಡಾ| ಟಿಎಂಎ ಪೈ, ಡಾ| ರಾಮದಾಸ ಪೈ, ಎಂ.ವಿ.ಕಾಮತ್ ಅವರ ಕಾರ್ಯ ವನ್ನು ಸ್ಮರಿಸಿದರು.
ಸಮ್ಮಾನಎಂಐಸಿ ನಿರ್ದೇಶಕಿ ಡಾ| ಪದ್ಮ ರಾಣಿ, ಮಾಜಿ ನಿರ್ದೇಶಕರಾದ ಡಾ| ಬೊರೊಶಿವದಾಸ್ ಗುಪ್ತ, ಡಾ| ವರದೇಶ ಹಿರೇಗಂಗೆ ಹಾಗೂ ಎಂಐಸಿ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಾದ ಶರತ್ ಕುಮಾರ್, ವನಿತಾ ಪೈ, ಅಲೋಕ್ ಸಿಂಗ್ ಅವರನ್ನು ಸಮ್ಮಾನಿ ಸಲಾಯಿತು. ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸಿಬಂದಿಯನ್ನು ಅಭಿನಂದಿಸಲಾಯಿತು. ವಿ.ವಿ. ಸಹ ಕುಲಪತಿ ಡಾ| ನಾರಾಯಣ ಸಭಾಹಿತ್, ಎಂಐಟಿ ನಿರ್ದೇಶಕ ಕ| ಡಾ| ಅನಿಲ್ ರಾಣ, ಡಾ| ಎಚ್.ಎಸ್. ಬಲ್ಲಾಳ್ ಅವರ ಪತ್ನಿ ಇಂದಿರಾ ಬಲ್ಲಾಳ್ ಸೇರಿದಂತೆ ವಿ.ವಿ.ಯ ಅಧಿಕಾರಿಗಳು ಉಪಸ್ಥಿತರಿದ್ದರು. ಎಂಐಸಿ ನಿರ್ದೇಶಕಿ ಡಾ| ಪದ್ಮ ರಾಣಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಾಧ್ಯಾಪಿಕೆ ಡಾ| ಶುಭಾ ಎಚ್.ಎಸ್. ವಂದಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.