Advertisement
ಹೆಬ್ಟಾಳ ಕ್ಷೇತ್ರ ವ್ಯಾಪ್ತಿಯ ಜೆಸಿನಗರ ಉಪ ವಿಭಾಗದ ಗಂಗೇನಹಳ್ಳಿ, ಜಯಚಾಮ ರಾಜೇಂದ್ರ ನಗರ, ಮನೋರಾಯನಪಾಳ್ಯ ವಿಶ್ವನಾಥ ನಾಗೇನಹಳ್ಳಿ ಹಾಗೂ ಹೆಬ್ಟಾಳ ಉಪ ವಿಭಾಗದ ಗಂಗಾನಗರ, ರಾಧಾಕೃಷ್ಣ ದೇವಸ್ಥಾನ ಮತ್ತು ಸಂಜಯನಗರ ವಾರ್ಡ್ ಗಳಿಗೆ ಸೇವೆ ವಿಸ್ತರಿಸಲಾಗಿದೆ.
Related Articles
Advertisement
ಈ ಹಿಂದೆ ಪಾಲಿಕೆ ಮೊದಲ ಹಂತದಲ್ಲಿ ಪ್ರಯೋಗಿಕವಾಗಿ ಇ-ತಂತ್ರಾಂಶವನ್ನು ಶಾಂತಿನಗರ ಕ್ಷೇತ್ರದ ದೊಮ್ಮಲೂರು ಉಪ ವಿಭಾಗದ ಜೋಗುಪಾಳ್ಯ, ದೊಮ್ಮ ಲೂರು,ಗರಮ್, ವನ್ನಾರ ಪೇಟೆಯಲ್ಲಿ ಹಾಗೂ ಸಿ.ವಿ.ರಾಮನ್ ನಗರ ಕ್ಷೇತ್ರದ ಬೆನ್ನಿಗಾನಹಳ್ಳಿ, ಸಿ.ವಿ.ರಾಮನ್ ನಗರ, ಹೊಸ ತಿಪ್ಪಸಂದ್ರ, ಸರ್ವಜ್ಞನಗರ, ಹೊಯ್ಸಳ ನಗರ, ಜೀವನ್ ಭೀಮಾನಗರ, ಕೋನೇನ ಅಗ್ರಹಾರ ವಾರ್ಡ್‌ನಲ್ಲಿ ಜಾರಿಗೊಳಿಸಲಾಗಿತ್ತು. ತೆರಿಗೆದಾರರ ಹಿತ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲೂ ಇ-ಆಸ್ತಿ ತಂತ್ರಾಂಶ ಅಳವಡಿಕೆ ಮಾಡುವ ಉದ್ದೇಶ ಬಿಬಿಎಂಪಿಗೆ ಇದೆ.
ಇ-ಆಸ್ತಿ ತಂತ್ರಾಂಶದಿಂದ ಏನು ಪ್ರಯೋಜನ?
ತಂತ್ರಾಂಶದಿಂದ ವಿತರಿಸಲಾಗುವ ನಮೂನೆ ಎ ಅಥವಾ ಬಿ ಯಲ್ಲಿ ಸ್ವತ್ತಿನ ಮಾಲೀಕರು ಮತ್ತು ಸ್ವತ್ತಿಗೆ ಸಂಬಂಧಪಟ್ಟ 42 ಅಂಶಗಳನ್ನೊಳಗೊಂಡ ಮಾಹಿತಿ ನಮೂದಿಸಿದೆ. ತಂತ್ರಾಂಶದಿಂದ ವಿತರಿಸಲಾಗುವ ದಾಖಲೆಗಳನ್ನು ಯಾವ ಸಮಯದಲ್ಲೂ, ಎಲ್ಲಿಯಾದರೂ ಜಾಲತಾಣಗಳಲ್ಲಿ ವೀಕ್ಷಿಸಬಹುದು.
ತಂತ್ರಾಂಶದಿಂದ ವಿತರಿಸಲಾಗುವ ದಾಖಲೆಗಳಲ್ಲಿ ಡಿಜಿಟಲ್ ಸಹಿಯನ್ನು ಅಳವಡಿಸಲಾಗುವುದು. ತಂತ್ರಾಂಶವನ್ನು ಕಾವೇರಿ ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಸ್ವತ್ತಿನ ವಹಿವಾಟಾದ ನಂತರ ವಿವಿರಗಳು ಸ್ವಯಂಚಾಲಿತವಾಗಿ ಇ-ಆಸ್ತಿ ತಂತ್ರಾಂಶಕ್ಕೆ ವರ್ಗಾಯಿಸಲಾಗುವುದು.
ಇ-ಆಸ್ತಿ ತಂತ್ರಾಂಶವನ್ನು ಆಸ್ತಿ ತೆರಿಗೆ ತಂತ್ರಾಂಶದೊಂದಿಗೂ ಸಂಯೋಜಿಸಲಾಗಿದ್ದು ಇ-ಆಸ್ತಿ ತಂತ್ರಾಂಶ ಮತ್ತು ಆಸ್ತಿ ತೆರಿಗೆ ತಂತ್ರಾಂಶದ ಸ್ವತ್ತಿನ ಮಾಲೀಕರ ಮತ್ತು ಸ್ವತ್ತಿನ ಆಸ್ತಿ ತೆರಿಗೆ ವಿವರಗಳು ವಿನಿಮಯವಾಗುತ್ತದೆ. ಇ-ಆಸ್ತಿ ತಂತ್ರಾಂಶದಿಂದ ನೀಡಲಾಗುವ ಸೇವೆಗೆ ಸಂಬಂಧಿಸಿದ ಶುಲ್ಕಗಳನ್ನು ಆನ್‌ಲೈನ್ ಮೂಲಕ ಅಥವಾ ಚಲನ್ ಪಡೆದು ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.