Advertisement

ಒಂದು ಸೀರೆ ಉಡಿಸಲು 2 ಲಕ್ಷ ರೂ.. ಅಂದು ಸಾರಿಯನ್ನು ದ್ವೇಷಿಸುತ್ತಿದ್ದಾಕೆ ಇಂದು ಲಕ್ಷಾಧಿಪತಿ

01:35 PM May 18, 2023 | Team Udayavani |

ಕೆಲ ಹೆಣ್ಣು ಮಕ್ಕಳಿಗೆ ಸಾಂಪ್ರದಾಯಿಕ ಉಡುಗೆ ಸೀರೆ ಎಂದರೆ ಪಂಚಪ್ರಾಣ. ಹೆಣ್ಣು ಮಕ್ಕಳು ಹೆಚ್ಚಾಗಿ ಮದುವೆ ಹಾಗೂ ಇತರ ಕಾರ್ಯಕ್ರಮಗಳಿಗೆ ಸೀರೆ ಉಟ್ಟು ಹೋಗುತ್ತಾರೆ. ಆದರೆ ಈ ಸೀರೆಯನ್ನು ಉಡುವುದು ಕೆಲವರಿಗೆ ಇಷ್ಟವಾದರೆ ಕೆಲವರಿಗೆ  ಸೀರೆ ಉಡುವ ವಿಧಾನ ಬಲು ಕಷ್ಟ.

Advertisement

ಇತ್ತೀಚಿನ ಯುವತಿಯರಿಗೆ ಸೀರೆ ಉಡಿಸಲು ಹಿರಿಯರೇ ಬೇಕು. ಆದರೆ ಇಲ್ಲೊಬ್ಬರು ಬೇರೆಯವರಿಗೆ ಸೀರೆ ಉಡಿಸಿಯೇ ಲಕ್ಷಾಧಿಪತಿ ಆಗಿದ್ದಾರೆ ಎಂದರೆ ನೀವು ನಂಬುತ್ತೀರಾ?

ಡಾಲಿ ಜೈನ್ ಎಂಬ ಮಹಿಳೆಯ ಪರಿಚಯ ಬಹುತೇಕ ಸೆಲೆಬ್ರಿಟಿಗಳಿಗೆ ಗೊತ್ತಿದೆ. ಬಿಟೌನ್‌ ಸೆಲೆಬ್ರಿಟಿಗಳ ಮದುವೆ, ಅವರು ಹೋಗುವ ಅವಾರ್ಡ್‌ ಕಾರ್ಯಕ್ರಮ ಅಥವಾ ಇತರ ಕಾರ್ಯಕ್ರಮಗಳಿಗೆ ಡಾಲಿ ಜೈನ್‌ ಅವರು ಉಡಿಸಿದ ಸೀರೆಯನ್ನೇ ಹಾಕಿಕೊಂಡು ಹೋಗುತ್ತಾರೆ.

ಮದುವೆಯ ಮೊದಲು ಸೀರೆ ಎಂದರೆ ದ್ವೇಷ ಮಾಡುತ್ತಿದ್ದ ಡಾಲಿ ಜೈನ್‌ ಅವರಿಗೆ ಮದುವೆಯ ಬಳಿಕ, ಗಂಡನ ಮನೆಯಲ್ಲಿ ಸೀರೆಯನ್ನೇ ದಿನ ಧರಿಸಬೇಕಿತ್ತು. ಪ್ರತಿದಿನ ಬೆಳ್ಳಗೆ 45 ನಿಮಿಷ ಸೀರೆಯನ್ನು ಧರಿಸುವಲ್ಲೇ ಅವರ ಸಮಯ ವ್ಯರ್ಥವಾಗುತ್ತಿತ್ತು. ಅತ್ತೆಗೆ ತಾನು ಸೀರೆ ಧರಿಸಲ್ಲ, ಕುರ್ತಾವನ್ನು ಧರಿಸುತ್ತೇನೆ ಎನ್ನುತ್ತಿದ್ದರು.

ಆದರೆ ದಿನ ಕಳೆದಂತೆ ಡಾಲಿ ಅವರಿಗೆ ಸೀರೆ ಎಂದರೆ ಪಂಚಪ್ರಾಣ ಎನ್ನುವಷ್ಟರ ಮಟ್ಟಿಗೆ ಆತ್ಮೀಯವಾಯಿತು. ಇಂಥ ಒಳ್ಳೆಯ ಸೀರೆಗಳನ್ನು ಬಿಟ್ಟು ಈಗಿನ ವಯೋಮನದವರು ಗೌನ್ ಗಳನ್ನು ಆಯ್ದುಕೊಳ್ಳುತ್ತಿದ್ದಾರೆಂದು, ಸೀರೆಯನ್ನು ಗ್ಲೋಬಲ್‌ ಮಟ್ಟದಲ್ಲಿ ಮಿಂಚುವಂತೆ ಮಾಡಲು ಅವರು ಅದನ್ನು ತನ್ನ ವೃತ್ತಿಯನ್ನಾಗಿ ಮಾಡಿಕೊಂಡರು.

