Advertisement

ಮೆಟ್ರೋ ಆರು ಬೋಗಿ ಸಂಚಾರ ಪರಿಶೀಲನೆ

11:56 AM Apr 21, 2018 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಆರು ಬೋಗಿಗಳ “ನಮ್ಮ ಮೆಟ್ರೋ’ ರೈಲು ಅನ್ನು ಈಚೆಗೆ ಪರಿಶೀಲನೆ ನಡೆಸಿದ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ, ಈ ಸಂಬಂಧ ಆರು ಬೋಗಿಗಳ ಮೆಟ್ರೋ ರೈಲಿನಲ್ಲಿ ಸಂಚರಿಸಿತು. 

Advertisement

ರೈಲ್ವೆ ಸುರಕ್ಷತಾ ಆಯುಕ್ತರ ತಂಡವು ಏಪ್ರಿಲ್‌ 19ರಂದು ರಾತ್ರಿ 10.30ರಿಂದ ಬೆಳಗಿನಜಾವ 3.10ರವರೆಗೆ ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಈ ಆರು ಬೋಗಿಗಳ ಮೆಟ್ರೋ ರೈಲಿನಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು  ಉಪಸ್ಥಿತರಿದ್ದರು. 

ಇದಲ್ಲದೆ, ಆಯುಕ್ತರು ಮಾರ್ಗದ ಬ್ರೇಕಿಂಗ್‌ ಪರೀಕ್ಷೆ, ವೇಗ, ಸಿಗ್ನಲಿಂಗ್‌ ಸೇರಿದಂತೆ ಹಲವು ಅಂಶಗಳನ್ನೂ ಪರಿಶೀಲಿಸಿದರು. ಮೊದಲ ಹಂತದ ಹೆಚ್ಚುವರಿ ಮೂರು ಬೋಗಿಗಳು ಬಿಇಎಂಎಲ್‌ ಕಾರ್ಖಾನೆಯಿಂದ ಪೂರೈಕೆ ಆಗಿದ್ದು, ಮುಂದಿನ ಹಂತದಲ್ಲಿ ಮತ್ತೆ ಮೂರು ಬೋಗಿಗಳು ಪೂರೈಕೆ ಮಾಡಲಿದೆ.

ಇದು ಜುಲೈ ಮೊದಲ ವಾರದಲ್ಲಿ ಸೇರ್ಪಡೆ ಆಗಲಿದೆ. ಅದೇ ರೀತಿ, ಉಳಿದ ಬೋಗಿಗಳು ವಿವಿಧ ಹಂತಗಳಲ್ಲಿ ಬರಲಿವೆ. ಈ ಆರು ಬೋಗಿಗಳ ಮೆಟ್ರೋ ರೈಲು ಅನ್ನು ಪೂರ್ವ-ಪಶ್ಚಿಮ ಕಾರಿಡಾರ್‌ (ಬೈಯಪ್ಪನಹಳ್ಳಿ-ಮೈಸೂರು ರಸ್ತೆ)ನಲ್ಲಿ ಕಾರ್ಯಾಚರಣೆ ಮಾಡಲು ಬಿಎಂಆರ್‌ಸಿ ಉದ್ದೇಶಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next