Advertisement

ರೈತರ ಜೊತೆಗಿನ ಚೆಲ್ಲಾಟ ಒಳ್ಳೆಯದಲ್ಲ: ಬಿಜೆಪಿ ಸರಕಾರಕ್ಕೆ ಹೆಚ್ ಡಿಕೆ ಎಚ್ಚರಿಕೆ

03:56 PM Jan 13, 2023 | Team Udayavani |

ಕಲಬುರಗಿ: ರಾಜ್ಯದಲ್ಲಿನ ರೈತ ವರ್ಗದ ಜೊತೆಗಿನ ಬಿಜೆಪಿ ಸರ್ಕಾರದ ಚೆಲ್ಲಾಟ ಒಳ್ಳೆಯದಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆ ಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ತೊಗರಿ ಬೆಳೆಗಾರರೊಂದಿಗೆ ಸೇರಿಕೊಂಡು ಪ್ರತಿಭಟನೆ ಮಾಡಿದ ಅವರು, ರಾಜ್ಯದಲ್ಲಿ ತೊಗರಿ ಬೆಳೆ ಸಂಪೂರ್ಣವಾಗಿ ನೆಟೆ ರೋಗಕ್ಕೆ ತುತ್ತಾಗಿ ಹೋಗಿದೆ. ಆದರೂ ಸರ್ಕಾರ ಜಾನ ಕುರುಡುತನ ತೋರುತ್ತಿದೆ. ಈಗಾಗಲೇ ಕಲ್ಯಾಣವೂ ಸೇರಿದಂತೆ ಎಲ್ಲಾ ಕಡೆಗಳಲ್ಲಿ ತೊಗರಿ ರಾಶಿ ಮಾಡುತ್ತಿರುವ ರೈತರು ಸಂಕಷ್ಟದಲ್ಲಿದ್ದಾರೆ. ನಿರೀಕ್ಷೆ ಮಾಡಿದ್ದಷ್ಟು ಬೆಳೆ ಬಂದಿಲ್ಲ.ಕಲಬುರಗಿ, ಯಾದಗಿರ ಜಿಲ್ಲೆಯಲ್ಲಂತೂ ರೋಗದಿಂದ ತೊಗರಿ ಹಾಳಾಗಿ ಹೋಗಿದೆ. ಈ ಸಂದರ್ಭದಲ್ಲಿ ಅವರ ನೆರವಿಗೆ ಬರಬೇಕಾದ ಸರ್ಕಾರ ಕೇವಲ ಹೇಳಿಕೆಗಳಿಗೆ ಸೀಮಿತವಾಗಿದೆ. ಅದು ಅಲ್ಲದೆ ಬೆಳೆ ವಿಮೆ ಕೂಡ ರೈತರ ಕೈ ಸೇರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿವೇಕಾನಂದರ ಹೆಸರಲ್ಲಿ ಯುವಜನೋತ್ಸವ ಮಾಡಿದ್ದಾರೆ. ಆದರೆ ಅಲ್ಲಿ ವಿವೇಕಾನಂದರ ಫೋಟೋಗಳನ್ನೇ ಹಾಕಿಲ್ಲ. ರೈತರ ಹೆಸರಿನಲ್ಲಿ ರಾಜಕೀಯ ಮಾಡಿ, ಅವರಿಗೆ ಯಾವುದೇ ಅನುಕೂಲ ಮಾಡಿ ಕೊಟ್ಟಿಲ್ಲ.ಇನ್ನು 3 ತಿಂಗಳಿನಲ್ಲಿ ರಾಜ್ಯದ ಜನ ಬಿಜೆಪಿಯನ್ನು ನಿರ್ಮೂಲನ ಮಾಡುತ್ತಾರೆ ಎಂದು ಹರಿಹಾಯ್ದರು.

ತೊಗರಿ ಬೆಳೆಗಾರರ ಬಗ್ಗೆ ವಿಶೇಷ ಗಮನ ಸೆಳೆಯಬೇಕು ಎಂದು ಹೇಳಿದ್ದೆ. ಹೀಗಾಗಿ ಬೆಳಗಾವಿ ಅಧಿವೇಶನದಲ್ಲಿ ಬಂಡೆಪ್ಪ ಕಾಶೆಂಪೂರ್ ಪ್ರಸ್ತಾಪ ಮಾಡಿದ್ದರು. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಓರ್ವ ಲಂಬಾಣಿ ಸಮಾಜದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆ ಕಾರ್ಯಕ್ರಮ, ಈ ಕಾರ್ಯಕ್ರಮ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಹೇಳುವುದು ಒಂದು.ಮಾಡುವುದು ಮತ್ತೊಂದು ಇಂತಹ ಸರಕಾರದಿಂದ ಜನರ ಸಮಸ್ಯೆ ತೀರಿಸಲು ಆಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

Advertisement

ರೈತರಿಗೆ ಬೆಳೆ ವಿಮೆ ಹಣ ಸಿಕ್ಕಿಲ್ಲ.ಸರ್ಕಾರದಿಂದ ಪರಿಹಾರವೂ ಸಿಕ್ಕಿಲ್ಲ. ಖಾಸಗಿ ಕಂಪನಿಗಳು ರೈತರ ಹಣ ಕೊಳ್ಳೆ ಹೊಡೆದಿವೆ. ಹೀಗಾದರೆ ರೈತರ ಗತಿ ಏನು. ರೈತರ ಆದಾಯ ದ್ವಿಗುಣ ಮಾಡುವ ಮಾತುಕೊಟ್ಟಿದ್ದ ಮೋದಿ ಅವರು ಎಲ್ಲಿ. ಅವರನ್ನು ಮುಖ್ಯಮಂತ್ರಿ ಆದಿಯಾಗಿ ಯಾವ ಸ್ಥಳೀಯ ನಾಯಕರು ಕೇಳುತ್ತೀರಿ ಎಂದು ಪ್ರಶ್ನಿಸಿದರು.

ಈ ವೇಳೆಯಲ್ಲಿ ನೆಟೆ ರೋಗಕ್ಕೆ ತುತ್ತಾಗಿದ್ದ ತೊಗರಿ ಗಿಡಗಳನ್ನು ಹಿಡಿದು ರೈತರು ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ನುಗ್ಗಿದರು.

Advertisement

Udayavani is now on Telegram. Click here to join our channel and stay updated with the latest news.

Next