ನವದೆಹಲಿ: ಬೆಂಗಳೂರಿಗೆ ನೀರು ಪೂರೈಸುವ ಮೇಕೆದಾಟು ಯೋಜನೆಯ ಬಗ್ಗೆ ರಾಜ್ಯಸಭೆಯಲ್ಲಿ ಸೋಮವಾರ ಕರ್ನಾಟಕದ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿದರು.
“ಬೆಂಗಳೂರಿನಲ್ಲಿ 1.27 ಕೋಟಿ ಜನರಿದ್ದಾರೆ. ಕುಡಿಯಲು 54 ಟಿಎಂಸಿ ನೀರಿನ ಅಗತ್ಯವಿದೆ. ಆದರೆ ಈಗ ಕೇವಲ 17 ಟಿಎಂಸಿ ನೀರು ಸಿಗುತ್ತಿದೆ. ಹಾಗಾಗಿ ಸಮುದ್ರಕ್ಕೆ ಸೇರುತ್ತಿರುವ ನೀರನ್ನು ಕುಡಿಯಲು ಬಳಸಲೆಂದು ಮೇಕೆದಾಟು ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ ಅದಕ್ಕೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕುತ್ತಿದೆ’ ಎಂದು ಅವರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ:ಮೀಡಿಯಾ ಒನ್ ಚಾನೆಲ್ ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ
ತಮಿಳುನಾಡು ಸರ್ಕಾರವು ನಮ್ಮ ಸರ್ಕಾರದ ಒಪ್ಪಿಗೆಯನ್ನೂ ಪಡೆಯದೆ ಕಾವೇರಿ ಜಲಾನಯನ ಪ್ರದೇಶದಲ್ಲಿ 3 ಜಲ ವಿದ್ಯುತ್ ಯೋಜನೆ ಆರಂಭಿಸಿದೆ. ಇದರ ಬಗ್ಗೆ ಕೇಂದ್ರ ಸರ್ಕಾರವೂ ಮಾತಾಡುತ್ತಿಲ್ಲ. ಮೇಕೆದಾಟು ಯೋಜನೆಯ ಬಗ್ಗೆ ಕೇಂದ್ರ ತಮಿಳುನಾಡು ಸರ್ಕಾರಕ್ಕೇ ಬೆಂಬಲ ನೀಡುತ್ತಿರುವಂತಿದೆ. ಈ ವಿಚಾರವಾಗಿ ರಾಜ್ಯದ ನಿಯೋಗವು ಪ್ರಧಾನ ಮಂತ್ರಿಯವರನ್ನು ನೇರವಾಗಿ ಭೇಟಿ ಮಾಡಲು ನಿಶ್ಚಯಿಸಿದೆ ಎಂದು ಅವರು ಹೇಳಿದ್ದಾರೆ.