Advertisement

ಮೆಟ್ರೋ ಪ್ರಯಾಣಕ್ಕೆ ಅಪರಿಮಿತ ನಿಯಮ

12:03 PM Sep 04, 2020 | Suhan S |

ಬೆಂಗಳೂರು: “ನಮ್ಮ ಮೆಟ್ರೋ’ ಪ್ರಯಾಣಿಕರು ಸ್ಮಾರ್ಟ್‌ ಕಾರ್ಡ್‌ ರಿಚಾರ್ಜ್‌ ಮಾಡಿಸಿದ ದಿನದಿಂದ ಏಳು ದಿನಗಳ ಅಂತರದಲ್ಲಿ ಬಳಸುವುದು ಕಡ್ಡಾಯ. ಇಲ್ಲದಿದ್ದರೆ ನಿಮ್ಮ ಕಾರ್ಡ್‌ ನಿಷ್ಕ್ರಿàಯವಾಗಲಿದ್ದು, ಮತ್ತೆ ರಿಚಾರ್ಜ್‌ ಮಾಡಬೇಕಾಗುತ್ತದೆ!

Advertisement

– ರೈಲು ಸೇವೆ ಪುನಾರಂಭಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ ಸಿಎಲ್‌)ವು ಗುರುವಾರ ಪ್ರಕಟಿಸಿದ ಕಾರ್ಯಾಚರಣೆ ಮಾರ್ಗಸೂಚಿ (ಎಸ್‌ಒಪಿ)ಗಳಲ್ಲಿ ಈ ನಿಯಮ ವಿಧಿಸಿದೆ.

ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಟೋಕನ್‌ ವ್ಯವಸ್ಥೆಯನ್ನು ನಿಷೇಧಿಸಲಾಗಿದ್ದು, ಸ್ಮಾರ್ಟ್‌ ಕಾರ್ಡ್‌ ಹೊಂದಿರುವವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಈ ಸ್ಮಾರ್ಟ್‌ ಕಾರ್ಡ್‌ಗಳನ್ನು ರಿಚಾರ್ಜ್‌ ಮಾಡಿಸಿದ ನಂತರ ಏಳು ದಿನಗಳಲ್ಲಿ ಬಳಸಿ, ಸಂಚರಿಸಬೇಕು. ಸೆ. 7ರಿಂದ ಮೊಬೈಲ್‌ ಆ್ಯಪ್‌ ಅನ್ನು ಪರಿಚಯಿಸುತ್ತಿದ್ದು, ಈ ಸಂಬಂಧ ಕೆಲವು ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿದೆ. ಆದ್ದರಿಂದ ಈ ನಿಯಮ ವಿಧಿಸಲಾಗಿದೆ ಎಂದು ನಿಗಮ ಸಮಜಾಯಿಷಿ ನೀಡಿದೆ. ಈ ಮೊದಲು ರಿಚಾರ್ಜ್‌ ಮಾಡಿದ ನಂತರದಿಂದ 60 ದಿನಗಳ ಕಾಲಾವಕಾಶ ಇತ್ತು.

ಅಲ್ಲದೆ, ಪ್ರಯಾಣಿಕರು ನಿಲ್ದಾಣಕ್ಕೆ ಬರುವ ಒಂದು ಗಂಟೆ ಮೊದಲು ಸ್ಮಾರ್ಟ್‌ಕಾರ್ಡ್‌ ರಿಚಾರ್ಜ್‌ ಮಾಡಿಸಿಕೊಳ್ಳಬೇಕು. ಇದಕ್ಕೆ ನಮ್ಮ ಮೆಟ್ರೋ ಮೊಬೈಲ್‌ ಅಪ್ಲಿಕೇಷನ್‌ ಅಥವಾ ಬಿಎಂಆಸಿರ್‌ಎಲ್‌ ವೆಬ್‌ಸೈಟ್‌ ಮೂಲಕ ರಿಚಾರ್ಜ್‌ ಮಾಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಎಲ್ಲ ನಿಲ್ದಾಣಗಳಲ್ಲಿ ಒದಗಿಸಲಾದ ಯುಪಿಐ, ಕ್ಯೂಆರ್‌ ಕೋಡ್‌ ಅಥವಾ ಪೇಟಿಎಂ ಮೂಲಕ ನಿಲ್ದಾಣದಲ್ಲಿ ನಗದುರಹಿತ ಪಾವತಿ ಮಾಡಿ ಸ್ಮಾರ್ಟ್‌ ಕಾರ್ಡ್‌ ಖರೀದಿ ಅಥವಾ ರಿಚಾರ್ಜ್‌ ಮಾಡಿಸಬಹುದು. ಮೊದಲಿನಂತೆ ಪ್ರವೇಶ ಅಥವಾ ನಿರ್ಗಮನ ಗೇಟ್‌ ಗಳ ಕಾರ್ಡ್‌ ರೀಡರ್‌ ಮೇಲೆ ಸ್ಮಾರ್ಟ್‌ ಕಾರ್ಡ್‌ ಇಡುವಂತಿಲ್ಲ. ಗೇಟ್‌ನಿಂದ 3 ಸೆ.ಮೀ. ದೂರದಿಂದಲೇ ಪ್ರಸ್ತುತ ಪಡಿಸಬೇಕು. ಸೆ. 7ರಿಂದ ನೇರಳೆ ಮಾರ್ಗದಲ್ಲಿ 9ರಿಂದ ಹಸಿರು ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ. ಸೆ. 11ರಿಂದ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಎರಡೂ ಮಾರ್ಗಗಳಲ್ಲಿ ರೈಲುಗಳು ಸಂಚರಿಸಲಿವೆ.