Advertisement

ಡಾಲಿ ಜೈನ್‌ ಇಂದು ಸೀರೆ ಉಡಿಸುವಲ್ಲಿ ಸೆಲೆಬ್ರಿಟಿ ಎಂದರೆ ತಪ್ಪಾಗದು. ಡಾಲಿ ಇಂದು ವಿವಿಧ ಸೀರೆ ಉಡುವ 325 ವಿಧಾನಗಳನ್ನು ತಿಳಿದುಕೊಂಡಿದ್ದಾರೆ.  ಅವರಿಂದ ಸೀರೆಯನ್ನು ಉಡಿಸಿಕೊಳ್ಳುವವರಲ್ಲಿ ಖ್ಯಾತನಾಮ ನಟಿಯರು ಸೇರಿದ್ದಾರೆ.

ಬಾಲಿವುಡ್‌ ನಟಿ ಆಲಿಯಾ ಭಟ್‌ ಅವರ ಮದುವೆಯ ಸೀರೆಯನ್ನು ಉಡಿಸಿದ್ದು ಡಾಲಿ ಜೈನ್‌ ಅವರೇ. ಇನ್ನು ಕತ್ರಿನಾ ಕೈಫ್‌ ಮದುವೆಯ ಲೆಹೆಂಗಾದೊಂದಿಗೆ ಸೀರೆಯನ್ನು ಉಡಿಸಿದ್ದು ಕೂಡ ಇವರೇ. ಅಂತಾರಾಷ್ಟ್ರೀಯ ಕಾರ್ಯಕ್ರಮ ಮೆಟ್ ಗಾಲಾಗಾಗಿ ನತಾಶಾ ಪೂನಾವಾಲಾ ತೊಟ್ಟ ಸೀರೆಯನ್ನು ಡಾಲಿ ಜೈನ್‌ ಅವರು ಉಡಿಸಿದ್ದಾರೆ. ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿರುವ ಸಾರಾ ಆಲಿಖಾನ್‌ ಅವರು ಉಟ್ಟ ಸೀರೆಯನ್ನು ಡಾಲಿ ಜೈನ್‌ ಅವರು ಉಡಿಸಿದ್ದಾರೆ.

ಇತರೆ ವಧುಗಳು ತಮಗೆ ಯಾವ ರೀತಿಯ ಸೀರೆ ವಿಧಾನ ಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಹೊಂದಿರುವುದಿಲ್ಲ. ಅವರು ಸೆಲೆಬ್ರಿಟಿಗಳನ್ನು ನೋಡಿ ಒಂದು ಲೆಹೆಂಗಾ ಖರೀದಿಸಿ ತಾವು ಕತ್ರಿನಾಳಂತೆ ಕಾಣಬೇಕೆಂದು ಬಯಸುತ್ತಾರೆ. ಆದರೆ ಸಮಸ್ಯೆಗೆ ಕಾರಣವಾಗಲಿದೆ…, ನೀವು ಯಾರನ್ನಾದರೂ ನೋಡಬಹುದು, ನೀವು ಅವರನ್ನು ಅನುಸರಿಸಬಹುದು, ಅವರನ್ನು ಉಲ್ಲೇಖಿಸಬಹುದು, ಆದರೆ ಇದು ನನಗೆ ಬೇಕು ಎಂದು ನೀವು ಹೇಳಲು ಸಾಧ್ಯವಿಲ್ಲ, ಏಕೆಂದರೆ ನೀವು ನಿಮ್ಮದೇ ಆದ ವ್ಯಕ್ತಿತ್ವವನ್ನು ಹೊಂದಿದ್ದೀರಿ ಮತ್ತು ಅದು ಕೊನೆಯಲ್ಲಿ ಕಂಡುಬರುತ್ತದೆ, ”ಎಂದು  ಡಾಲಿ ಜೈನ್‌ ಹೇಳುತ್ತಾರೆ.

ಸೀರೆಯನ್ನು ವಿವಿಧ ವಿಧಾನದಲ್ಲಿ ಉಡಿಸಿದ ಬಳಿಕ ಅವರು ಫೋಟೋ ಶೂಟ್‌ ಗಳನ್ನು ಮಾಡಿಸುತ್ತಾರೆ. ಜೈನ್ ಕೆಲವು ಪುರುಷರಿಗೂ ಸೀರೆಯನ್ನು ಉಡಿಸಿದ್ದಾರೆ.

ಡಾಲಿ ಜೈನ್ ಒಂದು ಸೀರೆ ಉಡಿಸಲು 35 ಸಾವಿರದಿಂದ 2 ಲಕ್ಷದವರೆಗೂ ಹಣವನ್ನು ತೆಗೆದುಕೊಳ್ಳುತ್ತಾರೆ.‌

-ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next