ಓಕ್ಸಾಕಾ: ತನ್ನನ್ನು ತಾನೇ ವಿವಾಹವಾದವಳ ಕಥೆಯನ್ನು ಇತ್ತೀಚೆಗಷ್ಟೇ ಓದಿದ್ದೀರಿ. ಇದೀಗ ಇಲ್ಲೋರ್ವ ಮಹಾಶಯ ಮೊಸಳೆಯನ್ನು ವಧುವಿನಂತೆ ಸಿಂಗರಿಸಿ ವಿವಾಹವಾಗಿದ್ದಾನೆ. ಅಲ್ಲದೆ ನವ ವಧು ಮೊಸಳೆಗೆ ಚುಂಬವನ್ನೂ ನೀಡಿದ್ದಾನೆ. ಆದರೆ ಈ ಸಮಯದಲ್ಲಿ ಮೊಸಳೆಯ ಬಾಯಿಯನ್ನು ಹಗ್ಗದಲ್ಲಿ ಕಟ್ಟಿಹಾಕಲಾಗಿತ್ತು ಎನ್ನುವುದು ಗಮನಿಸಬೇಕಾದ ವಿಚಾರ.
ಇದೆಲ್ಲಾ ನಡೆದಿದ್ದು ಮೆಕ್ಸಿಕೋದಲ್ಲಿ. ಅಲ್ಲಿನ ಓಕ್ಸಾಕಾ ಎಂಬ ಸಣ್ಣ ಮೀನುಗಾರಿಕಾ ಹಳ್ಳಿಯ ಮೇಯರ್ ವಧುವಿನಂತೆ ಧರಿಸಿರುವ ಮೊಸಳೆಯನ್ನು ವಿವಾಹವಾದರು, ಅದರ ವಿಡಿಯೋ ಇದೀಗ ವೈರಲ್ ಆಗಿದೆ.
ಇದನ್ನೂ ಓದಿ:ಹಂತಕರಿಗೆ ಪಾಕ್ ಸಂದೇಶ: ಪಾಕಿಸ್ಥಾನದ ಸಲ್ಮಾನ್ ಭಾಯಿ ಎಂಬ ವ್ಯಕ್ತಿಯಿಂದ ಸೂಚನೆ: ಎನ್‌ಐಎ
ಸ್ಯಾನ್ ಪೆಡ್ರೊ ಹುಮೆಲುಲಾ ನಗರದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ ಎಂಬಾತನೇ ಮೊಸಳೆಯನ್ನು ವಿವಾಹವಾದಾತ. ಒಕ್ಸಾಕಾ ರಾಜ್ಯದ ಚೊಂಟಾಲ್ ಮತ್ತು ಹುವಾವ್ ಸ್ಥಳೀಯ ಸಮುದಾಯಗಳಲ್ಲಿ ಈ ಸಂಪ್ರದಾಯವು ಶತಮಾನಗಳ ಹಿಂದಿನ ಹಿಸ್ಪಾನಿಕ್ ಕಾಲದ್ದು ಎನ್ನಲಾಗಿದೆ. ಪ್ರಕೃತಿಯ ಅನುಗ್ರಹಕ್ಕಾಗಿ ಪ್ರಾರ್ಥನೆಯಂತೆ ರೂಪದಲ್ಲಿ ಇದನ್ನು ಮಾಡಲಾಗುತ್ತದೆ. “ನಾವು ಸಾಕಷ್ಟು ಮಳೆಗಾಗಿ, ಸಾಕಷ್ಟು ಆಹಾರಕ್ಕಾಗಿ, ನದಿಯಲ್ಲಿ ಮೀನುಗಳನ್ನು ಹೊಂದಲು ಪ್ರಕೃತಿಯನ್ನು ಪ್ರಾರ್ಥಿಸುತ್ತೇವೆ” ಎಂದು ಸೋಸಾ ಹೇಳಿದರು.
ಈ ಆಚರಣೆಯು ಮೊಸಳೆಯನ್ನು ಬಿಳಿ ಮದುವೆಯ ಡ್ರೆಸ್ ಜೊತೆಗೆ ಇತರ ವರ್ಣರಂಜಿತ ಉಡುಪುಗಳಲ್ಲಿ ಧರಿಸುವುದನ್ನು ಒಳಗೊಂಡಿರುತ್ತದೆ. ಪುಟ್ಟ ರಾಜಕುಮಾರಿ ಎಂದು ಕರೆಯಲ್ಪಡುವ ಸರೀಸೃಪವು ಭೂಮಿ ತಾಯಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದೆ. ಅಲ್ಲದೆ ಮೇಯರ್ ನೊಂದಿಗಿನ ಅವಳ ವಿವಾಹವು ಮಾನವರು ದೈವಿಕವಾಗಿ ಸೇರುವುದನ್ನು ಸಂಕೇತಿಸುತ್ತದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಮದುವೆಯನ್ನು ಬಹಳ ಸಂಭ್ರಮದಿಂದ ನೆರವೇರಿಸಲಾಯಿತು. ಹಬ್ಬದ ರೀತಿಯಲ್ಲಿ ಹಿನ್ನೆಲೆಯಲ್ಲಿ ಕಹಳೆ ಮತ್ತು ಡೋಲು ಮೊಳಗುತ್ತಿದ್ದಂತೆ ಸ್ಥಳೀಯರು ಮೊಸಳೆ ವಧುವನ್ನು ತಮ್ಮ ತೋಳುಗಳಲ್ಲಿ ಹೊತ್ತು ತಂದರು.