Advertisement

ರಂಜನ್ ದೇಶಪ್ರೇಮಕ್ಕೆ ಸಲಾಂ…ಒಂದು ಲಕ್ಷಕ್ಕೂ ಅಧಿಕ ರಾಷ್ಟ್ರಧ್ವಜ ಸಂಗ್ರಹ; ಏನಿದರ ಉದ್ದೇಶ?

01:53 PM Aug 14, 2021 | ನಾಗೇಂದ್ರ ತ್ರಾಸಿ |

ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸಗಳಿರುತ್ತವೆ. ನಾಣ್ಯ ಸಂಗ್ರಹ, ಅಂಚೆ ಚೀಟಿ, ಪೆನ್, ಪೆನ್ಸಿಲ್, ಬೆಂಕಿ ಪೊಟ್ಟಣ ಹೀಗೆ ತರೇವಾರಿ ಹವ್ಯಾಸಗಳಿರುವ ವ್ಯಕ್ತಿಗಳನ್ನು ನೋಡುತ್ತೇವೆ. ಆದರೆ ಕೋಲ್ಕತಾದ ಹೌರಾದ ಬಲ್ಲೈ ನಿವಾಸಿ ಪ್ರಿಯೋ ರಂಜನ್ ಸರ್ಕಾರ್ ಕಳೆದ ಕೆಲವು ವರ್ಷಗಳಿಂದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ನಂತರ ಜನರು ರಾಷ್ಟ್ರಧ್ವಜವನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಧ್ವಜವನ್ನು ಸಂಗ್ರಹಿಸಿ ಇಡುತ್ತಿದ್ದಾರೆ. ಈವರೆಗೆ ಸರ್ಕಾರ್ ತಮ್ಮ ಮನೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಧ್ವಜವನ್ನು ಸಂಗ್ರಹಿಸಿದ್ದಾರೆ!

Advertisement

ಈ ಸಂಗ್ರಹದ ಹಿಂದಿದೆ ದೇಶಪ್ರೇಮ:

ಹೀಗೆ ಧ್ವಜವನ್ನು ಸಂಗ್ರಹಿಸುವುದಕ್ಕೆ ಒಂದು ಕಾರಣವಿದೆಯಂತೆ, ರಾಷ್ಟ್ರಧ್ವಜದ ಘನತೆಯನ್ನು ರಕ್ಷಿಸುವುದು ನನ್ನ ಮೂಲ ಉದ್ದೇಶವಾಗಿದೆ ಎನ್ನುತ್ತಾರೆ ಸರ್ಕಾರ್. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಹೋಗುವ ದಾರಿಯಲ್ಲಿ, ಕಂಡ, ಕಂಡಲ್ಲಿ ಬಿಸಾಡುವ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿಸಲು ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತರಬಹುದು ಎಂಬ ವಿಶ್ವಾಸ ತನ್ನದಾಗಿದೆ ಎನ್ನುತ್ತಾರೆ.

ಹೌರಾದ ಈ ಫ್ಲ್ಯಾಗ್ ಮ್ಯಾನ್ ಜನವರಿ 26(ಗಣರಾಜ್ಯೋತ್ಸವ), ಜನವರಿ 23 (ನೇತಾಜಿ ಜಯಂತಿ) ಮತ್ತು ಆಗಸ್ಟ್ 15 (ಸ್ವಾತಂತ್ರ್ಯ ದಿನಾಚರಣೆ) ರಂದು ತುಂಬಾ ಬ್ಯುಸಿಯಲ್ಲಿ ಇರುತ್ತಾರೆ. ಅದಕ್ಕೆ ಕಾರಣ ಸಂಭ್ರಮಾಚರಣೆ ನಂತರ ಜನರು ನಗರದಾದ್ಯಂತ ನೂರಾರು ಧ್ವಜಗಳನ್ನು ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಎಸೆದು ಹೋಗಿರುತ್ತಾರೆ.

Advertisement

ರಾಷ್ಟ್ರಧ್ವಜ ನಮ್ಮ ಅಸ್ಮಿತೆಯಾಗಿದೆ ಎಂಬುದಾಗಿ ನನ್ನ ತಾಯಿ ಮತ್ತು ಅಜ್ಜಿ ಯಾವಾಗಲೂ ಹೇಳುತ್ತಿರುತ್ತಾರೆ. ಆ ನಿಟ್ಟಿನಲ್ಲಿ ಸಂಭ್ರಮದ ನಂತರ ಧ್ವಜವನ್ನು ರಸ್ತೆಯಲ್ಲಿ, ಮೈದಾನಗಳಲ್ಲಿ ಎಸೆದು ಹೋಗುವವರ ವಿರುದ್ಧ ಸರ್ಕಾರ ಕಠಿಣ ನಿಯಮವನ್ನು ರೂಪಿಸಬೇಕು ಎಂದು ಆಲೋಚಿಸುತ್ತಿದ್ದೇನೆ ಎಂದು ಸರ್ಕಾರ್ ನ್ಯೂಸ್ 18 ಜತೆ ಮಾತನಾಡುತ್ತ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಧ್ವಜ ಸಂಗ್ರಹಕ್ಕೆ ನನಗೆ ನನ್ನ ತಾಯಿಯೇ ಸ್ಫೂರ್ತಿ ಎನ್ನುತ್ತಾರೆ ಸರ್ಕಾರ್, ಇವರ ತಾಯಿಯೂ ಕೂಡಾ ರಸ್ತೆ ಬದಿಯಲ್ಲಿ ಎಸೆದು ಹೋದ ಧ್ವಜಗಳನ್ನು ಸಂಗ್ರಹಿಸುತ್ತಿದ್ದರು ಎಂಬುದಾಗಿ ನೆನಪಿಸಿಕೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸರ್ಕಾರ್ ಧ್ವಜಗಳನ್ನು ಸಂಗ್ರಹಿಸಿದ್ದು, ಇದೀಗ ಅವರ ಮನೆಯೊಂದು ರಾಷ್ಟ್ರಧ್ವಜದ ಪುಟ್ಟ ಮ್ಯೂಸಿಯಂನಂತಾಗಿದೆ. ಹೌರಾ ಹಾಗೂ ಸುತ್ತಮುತ್ತಲಿನ ಜನರು ಸರ್ಕಾರ್ ಅವರ ರಾಷ್ಟ್ರಧ್ವಜ ಸಂಗ್ರಹವನ್ನು ವೀಕ್ಷಿಸಲು ಮನೆಗೆ ಭೇಟಿ ನೀಡುತ್ತಿದ್ದಾರಂತೆ. ಪ್ರತಿ ವರ್ಷ ಸರ್ಕಾರ್ ಅವರು ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ತಮ್ಮ ಮನೆಯ ಮುಂದೆ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವಂತೆ ಮನವಿ ಮಾಡಿಕೊಳ್ಳುತ್ತಾರೆ ಎಂದು ವರದಿ ವಿವರಿಸಿದೆ.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next