Advertisement

ಸಕ್ರಿಯ ರಾಜಕೀಯಕ್ಕೆ ಮೆಟ್ರೋಮ್ಯಾನ್‌ ವಿದಾಯ

08:12 PM Dec 16, 2021 | Team Udayavani |

ತಿರುವನಂತಪುರಂ: ಈ ವರ್ಷ ಫೆಬ್ರವರಿಯಲ್ಲಿ ಬಿಜೆಪಿ ಸೇರಿದ್ದ ಮೆಟ್ರೋಮ್ಯಾನ್‌ ಖ್ಯಾತಿಯ ಇ.ಶ್ರೀಧರನ್‌ ಸಕ್ರಿಯ ರಾಜಕೀಯ ತೊರೆದಿದ್ದಾರೆ.

Advertisement

ನಾನೆಂದೂ ರಾಜಕಾರಣಿಯಾಗಿರಲಿಲ್ಲ, ಹಾಗಾಗಿ ಸಕ್ರಿಯ ರಾಜಕೀಯ ತೊರೆಯುತ್ತಿದ್ದೇನೆ. ಹಾಗಂತ ನಾನು ಸುಮ್ಮನಿರುವುದಿಲ್ಲ. ಬೇರೆಬೇರೆ ದಾರಿಗಳಲ್ಲಿ ಸಾಮಾಜಿಕ ಕೆಲಸ ಮುಂದುವರಿಸುತ್ತೇನೆ ಎಂದಿದ್ದಾರೆ.

ಈ ವರ್ಷ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಪಾಲಕ್ಕಾಡ್‌ನಿಂದ ಸ್ಪರ್ಧಿಸಿದ್ದ ಶ್ರೀಧರನ್‌ ಕೇವಲ 3,859 ಮತಗಳಿಂದ ಸೋತಿದ್ದರು. ಯುವ ಕಾಂಗ್ರೆಸ್‌ ನಾಯಕನೆದುರಿನ ಸೋಲಿನಿಂದ ತನಗೆ ಬೇಸರವಾಗಿದೆ ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಕೆ-ರೈಲ್‌ ಯೋಜನೆ ಸಂಪೂರ್ಣ ಅವ್ಯವಸ್ಥಿತ, ಅವೈಜ್ಞಾನಿಕ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ : ನಂಜನಗೂಡು ಎರಡು ವರ್ಷದ ಮಗುವನ್ನು ಕೊಂದು, ತಾಯಿ ಆತ್ಮಹತ್ಯೆ ಶಂಕೆ

Advertisement

Udayavani is now on Telegram. Click here to join our channel and stay updated with the latest news.

Next