Advertisement

ಏರ್‌ ಇಂಡಿಯಾದ ಸಿಇಒ ಇಲ್ಕರ್‌ ಐಸಿಯ ಹಿನ್ನೆಲೆ ಪರಿಶೋಧಿಸಲಿದೆ ಸರ್ಕಾರ

08:37 PM Feb 20, 2022 | Team Udayavani |

ನವದೆಹಲಿ: ಟಾಟಾ ಸನ್ಸ್‌ ಮಾಲೀಕತ್ವದಲ್ಲಿರುವ ಏರ್‌ ಇಂಡಿಯಾದ ಸಿಇಒ ಮತ್ತು ಎಂ.ಡಿ.ಆಗಿ ನೇಮಕಗೊಂಡಿರುವ ಇಲ್ಕರ್‌ ಐಸಿ ಅವರ ಹಿನ್ನೆಲೆಯನ್ನು ಕೇಂದ್ರ ಗೃಹ ಇಲಾಖೆ ಆಮೂಲಾಗ್ರವಾಗಿ ಪರಿಶೋಧಿಸಲಿದೆ.

Advertisement

ಈ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿ ಭಾನುವಾರ ನವದೆಹಲಿಯಲ್ಲಿ ಖಚಿತಪಡಿಸಿದ್ದಾರೆ.

ಇದೊಂದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ದೇಶದಲ್ಲಿ ವಿವಿಧ ಕಂಪನಿಗಳ ಸಿಇಒ ಮತ್ತು ಎಂ.ಡಿ. ಹುದ್ದೆಗೆ ನೇಮಕಗೊಳ್ಳುವ ವಿದೇಶೀಯರ ಹಿನ್ನೆಲೆಯನ್ನು ಗೃಹ ಸಚಿವಾಲಯ ಪರಿಶೀಲಿಸುತ್ತದೆ.

ಗಮನಾರ್ಹ ಅಂಶವೆಂದರೆ ಇಲ್ಕರ್‌ ಐಜು ನೇಮಕದ ಬಗ್ಗೆ ಟಾಟಾ ಸನ್ಸ್‌ ಅಥವಾ ಸ್ವತಃ ಐಜು ಅವರಿಂದ ಕೂಡ ಮಾಹಿತಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next