ಬೈಂದೂರು: ಕರಾವಳಿ ಹಾಗೂ ಮಲೆನಾಡಿ ನಿಂದ ಕೂಡಿರುವ ಗ್ರಾಮೀಣ ಪ್ರದೇಶವನ್ನೇ ಹೆಚ್ಚಾಗಿ ಹೊಂದಿರುವ ಬೈಂದೂರಿನಲ್ಲಿ ಬಡ ಹಾಗೂ ಮಧ್ಯಮ ವರ್ಗದವರೇ ಹೆಚ್ಚು. ಕೃಷಿ, ಮೀನುಗಾರಿಕೆ ಪ್ರಧಾನ. ಬೃಹತ್ ಉದ್ಯಮ, ಕೈಗಾರಿಕೆಗಳಿಲ್ಲ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಆಗಲೇ ಬೇಕಾದ 5 ಪ್ರಮುಖ ಬೇಡಿಕೆಗಳು ಇವು.
ತಾಲೂಕು ಘೋಷಣೆಯಾಗಿ 5 ವರ್ಷಗಳಾಗಿವೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಬೇಕು ಎನ್ನುವ ಬೇಡಿಕೆ ಈಡೇರಿಲ್ಲ. 100 ಹಾಸಿಗೆಗಳ ತಾಲೂಕು ಆಸ್ಪತ್ರೆಯಾಗಬೇಕಿದೆ.
ಕ್ಷೇತ್ರದ ಜನರ ಆದಾಯದ ಮೂಲಗಳಲ್ಲಿ ಮೀನುಗಾರಿಕೆ ಪ್ರಮುಖ. ಸುಮಾರು 40 ಕಿ.ಮೀ. ನಷ್ಟು ಕಡಲ ತೀರವನ್ನು ಹೊಂದಿರುವ ಕ್ಷೇತ್ರವಿದು. ಗಂಗೊಳ್ಳಿ, ಮರವಂತೆ, ಕೊಡೇರಿ, ಶಿರೂರಲ್ಲಿ ಬಂದರುಗಳಿವೆ. ಗಂಗೊಳ್ಳಿ ಬಂದರಿನ ಅಭಿವೃದ್ಧಿ ಮಲ್ಪೆಗೆ ಹೋಲಿಸಿದರೆ ಸಾಲದು. ಕುಸಿದ ಜೆಟ್ಟಿಯ ದುರಸ್ತಿ ಆಗಿಲ್ಲ. ಮರವಂತೆ ಹೊರ ಬಂದರಿನ 2ನೇ ಹಂತದ ಕಾಮಗಾರಿ ಆರಂಭವಾಗಿಲ್ಲ. ಕೊಡೇರಿಯಲ್ಲೂ ಕಾಮಗಾರಿ ಕುಂಟುತ್ತ ಸಾಗಿದೆ.
ಗಂಗೊಳ್ಳಿ, ನಾಡ, ಉಪ್ಪುಂದ ದೊಡ್ಡ ಗ್ರಾ.ಪಂ.ಗಳಾಗಿದ್ದು ಪಟ್ಟಣ ಪಂಚಾಯತ್ ಆಗಬೇಕಿವೆ.
ಬೈಂದೂರು ಬಿಟ್ಟರೆ ಹೆದ್ದಾರಿಯುದ್ದಕ್ಕೂ ಕೋಟೇಶ್ವರದವರೆಗೆ ಸರಕಾರಿ ಪದವಿ ಕಾಲೇ ಜುಗಳಿಲ್ಲ. ನಾವುಂದದಲ್ಲಿ ಕಾಲೇಜು ಆದರೆ ಕಂಬದಕೋಣೆ, ಕಾಲೊ¤àಡು, ಕಿರಿಮಂಜೇ ಶ್ವರ, ನಾಗೂರು, ನಾಡ, ಪಡುಕೋಣೆ, ಅರೆ ಶಿರೂರು, ಗೋಳಿಹೊಳೆ, ಮರವಂತೆ, ತ್ರಾಸಿ ವಿದ್ಯಾರ್ಥಿಗಳಿಗೆ ಅನುಕೂಲ. ನೆಂಪುವಿನಲ್ಲಿ ಕಾಲೇಜು ಆದರೆ ಕೊಲ್ಲೂರು, ಚಿತ್ತೂರು, ಜಡ್ಕಲ್, ಮುದೂರು, ವಂಡ್ಸೆ, ನೇರಳಕಟ್ಟೆ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಪ್ರಯೋಜನ.
ಗೋಳಿಹೊಳೆ, ಹಳ್ಳಿಹೊಳೆ, ಕೆರಾಡಿ, ಬೆಳ್ಳಾಲ, ಆಲೂರು, ಕಾಲ್ತೋಡು ಗ್ರಾಮಗಳ ಕೆಲವೆಡೆ ಕನಿಷ್ಠ ಮಟ್ಟದ ನೆಟ್ವರ್ಕ್ ಸಿಗದು. ಅನಾ ರೋಗ್ಯ ಉಂಟಾದರೆ ಕರೆ ಮಾಡಿ, ವಾಹನ ಕರೆಸಲು ಕಿ.ಮೀ. ಗಟ್ಟಲೆ ದೂರ ಹೋಗುವ ಸ್ಥಿತಿ ಬದಲಾಗಬೇಕೆಂಬುದು ಸ್ಥಳೀಯರ ಆಗ್ರಹ.
~ ಪ್ರಶಾಂತ್ ಪಾದೆ