Advertisement
ನಗರದಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾಲಿಕೆಯಿಂದ ನಗರದಲ್ಲಿ ಏಳು ಭಾಗಗಳಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಘಟಕಗಳಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಸುತ್ತಮುತ್ತಲಿನ ಭಾಗಗಳಲ್ಲಿ ದುರ್ವಾಸನೆ ಹರಡಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿ ಘಟಕಗಳನ್ನು ಸ್ಥಗಿತಗೊಳಿಸಬೇಕೆಂಬ ಒತ್ತಾಯಗಳು ಹೆಚ್ಚಾಗಿವೆ.
Related Articles
ಬೊಮ್ಮನಹಳ್ಳಿ ವಲಯದಲ್ಲಿನ ಕೆಸಿಡಿಸಿ ಹಾಗೂ ಸ್ಥಳೀಯರ ತೀವ್ರ ವಿರೋಧಕ್ಕೆ ಎದುರಾಗಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಸೀಗೇಹಳ್ಳಿ ಹಾಗೂ ಕನ್ನಹಳ್ಳಿ ತ್ಯಾಜ್ಯ ಸಂಸ್ಕರಣೆ ಘಟಕಗಳಲ್ಲಿ ಹಾಲಿ ಫ್ಯಾಕ್ಟರಿ ಮೀಟರ್‌ನ್ನು ಪ್ರಾಯೋಗಿಕವಾಗಿ ಅಳವಡಿಕೆ ಮಾಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈ ಮೂರು ಘಟಕಗಳಲ್ಲಿ ಉಪಕರಣ ಯಶಸ್ವಿಯಾದರೆ, ಬಳಿಕ ನಗರದ ಇತರೆ ಘಟಕಗಳು ಹಾಗೂ ಕ್ವಾರಿಗಳ ಬಳಿಯೂ ಯಂತ್ರಗಳ ಅಳವಡಿಕೆ ಮುಂದಾಗಲು ಪಾಲಿಕೆ ಚಿಂತನೆ ನಡೆಸಿದೆ.
Advertisement
ಪಟ್ಟಭದ್ರ ಹಿತಾಸಕ್ತಿಗಳಿಗೆ ಕಡಿವಾಣ!ಪಾಲಿಕೆಯಿಂದಲೇ ಹಲವು ಘಟಕಗಳನ್ನು ವೈಜ್ಞಾನಿಕವಾಗಿ ನಡೆಸಲಾಗುತ್ತಿದೆಯಾದರೂ, ಕೆಲ ಘಟಕಗಳ ಬಳಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಘಟಕಗಳನ್ನು ಮುಚ್ಚಿಸಬೇಕೆಂಬ ದುರುದ್ದೇಶದಿಂದ ದುರ್ವಾಸನೆ ತೀವ್ರವಾಗಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾ ಸಹ ಇದರಲ್ಲಿ ಭಾಗಿಯಾಗಿದ್ದು, ಅದರ ಹಿನ್ನೆಲೆಯಲ್ಲಿಯಲ್ಲಿ ಮೀಟರ್‌ಗಳ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ನಿಜವಾಗಿಯೂ ಘಟಕಗಳ ಬಳಿ ದುರ್ವಾಸನೆ ಇದೆಯೇ ಇಲ್ಲವೆ ಎಂಬ ಅಂಶ ತಿಳಿಯಲಿದ್ದು, ಇದರಿಂದ ಪಟ್ಟಭದ್ರ ಹಿತಾಸಕ್ತಿಗಳಿಗೆ ಹಿನ್ನಡೆಯಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ವಿಷಯುಕ್ತ ಅಂಶಗಳ ಪತ್ತೆ!
ಜರ್ಮನಿ ಮೂಲದ ಸಂಸ್ಥೆಯೊಂದು ಹಾಲಿ ಫ್ಯಾಕ್ಟರಿ ಮೀಟರ್‌ಗಳನ್ನು ಪಾಲಿಕೆಯ ಕೆಲ ಘಟಕಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲು ಮುಂದಾಗಿದೆ. ಅದರ ಹಿನ್ನೆಲೆಯಲ್ಲಿ ಈಗಾಗಲೇ ಪಾಲಿಕೆಯ ಅಧಿಕಾರಿಗಳನ್ನು ಸಂಪರ್ಕಿಸಿ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ. ಪಾಲಿಕೆಯ ಅಧಿಕಾರಿಗಳು ಈಗಾಗಲೇ ಯಂತ್ರದ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಶೀಘ್ರದಲ್ಲಿಯೇ ನಗರದ ಕೆಲ ಘಟಕಗಳಲ್ಲಿ ಯಂತ್ರಗಳನ್ನು ಅಳವಡಿಕೆ ಮಾಡಲಿದ್ದಾರೆ. ಕೆಲ ತಿಂಗಳ ಹಿಂದೆ ನಗರದ ಕೆಸಿಡಿಸಿ ಘಟಕದ ಬಳಿ ದುರ್ವಾಸನೆ ಹೆಚ್ಚಾಗಿತ್ತು. ಘಟಕವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕೆಲ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದವು. ಆದರೆ, ಸ್ಥಳ ಪರಿಶೀಲನೆ ನಡೆಸಿದ ವೇಳೆ ದುರ್ವಾಸನೆ ಇರಲಿಲ್ಲ. ಇತ್ತೀಚೆಗೆ ಜರ್ಮನಿ ಮೂಲಕ ಕಂಪೆನಿಯೊಂದು ಹಾಲಿ ಫ್ಯಾಕ್ಟರಿ ಮೀಟರ್ ನೀಡುವ ಪ್ರಸ್ತಾವನೆಯನ್ನು ಪಾಲಿಕೆಗೆ ಸಲ್ಲಿಸಿದೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕೆಲ ಘಟಕಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗುವುದು.
-ಸರ್ಫರಾಜ್ ಖಾನ್, ಘನತ್ಯಾಜ್ಯ ನಿರ್ವಹಣೆ ಮತ್ತು ಆರೋಗ್ಯ ವಿಭಾಗದ ಜಂಟಿ ಆಯುಕ್ತ * ವೆಂ.ಸುನೀಲ್ ಕುಮಾರ್