ರೈಲಿನ ಒಳಗೆ ಮಾರ್ಕ್‌ ಹಾಕಿದ ಆಸನಗಳನ್ನು ಖಾಲಿ ಇಡಬೇಕು ಮತ್ತು ಹಳದಿ ಗುರುತಿನ ಜಾಗದಲ್ಲಿ ಮಾತ್ರ ನಿಲ್ಲಲು ಅವಕಾಶ ಇರುತ್ತದೆ. ಪ್ಲಾಟ್‌ಫಾರಂನಿಂದ ಕಾನ್‌ ಕೋರ್ಸ್‌ಗೆ ಹಾಗೂ ಕಾನ್‌ಕೋರ್ಸ್‌ನಿಂದ ನೆಲಮಟ್ಟಕ್ಕೆ ಎಸ್ಕಲೇಟರ್‌ಗಳನ್ನು ಬಳಸುವಾಗ ಪ್ರಯಾಣಿಕರು ತಮ್ಮ ಮುಂದಿರುವ ಪ್ರಯಾಣಿಕರಿಂದ ಒಂದು ಮೆಟ್ಟಿಲು ಅಂತರ ಕಾಯ್ದುಕೊಳ್ಳ ಬೇಕು.

Advertisement

ಒಮ್ಮೆಲೆ ರಿಚಾರ್ಜ್‌; ಒತ್ತಡ ಸಾಧ್ಯತೆ : ಸುದೀರ್ಘ‌ ಅವಧಿಯ ನಂತರ ಮೆಟ್ರೋ ಪುನಾರಂಭಗೊಳ್ಳು ತ್ತಿದ್ದು, ಬಹುತೇಕ ಎಲ್ಲ ಸ್ಮಾರ್ಟ್‌ ಕಾರ್ಡ್‌ದಾರರು ರಿಚಾರ್ಜ್‌ ಮಾಡಿಕೊಳ್ಳಬೇಕಾಗುತ್ತದೆ. ಏಕಕಾ ಲದಲ್ಲಿ ಆನ್‌ಲೈನ್‌ ಮೂಲಕ ರಿಚಾರ್ಜ್‌ಗೆ ಮುಂದಾಗುವುದರಿಂದ ಹೆಚ್ಚು ಲೋಡ್‌ (ಒತ್ತಡ ‌)  ನಿಂದ ವಿಳಂಬವಾಗುವ ಸಾಧ್ಯತೆಯೂ ಇದೆ. ನಿತ್ಯ ಸಂಚರಿಸುವ ನಾಲ್ಕು ಲಕ್ಷ ಪ್ರಯಾಣಿಕರ ಪೈಕಿ ಶೇ. 62ರಷ್ಟು ಜನ ಸ್ಮಾರ್ಟ್‌ ಕಾರ್ಡ್‌ ಹೊಂದಿದ್ದಾರೆ. ಉಳಿದವರೂ ಮೆಟ್ರೋ ಪ್ರಯಾಣಕ್ಕೆ ಕಾರ್ಡ್‌ ಹೊಂದಬೇಕಾದ ಅನಿವಾರ್ಯತೆ ಇದೆ. ಆದರೆ, ಐಟಿ-ಬಿಟಿ ಸೇರಿದಂತೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಮನೆಯಿಂದಲೇ ಕೆಲಸ ಇರುವುದರಿಂದ ಹೆಚ್ಚು ದಟ್ಟಣೆ ಆಗದು ಎಂದು ನಿಗಮದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಇನ್ನು ಮಾರ್ಚ್‌ 22ರಿಂದ ಈಚೆಗೆ ಸೇವೆ ಇಲ್ಲದ್ದರಿಂದ 60 ದಿನಗಳಲ್ಲಿ ಪ್ರಯಾಣಿಕರು ತಮ್ಮ ಸ್ಮಾರ್ಟ್‌ ಕಾರ್ಡ್‌ ಅನ್ನು ಟಾಪ್‌ಅಪ್‌ಗಾಗಿ ಪ್ರಸ್ತುತಪಡಿಸಲು ಸಾಧ್ಯವಾಗಿಲ್ಲ. ಹಾಗಾಗಿ, ಆಯಾ ಸ್ಮಾರ್ಟ್‌ ಕಾರ್ಡ್‌ದಾರರಿಗೆ ಎಲ್ಲ ಮೊತ್ತವನ್ನು ಹಿಂತಿರುಗಿಸಲಾಗಿದ್ದು, ಈಗ ಅವರು ಕೂಡ ಹೊಸ ರಿಚಾರ್ಜ್‌ಮಾಡಿಸತಕ್ಕದ್ದು ಎಂದೂ ನಿಗಮವು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next