Advertisement

ಜಿ-20 ಶೃಂಗಸಭೆಗಾಗಿ ತಂದಿದ್ದ ಹೂವಿನ ಕುಂಡಗಳನ್ನು ಐಷಾರಾಮಿ ಕಾರಿನಲ್ಲಿ ಬಂದು ಕದ್ದೊಯ್ದರು

05:36 PM Feb 28, 2023 | Team Udayavani |

ನವದೆಹಲಿ: ಜಿ- 20 ಶೃಂಗಸಭೆಗೆಂದು ತರಿಸಲಾಗಿದ್ದ ಹೂವಿನ ಕುಂಡಗಳನ್ನು ಐಷಾರಾಮಿ ಕಾರಿನಲ್ಲಿ ಬಂದ ವ್ಯಕ್ತಿಗಳು ಕದ್ದೊಯ್ದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

Advertisement

ದೆಹಲಿ-ಗುರುಗ್ರಾಮ್ ಗಡಿಯಲ್ಲಿ ಜಿ-20 ಶೃಂಗಸಭೆಗಾಗಿ ಇರಿಸಲಾಗಿದ್ದ ಹೂವಿನ ಕುಂಡಗಳನ್ನು ಕಡಿಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ ಅಂದಹಾಗೆ ಜಿ-20 ಶೃಂಗಸಭೆ ನಡೆಯುವ ಸಭಾಂಗಣದ ಹೊರಗೆ ಹಲವಾರು ಬಗೆಯ ಹೂವಿನ ಕುಂಡಗಳನ್ನು ಇರಿಸಲಾಗಿದೆ ಚಿತ್ರದಲ್ಲಿ ಕಾಣುವಂತೆ ಐಷಾರಾಮಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ತನ್ನ ಕಾರು ಚಾಲಕನ ಸಹಾಯದಿಂದ ಹಲವಾರು ಹೂವಿನ ಕುಂಡಗಳನ್ನು ಕಾರಿನಲ್ಲಿ ತುಂಬಿಸಿ ಕೊಡೊಯ್ದಿದ್ದಾರೆ. ಈ ಘಟನೆಯನ್ನು ಅಲ್ಲಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯ ಅಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದ್ದು ಹೂವಿನ ಕುಂಡಗಳನ್ನು ಕೊಂಡೊಯ್ದ ವ್ಯಕ್ತಿಯ ಗುರುತು ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸರಕಾರಿ ಭೂಮಿಯಲ್ಲಿ ಸ್ಮಾರಕ ನಿರ್ಮಾಣ: ಹುತಾತ್ಮ ಯೋಧನ ತಂದೆಯನ್ನು ಥಳಿಸಿ ಬಂಧಿಸಿದ ಪೊಲೀಸರು

Advertisement
Advertisement

Udayavani is now on Telegram. Click here to join our channel and stay updated with the latest news.

Next