Advertisement
ಹೀಗೆ ಹಾವು-ಏಣಿ ಆಟದಂತೆ ಸಾಗಿದ ವಿಶ್ವಕಪ್ ಹಾಕಿ ಪಂದ್ಯಾವಳಿಯ ಭಾನುವಾರದ ಭಾರತ-ಬೆಲ್ಜಿಯಂ ನಡುವಿನ ಅತ್ಯಂತ ಮಹತ್ವದ ಪಂದ್ಯ 2-2 ಡ್ರಾದೊಂದಿಗೆ ಮುಗಿದಿದೆ.ಆರಂಭದ ಪರಿಸ್ಥಿತಿ ಕಂಡಾಗ ಭಾರತ ಈ ಪಂದ್ಯವನ್ನು ಸೋಲುತ್ತದೆಂದೇ ಭಾವಿಸಲಾಗಿತ್ತು. ಅಲೆಕ್ಸಾಂಡರ್ ಹೆಂಡ್ರಿಕ್ಸ್ 8ನೇ ನಿಮಿಷದಲ್ಲೇ ಪೆನಾಲ್ಟಿ ಕಾರ್ನರ್ ಮೂಲಕ ಗೋಲೊಂದನ್ನು ಬಾರಿಸಿ ಬೆಲ್ಜಿಯಂಗೆ ಆತ್ಮವಿಶ್ವಾಸ ತುಂಬಿದರು. ಈ ಹೊಡೆತದಿಂದ ತತ್ತರಿಸಿದ ಭಾರತದ ಆಟಗಾರರು ಒಂದಿಷ್ಟು ಹಿಡಿತ ಕಳೆದುಕೊಂಡದ್ದು ಸುಳ್ಳಲ್ಲ. ದ್ವಿತೀಯ ಕ್ವಾರ್ಟರ್ ಮುಗಿದು ಸುಮಾರು 8 ನಿಮಿಷಗಳ ತನಕ ಭಾರತ ಗೋಲಿನ ಹುಡುಕಾಟದಲ್ಲೇ ಇತ್ತು. ಕೊನೆಗೂ 39ನೇ ನಿಮಿಷದಲ್ಲಿ ಇದಕ್ಕೆ ಕಾಲ ಕೂಡಿಬಂತು. ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಬೆಲ್ಜಿಯಂ ಗೋಲಿಯನ್ನು ವಂಚಿಸುವಲ್ಲಿ ಯಶಸ್ವಿಯಾದರು.
ಭಾರತ ಈ ಮೇಲುಗೈಯನ್ನು ಉಳಿಸಿಕೊಂಡು ಗೆಲುವಿನ ಸಂಭ್ರಮ ಆಚರಿಸಬಹುದಿತ್ತು. ಆದರೆ “ರೆಡ್ ಲಯನ್ಸ್’ ಖ್ಯಾತಿಯ ಬೆಲ್ಜಿಯಂ ಹಿನ್ನಡೆಯ ಹೊರತಾಗಿಯೂ ಪಂದ್ಯವನ್ನು ಸಮಬಲಕ್ಕೆ ತರಲು ಇನ್ನಿಲ್ಲದ ಕಸರತ್ತು ನಡೆಸತೊಡಗಿತು. 56ನೇ ನಿಮಿಷದಲ್ಲಿ ಸೈಮನ್ ಗಗ್ನರ್ಡ್ ಭಾರತದ ಕೋಟೆಗೆ ದಾಳಿ ನಡೆಸಿ ಫೀಲ್ಡ್ ಗೋಲ್ ಒಂದನ್ನು ಬಾರಿಸಿಯೇ ಬಿಟ್ಟರು.
Related Articles
Advertisement
ಭಾರತಕ್ಕೆ ಅಗ್ರಸ್ಥಾನ: 2 ಪಂದ್ಯಗಳ ಬಳಿಕ 4 ಅಂಕ ಹೊಂದಿರುವ ಆತಿಥೇಯ ಭಾರತ “ಸಿ’ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಬೆಲ್ಜಿಯಂ ಕೂಡ 4 ಅಂಕ ಗಳಿಸಿದೆ. ಆದರೆ ಗೋಲು ವ್ಯತ್ಯಾಸದ ಲೆಕ್ಕಾಚಾರದಿಂದ 2ನೇ ಸ್ಥಾನದಲ್ಲಿದೆ. ಗುಂಪಿನ ಅಗ್ರಸ್ಥಾನ ಅಲಂಕರಿಸುವ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿದೆ.