ಹುಮನಾಬಾದ: ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾನುವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮೃತ ರೈತ ಶಿವರಾಜ ಅವರ ಪತ್ನಿ ಬಕ್ಕಮ್ಮಾ ಮಾತನಾಡಿ, ಸಾಲಬಾಧೆ ತಾಳಲಾರದೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಸಾಲದ ಹಿನ್ನೆಲೆಯಲ್ಲಿ ಒಂದು ಎಕರೆ ಭೂಮಿ ಮಾರಾಟ ಮಾಡಿ ಸಾಲ ತೀರಿಸಲಾಗುತ್ತಿದೆ.
ಮನೆಯಲ್ಲಿನ ಹೆಣ್ಣು ಮಗಳಿಗೆ ಮದುವೆ ಮಾಡಲು ಸಹ ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಕಾರಣ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಮಗಳಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಕೇಳಿಕೊಂಡರು. ಅದೇ ಗ್ರಾಮದ ಚನ್ನಯ್ನಾ ಸ್ವಾಮಿ, ಚಂದ್ರಪ್ಪ ಅವರ ಕುಟುಂಬಸ್ಥರ ಸಮಸ್ಯೆ ಆಲಿಸಿದ ಅಮಿತ್ ಶಾ, ರೈತ ಕುಟುಂಬಗಳಿಗೆ ಯಾವುದೇ ಭರವಸೆ ನೀಡಿಲ್ಲ. ಕೇವಲ ಮೃತ ರೈತರ ಸಂಬಂಧಿ ಸಿದ ದಾಖಲೆಗಳನ್ನು ಪಡೆದುಕೊಂಡು 10 ನಿಮಿಷದಲ್ಲಿ ಅಲ್ಲಿಂದ ತೆರಳಿದರು.
ಬುದ್ಧನಿಗೆ ವಿಶೇಷ ಪೂಜೆ: ಬೀದರ ಜಿಲ್ಲಾ ಪ್ರವಾಸ ವೇಳೆ ತಾಲೂಕಿನ ರೇಕುಳಗಿ ಮೌಂಟ್‌ಗೆ ಕುಟುಂಬ ಸಮೇತ ಭೇಟಿ ನೀಡಿದ ಅಮಿತ್ ಶಾ ಬುದಟಛಿನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬುದಟಛಿ ವಿಹಾರದ ಮುಖ್ಯಸ್ಥ ಭಂತೆ ರೇವತ ಹಾಗೂ ಭಂತೆ ಧರ್ಮಪಾಲ ನೇತೃತ್ವದಲ್ಲಿ ಅಮಿತ್ ಶಾ ಹಾಗೂ ಪತ್ನಿ ಸೊನಲ್ ಶಾ ಬುದಟಛಿ ಮೂರ್ತಿಗೆ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಭಂತೆ ರೇವತ ಮನವಿ ಸಲ್ಲಿಸಿ, ಮೌಂಟ್ ಬುದಟಛಿ ವಿಹಾರವನ್ನು ಪ್ರವಾಸಿ ತಾಣವಾಗಿ ಮಾಡುವ ನಿಟ್ಟಿನಲ್ಲಿ ವಿವಿಧ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದರು. ನಂತರ ಟೀ ಕುಡಿದು ಅಲ್ಲಿಂದ ತೆರಳಿದರು. ಸಂಸದ ಭಗವಂತ ಖೂಬಾ, ಸೂರ್ಯಕಾಂತ ನಾಗಮಾರಪಳ್ಳಿ, ಶಾಸಕ ಪ್ರಭು ಚವ್ಹಾಣ, ಶೈಲೇಂದ್ರ ಬೇಲ್ದಾಳೆ ಸೇರಿ ಬಿಜೆಪಿ ಮುಖಂಡರು ಇದ್ದರು.